ಇತ್ತೀಚಿಗೆ ತಾಯಿಯಾದ ಖ್ಯಾತ ನಟಿ, ಸದಾ ದೇಶದ ಪರ ನಿಲ್ಲುವ ಪ್ರಣೀತಾ, ತನ್ನ ತಾಯಿಗೆ ವಿಶೇಷ ಧನ್ಯವಾದ ತಿಳಿಸಿದ್ದು ಯಾಕೆ ಗೊತ್ತೇ??

ಕರ್ನಾಟಕದಲ್ಲಿ ಹುಟ್ಟಿ, ದಕ್ಷಿಣ ಭಾರತ ಸೇರಿದಂತೆ, ಬಾಲಿವುಡ್ ನಲ್ಲೂ ಮಿಂಚಿದ ನಟಿ ಪ್ರಣೀತಾ ಸುಭಾಷ್, ಇವರು ನಟನೆಯ ಜೊತೆಗೆ ಹಲವಾರು ರೀತಿಯಲ್ಲಿ ಸಾಮಾಜ ಸೇವೆಗಳನ್ನು ಮಾಡುತ್ತಾರೆ. ಪ್ರಣೀತಾ ಫೌಂಡೇಷನ್ಸ್ ಹೆಸರಿನಲ್ಲಿ ತಮ್ಮದೇ ಆದ ಸಂಸ್ಥೆಯೊಂದನ್ನು ಸ್ಥಾಪಿಸಿರುವ ನಟಿ ಪ್ರಣೀತಾ, ತಮ್ಮ ಸಂಸ್ಥೆಯ ಮೂಲಕ ಕೆಲವು ಶಾಲೆಗಳನ್ನು ದತ್ತು ಪಡೆದು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದಾರೆ. ಅಲ್ಲದೆ, ಲಾಕ್ ಡೌನ್ ಶುರುವಾದಾಗಿನಿಂದಲೂ ಕಷ್ಟದಲ್ಲಿರುವ ಹಲವಾರು ಜನರಿಗೆ ಪ್ರತಿದಿನ ರೇಷನ್ ಕಿಟ್ ವಿತರಿಸುತ್ತಿದ್ದರು. ಪೊಲೀಸರ ಆರೋಗ್ಯದ ಮೇಲೂ ಕಾಳಜಿ ಹೊಂದಿದ್ದರು, ಪೊಲೀಸರಿಗೂ ಸಹ ಮಾಸ್ಕ್ ಮತ್ತು ಸ್ಯಾನಿಟೈಸರ್ ಹಂಚಿದ್ದರು ಪ್ರಣೀತಾ.

ಕಳೆದ ವರ್ಷ ಮದುವೆಯಾಗಿ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದರು ನಟಿ ಪ್ರಣೀತಾ, ಈ ವರ್ಷದ ಆರಂಭದಲ್ಲಿ, ತಮ್ಮ ಪತಿಯ ಹುಟ್ಟುಹಬ್ಬದ ದಿನ ತಾವಿಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಸಿಹಿ ಸುದ್ದಿಯನ್ನು ನಟಿ ಪ್ರಣೀತಾ ಅವರು ಹಂಚಿಕೊಂಡಿದ್ದದು. ಇತ್ತೀಚೆಗೆ ಮುದ್ದು ಮಗಳಿಗೆ ಜನ್ಮ ನೀಡಿದ್ದಾರೆ ನಟಿ ಪ್ರಣೀತಾ, ತಮ್ಮ ಮುದ್ದು ಮಗುವಿನ ಫೋಟೋವನ್ನು ಸಹ ಪ್ರಣೀತಾ ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಪ್ರಣೀತಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ತಾಯಿಗೆ ಧನ್ಯವಾದ ತಿಳಿಸಿದ್ದಾರೆ. ಅದಕ್ಕೆ ಒಂದು ಮುಖ್ಯವಾದ ಕಾರಣವನ್ನು ಸಹ ತಿಳಿಸಿದ್ದಾರೆ.

ಪ್ರಣೀತಾ ಅವರ ತಾಯಿ ಗೈನಕಾಲಜಿಸ್ಟ್ ಆಗಿರುವ ಡಾ.ಜಯಶ್ರೀ, ಮಗಳ ಹೆರಿಗೆಯನ್ನು ಸ್ವತಃ ತಾಯಿಯೇ ಮಾಡಿಸಿದ್ದಾರೆ. ಸಾಮಾನ್ಯವಾಗಿ ತಾಯಿ ಗೈನಕಾಲಜಿಸ್ಟ್ ಆಗಿದ್ದರೆ, ಮಕ್ಕಳಿಗೆ ಹೆರಿಗೆ ಮಾಡಿಸುವುದು ಸುಲಭವಲ್ಲ, ಹೆರಿಗೆಯ ಸೂಕ್ಷ್ಮಗಳು ಅವರಿಗೆ ಗೊತ್ತಿರುವ ಕಾರಣ, ಸ್ವಂತ ಮಕ್ಕಳ ಹೆರಿಗೆ ಮಾಡಿಸುವುದು ಕಷ್ಟವಾಗುತ್ತದೆ, ಅದು ಸವಾಲಿನ ವಿಷಯವು ಹೌದು. ಭಾವನಾತ್ಮಕವಾಗಿ ಅದು ಸಾಧ್ಯವಿಲ್ಲ. ಹಾಗಿದ್ದರೂ ಸಹ ತಮ್ಮ ತಾಯಿ ಯಾವುದೇ ತೊಂದರೆ ಆಗದಂತೆ ಹೆರಿಗೆ ಆಗುವ ಹಾಗೆ ನೋಡಿಕೊಂಡಿರುವುದಕ್ಕೆ ಕೆಲವು ಸಾಲುಗಳನ್ನು ಬರೆದು ತಮ್ಮ ತಾಯಿಗೆ ಧನ್ಯವಾದ ತಿಳಿಸಿದ್ದಾರೆ ನಟಿ ಪ್ರಣೀತಾ. ಅಭಿಮಾನಿಗಳು ಪ್ರಣಿತಾ ಅವರಿಗೆ ಮಗು ಆಗಿರುವುದಕ್ಕೆ ಸೋಷಿಯಲ್ ಮೀಡಿಯಾ ಮೂಲಕ ವಿಶ್ ಮಾಡುತ್ತಿದ್ದಾರೆ