ಸುಂದರ ಹೆಂಡತಿ ಇದ್ದರೇ ಲಾಭ ಅಷ್ಟೇ ಅಲ್ಲ, ಚಾಣಕ್ಯನ ಪ್ರಕಾರ ನಷ್ಟವು ಕೂಡ ಇದೆ. ಅಸಲಿಗೆ ಚಾಣಕ್ಯ ಹೇಳಿರುವುದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬ ಪುರುಷನಿಗೂ ಕೂಡ ಸುಂದರ ಹುಡುಗಿ ತನ್ನ ಹೆಂಡತಿ ಆಗಬೇಕೆಂದು ಆಸೆ ಇರುತ್ತದೆ. ಕೇವಲ ಮದುವೆಯಾಗುವ ಗಂಡಿಗೆ ಮಾತ್ರವಲ್ಲದೆ ಆತನ ತಂದೆ-ತಾಯಿಯರಿಗೆ ಕೂಡ ತಮಗೆ ಸುಂದರವಾದ ಸೊಸೆ ಬೇಕು ಎನ್ನುವ ಆಸೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಸುಂದರವಾದ ಹೆಣ್ಣುಮಗಳು ತಮ್ಮ ಮನೆಗೆ ಸೊಸೆಯಾಗಿ ಬರಬೇಕು ಎಂದುಕೊಳ್ಳುವುದು ಶೋ ಆಫ್ ಆಗಿಬಿಟ್ಟಿದೆ. ಒಂದು ವೇಳೆ ನೀವು ಕೂಡ ಸುಂದರವಾದ ಹುಡುಗಿ ನಿಮ್ಮ ಹೆಂಡತಿಯಾಗಿ ಬರಬೇಕು ಎಂದು ಅಂದುಕೊಂಡಿದ್ದಾರೆ ಈ ಕುರಿತಂತೆ ನೀವು ಎರಡು ವಿಷಯಗಳಿಗೆ ಸನ್ನದ್ಧ ಆಗಿರಬೇಕು. ಇದರಲ್ಲಿ ಲಾಭ ಕೂಡ ಇದೆ ಹಾಗೂ ನಷ್ಟ ಕೂಡ ಇದೆ. ಹಾಗಿದ್ದರೆ ಎರಡನ್ನು ಕೂಡ ತಿಳಿಯೋಣ ಬನ್ನಿ.

ಮೊದಲಿಗೆ ಲಾಭದ ಕುರಿತಂತೆ ತಿಳಿಯೋಣ. ನಿಮಗೆಲ್ಲರಿಗೂ ಪುರುಷರ ಬಗ್ಗೆ ಗೊತ್ತೇ ಇರುತ್ತದೆ. ಸುಂದರ ಹುಡುಗಿಯೊಂದಿಗೆ ಮದುವೆ ನಿಶ್ಚಯ ವಾದರೆ ಕೂಡಲೇ ಅವರು ತಮ್ಮ ಹನಿಮೂನ್ ಕುರಿತಂತೆ ಯೋಚಿಸಲು ಪ್ರಾರಂಭಿಸುತ್ತಾರೆ. ಅಂದರೆ ಕೇವಲ ರೋಮ್ಯಾನ್ಸ್ ಬಗ್ಗೆ ಮಾತ್ರ ಈ ಸಂದರ್ಭದಲ್ಲಿ ಅವರು ಯೋಚಿಸುತ್ತಾರೆ.

ಇಂತಹ ಸುಂದರಿಯನ್ನು ಮದುವೆಯಾದ ನಂತರ ಪ್ರತಿಯೊಬ್ಬ ಗಂಡಿಗೂ ಕೂಡ ತನ್ನ ಮೇಲೆ ನನಗೆ ಹೆಮ್ಮೆ ಜಾಸ್ತಿಯಾಗುತ್ತದೆ. ಇನ್ನು ತನ್ನ ಸುಂದರಿ ಹೆಂಡತಿಯ ಜೊತೆಗೆ ಹೊರಗಡೆ ತಿರುಗಾಡಲು ಹೋದಾಗಲೂ ಕೂಡ ಜನರು ನನ್ನನ್ನು ನೋಡಿ ಹೊಟ್ಟೆಕಿಚ್ಚು ಪಡಲಿ ಎಂಬುದಾಗಿ ಆಶಿಸುತ್ತಾರೆ. ಇಷ್ಟೊಂದು ಚೆಂದದ ಚೆಂದುಳ್ಳಿ ಹುಡುಗಿಯನ್ನು ಮದುವೆಯಾಗಿರುವುದರಿಂದಾಗಿ ಸಂಬಂಧಿಕರು ಕೂಡ ನನ್ನನ್ನು ಹೊಗಳುತ್ತಾರೆ ಎಂಬುದಾಗಿ ಭಾವಿಸುತ್ತಾರೆ.

ಹೆಂಡತಿ ನೋಡಲು ಸುಂದರವಾಗಿ ರುವುದರಿಂದಾಗಿ ಅವಳ ಜೊತೆ ತೆಗೆದುಕೊಂಡಿರುವ ಫೋಟೋ ಕೂಡ ಚೆನ್ನಾಗಿ ಬರುತ್ತದೆ ಎಂಬುದಾಗಿ ಗಂಡ ಭಾವಿಸುತ್ತಾನೆ. ಈ ಕಾರಣದಿಂದಾಗಿ ಹೆಂಡತಿಯ ಜೊತೆಗೆ ಹಲವು ಬಾರಿ ಫೋಟೋಗಳನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಫೋಟೋ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದರಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ವ್ಯಾಲ್ಯೂ ಕೂಡ ಹೆಚ್ಚುತ್ತದೆ ಎಂಬುದಾಗಿ ಅವರು ಭಾವಿಸಿರುತ್ತಾರೆ.

