ಭಾರತ ತಂಡಕ್ಕೆ ಮತ್ತೊಂದು ಕಹಿ ಸುದ್ದಿ ನೀಡಿದ ಕೆ ಎಲ್ ರಾಹುಲ್. ಈ ರೀತಿ ಆದರೆ ನಿಮ್ಮ ಕಥೆ ಮುಂದೆ ಹೇಗೆ ಎಂದ ಫ್ಯಾನ್ಸ್. ಯಾಕೆ ಗೊತ್ತೇ?

ನಮ್ಮ ಕರ್ನಾಟಕದ ಹುಡುಗ ಕೆ.ಎಲ್ ರಾಹುಲ್ ಅವರು ಅದ್ಭುತವಾದ ಬ್ಯಾಟ್ಸ್ಮನ್ ಎನ್ನುವುದನ್ನು ನಾವೆಲ್ಲರೂ ಈಗಾಗಲೇ ಹಲವು ಪಂದ್ಯಗಳಲ್ಲಿ ನೋಡಿದ್ದೇವೆ. ಐಪಿಎಲ್ ನಲ್ಲಿ ಅದ್ಭುತವಾದ ಪ್ರದರ್ಶನ ನೀಡಿ ಅತಿಹೆಚ್ಚು ರನ್ ಗಳಿಸುವ ಆಟಗಾರರಲ್ಲಿ ರಾಹುಲ್ ಸಹ ಒಬ್ಬರಾಗಿದ್ದಾರೆ. ಕೆ.ಎಲ್.ರಾಹುಲ್ ಅವರು ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಭಾರತ ವರ್ಸಸ್ ಸೌತ್ ಆಫ್ರಿಕಾ ಸರಣಿ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈಗ ರಾಹುಲ್ ಅವರು ಅಭಿಮಾನಿಗಳಿಗೆ ಮತ್ತೊಂದು ಬೇಸರದ ಸುದ್ದಿಯನ್ನು ನೀಡಿದ್ದಾರೆ.

ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಕೆ.ಎಲ್.ರಾಹುಲ್ ಅವರು ಜುಲೈ 1ರಿಂದ 5ರ ವರೆಗೂ ಇಂಗ್ಲೆಂಡ್ ನಲ್ಲಿ ನಡೆಯುವ ಎರಡನೇ ಸೀರೀಸ್ ಪಂದ್ಯದಲ್ಲಿ ಕೂಡ ರಾಹುಲ್ ಅವರು ಆಡಲು ಸಾಧ್ಯವಾಗುವುದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ. ರಾಹುಲ್ ಅವರಿಗೆ ಸ್ವಲ್ಪ ಮಟ್ಟಿಗೆ ಅನಾರೋಗ್ಯ ಇತ್ತು, ಅದರಿಂದ ಇನ್ನು ಪೂರ್ತಿಯಾಗಿ ಗುಣ ಆಗದೆ ಇರುವ ಕಾರಣ ರಾಹುಲ್ ಅವರು ಮುಂದಿನ ಸರಣಿ ಪಂದ್ಯಗಳಲ್ಲು ಸಹ ಭಾಗವಹಿಸುವುದು ಡೌಟ್ ಎನ್ನುವ ಮಾತುಗಳು ಕೇಳಿಬರುತ್ತಿದೆ. ರಾಹುಲ್ ಅವರನ್ನು ಟೀಮ್ ಇಂಡಿಯಾದ ಸ್ಕಿಪ್ಪರ್ ಎಂದು ಕರೆಯಲಾಗುತ್ತಿದ್ದು, ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ರಾಹುಲ್ ಅವರನ್ನು ಸ್ಕಿಪ್ಪರ್ ಎಂದು ಕರೆಯಲಾಗುತ್ತಿತ್ತು. ಈಗಾಗಲೇ ಮುಂಬರುವ ಸರಣಿ ಪಂದ್ಯಗಳಿಗೆ 17 ಆಟಗಾರರ ಟೀಮ್ ಸ್ಕ್ವಾಡ್ ನಲ್ಲಿ ಕೆ.ಎಲ್.ರಾಹುಲ್ ಅವರ ಹೆಸರನ್ನು ವೈಸ್ ಕ್ಯಾಪ್ಟನ್ ಆಗಿ ಹೆಸರು ಅನೌನ್ಸ್ ಆಗಿದೆ, ಈಗ ಜುಲೈ ನಲ್ಲಿ ನಡೆಯಲಿರುವ ಇಂಗ್ಲೆಂಡ್ ಸೀರೀಸ್ ಗಳು ಕಳೆದ ವರ್ಷ ಕೋವಿಡ್ ಇಂದಾಗಿ ನಿಂತಿತ್ತು.

ಕ್ರಿಕ್ ಬಜ್ ನೀಡಿರುವ ವರದಿಯ ಪ್ರಕಾರ ಕೆ.ಎಲ್.ರಾಹುಲ್ ಅವರು ಇನ್ನು ಎಷ್ಟು ದಿನಗಳ ಕಲಾ ಆಡುವುದಿಲ್ಲ ಎನ್ನುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ.. ಬೆಂಗಳೂರಿನಲ್ಲಿರುವ ನ್ಯಾಶನಲ್ ಕ್ರಿಕೆಟ್ ಅಕಾಡೆಮಿ ಗೆ ಕೆ.ಎಲ್.ರಾಹುಲ್ ಅವರು ರಿಪೋರ್ಟ್ ಮಾಡಿದ್ದಾರೆ ಎನ್ನಲಾಗಿದೆ. ರಾಹುಲ್ ಅವರು ಇಂಗ್ಲೆಂಡ್ ಪಂದ್ಯಗಳನ್ನು ಆಡುತ್ತಾರೋ ಇಲ್ಲವೋ ಎನ್ನುವ ಹಗ್ಗೆ ಇನ್ನು ಖಚಿತ ಮಾಹಿತಿ ಸಿಕ್ಕಿಲ್ಲ. ಜೂನ್ 16ರಂದು 17 ಆಟಗಾರರ ಸ್ಕ್ವಾಡ್, ರಾಹುಲ್ ದ್ರಾವಿಡ್ ಅವರು, ಹಾಗೂ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅವರು ಹೋಗಲಿದ್ದಾರೆ. ಈಗ ಬಿಸಿಸಿಐ ಬಿಡುಗಡೆ ಮಾಡಿರುವ ಲಿಸ್ಟ್ ನಲ್ಲಿ ರೋಹಿತ್ ಶರ್ಮಾ (ಕ್ಯಾಪ್ಟನ್), ಕೆಎಲ್ ರಾಹುಲ್ (ವೈಸ್ ಕ್ಯಾಪ್ಟನ್) ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (WK), ಕೆಎಸ್ ಭರತ್ (WK), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ ಇದ್ದಾರೆ.