ಸುಂದರ ಹೆಂಡತಿಯನ್ನು ಹೊಂದಿರುವುದರಿಂದಾಗಿ ಇಷ್ಟೊಂದು ಲಾಭವಾಗುತ್ತಿದೆ ಎಂದರೆ ನಷ್ಟ ಇಲ್ಲ ಎಂದಲ್ಲ. ನಷ್ಟವೂ ಕೂಡ ಇದೆ. ಹಾಗಿದ್ದರೆ ಆ ನಷ್ಟಗಳು ಯಾವುವು ಎನ್ನುವುದನ್ನು ತಪ್ಪದೇ ತಿಳಿಯೋಣ ಬನ್ನಿ. ತನ್ನ ಸುಂದರ ಹೆಂಡತಿಯೊಂದಿಗೆ ಗಂಡ ಹೊರಗೆ ಹೋದಾಗಲೆಲ್ಲ ಆತನ ಹೆಂಡತಿ ಮೇಲೆಯೇ ಎಲ್ಲರ ಕಣ್ಣು ಇರುತ್ತದೆ. ಎಲ್ಲರೂ ಅವಳನ್ನು ಗುರಾಯಿಸುವುದಕ್ಕೆ ಪ್ರಾರಂಭಿಸುತ್ತಾರೆ. ಹೀಗಾಗಿ ಗಂಡನಿಗೆ ತನ್ನ ಹೆಂಡತಿಯ ಮೇಲೆ ಬೇರೆಯವರು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂಬ ಇನ್ಸೆಕ್ಯೂರಿಟಿ ಫೀಲಿಂಗ್ ಬರಲು ಪ್ರಾರಂಭವಾಗುತ್ತದೆ. ಆಗ ಇದು ಆತನ ಮಾನಸಿಕ ಸ್ಥಿತಿಯ ಮೇಲೆ ಕೂಡ ಪರಿಣಾಮ ಬಿಡಬಹುದಾದಂತಹ ಸಾಧ್ಯತೆ ಇರುತ್ತದೆ.

ಇದಕ್ಕಿಂತಲೂ ಪ್ರಮುಖವಾಗಿ ಒಂದು ವೇಳೆ ದಂಪತಿಗಳಲ್ಲಿ ಗಂಡ ಸಾಮಾನ್ಯವಾಗಿ ಕಾಣಿಸುತ್ತಿದ್ದು ಹೆಂಡತಿ ತ್ರಿಲೋಕ ಸುಂದರಿಯಂತೆ ಕಾಣಿಸುತ್ತಿದ್ದರೆ ಮುಗಿದೇಹೋಯಿತು. ಹೌದು ಈ ಸಂದರ್ಭದಲ್ಲಿ ತನ್ನ ಗಂಡನನ್ನು ಸಂಪೂರ್ಣವಾಗಿ ಕಂಟ್ರೋಲ್ ಮಾಡಲು ಹೆಂಡತಿ ಪ್ರಯತ್ನಿಸುತ್ತಾಳೆ. ಗಂಡನು ಕೂಡ ಹೆಂಡತಿಯ ಮಾತನ್ನು ಕೇಳಿಸಿಕೊಂಡು ಸುಮ್ಮನಿದ್ದುಬಿಡುತ್ತಾರೆ. ಯಾಕೆಂದರೆ ಇಷ್ಟೊಂದು ಕಷ್ಟಪಟ್ಟು ಸುಂದರ ಹೆಂಡತಿ ಸಿಕ್ಕಿದ್ದಾಳೆ ಕೈ ತಪ್ಪಿ ಹೋಗಬಹುದು ಎನ್ನುವ ಚಿಂತೆ ಆತನಲ್ಲಿ ಇರುತ್ತದೆ.

ಇದಕ್ಕಿಂತಲೂ ಕೆಟ್ಟ ಪರಿಸ್ಥಿತಿ ಇನ್ನೊಂದೇನೆಂದರೆ ಒಂದು ವೇಳೆ ಗಂಡ ಹೆಂಡತಿ ಗಿಂತ ನೋಡಲು ಚೆನ್ನಾಗಿಲ್ಲ ಎಂದರೆ ಜನರು ಟೀಕೆಯನ್ನು ಕೂಡ ಮಾಡಲು ಆರಂಭಿಸುತ್ತಾರೆ. ಹೌದು ಅದೇನೆಂದರೆ ಮಂಗನ ಕೈಲಿ ಮಾಣಿಕ್ಯ ಎಂಬುದಾಗಿ ರೇಗಿಸಲು ಆರಂಭಿಸುತ್ತಾರೆ. ಹೀಗಾಗಿ ಅತಿ ಸುಂದರಿ ಹೆಂಡತಿಯನ್ನು ಹೊಂದುವುದರಲ್ಲಿ ಲಾಭ ಎಷ್ಟಿದೆಯೋ ಅದಕ್ಕಿಂತ ಹೆಚ್ಚಾಗಿ ನಷ್ಟವು ಕೂಡ ಇದೆ. ನಮ್ಮ ಪ್ರಕಾರ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಅಂದರೆ ಗುಣನಡತೆ ಮುಖ್ಯವಾಗಿರುತ್ತದೆ ಎಂಬುದಾಗಿ ಹೇಳುತ್ತೇವೆ. ಆದರೆ ಇಂದಿನ ಕಾಲದಲ್ಲಿ ಇದರ ಕುರಿತಂತೆ ಯಾರೂ ಕೂಡ ಮಾತನಾಡಲು ಹೋಗುವುದಿಲ್ಲ.