ಇದಪ್ಪ ಬಂಪರ್ ಅಂದ್ರೆ, ಕನ್ನಡದ ಯಶ್ ರವರನ್ನು ಹುಡುಕಿಕೊಂಡು ಬಂದ ತೆಲುಗು ನಿರ್ಮಾಪಕ. ಹೊಸ ಸಿನಿಮಾ ಹೇಗಿರಲಿದೆ ಗೊತ್ತೇ?

ಕೆಜಿಎಫ್ ಚಾಪ್ಟರ್1 ಮತ್ತು ಕೆಜಿಎಫ್ ಚಾಪ್ಟರ್2 ಸಿನಿಮಾ ಇಂದ ಯಶ್ ಅವರ ಜನಪ್ರಿಯತೆ ಎಷ್ಟರ ಮಟ್ಟಿಗೆ ಇದೆ ಎಂದು ಎಲ್ಲರೂ ನೋಡಿದ್ದೇವೆ. ನಮ್ಮ ಕನ್ನಡ ನಟನೊಬ್ಬನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ. ಕೆಜಿಎಫ್ ಚಾಪ್ಟರ್2 ಬಳಿಕ ಯಶ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಎಲ್ಲರಲ್ಲು ಇತ್ತು. ಆದರೆ ಇನ್ನೂ ಆ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಯಶ್ ಅವರ ಮುಂದಿನ ಸಿನಿಮಾ, ಮಫ್ತಿ ಸಿನಿಮಾ ಖ್ಯಾತಿಯ ನಿರ್ದೇಶಕ ನರ್ತನ್ ಅವರೊಡನೆ ಎನ್ನಲಾಗಿತ್ತು.

ಆದರೆ ಈಗ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ಬೆರೆಯದ್ದೇ ಮಾತುಗಳು ಕೇಳುಬರುತ್ತಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಯಶ್ ಅವರ ಮುಂದಿನ ಸಿನಿಮಾ ನಿರ್ಮಾಣ ಮಾಡಲು ಟಾಲಿವುಡ್ ನ ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ರೆಡಿ ಇದ್ದಾರೆ ಎನ್ನಲಾಗುತ್ತಿದೆ. ದಿಲ್ ರಾಜು ಅವರು ಈಗಾಗಲೇ ಯಶ್ ಅವರಿಗೆ 100 ಕೋಟಿ ಸಂಭಾವನೆ ನೀಡುವುದಾಗಿ ಮಾತು ಕತೆ ನಡೆಸಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ. ಇನ್ನು ಯಶ್ ಅವರ ಕಡೆಯಿಂದ ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನು ಲಭ್ಯವಾಗಿಲ್ಲ. ಅಂದಹಾಗೆ ಈ ಸಿನಿಮಾ ದ್ವಿಭಾಷೆಯಲ್ಲಿ, ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆ ಆಗುತ್ತದೆ ಎನ್ನುವ ಮಾತುಗಳು ಸಧ್ಯಕ್ಕೆ ಸದ್ದು ಮಾಡುತ್ತಿದೆ. ಯಾಕೆಂದರೆ ಯಶ್ ಅವರು ಇಲ್ಲಿಯವರೆಗೂ ಪ್ಯಾನ್ ಇಂಡಿಯಾ ಸಿನಿಮಾ ಸೈನ್ ಮಾಡಿದ್ದಾರೆ ಎನ್ನುವ ಬಗ್ಗೆ ಯಾವುದೇ ಸುದ್ದಿ ಕೇಳಿಬಂದಿಲ್ಲ.

ಯಶ್ ಅವರ ಜೊತೆಗಿನ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಿದ್ದಾರಂತೆ ದಿಲ್ ರಾಜು ಅವರು. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಪ್ಲಾನ್ ನಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಆದರೆ ಈ ವಿಚಾರದ ಬಗ್ಗೆ ಅಧಿಕೃತ ಮಾಹಿತಿಗಾಗಿ ಕಾಯಬೇಕಿದೆ. ದಿಲ್ ರಾಜ್ ಅವರು ಹಲವು ಸಿನಿಮಾಗಳನ್ನು ಈಗ ನಿರ್ಮಾಣ ಮಾಡುತ್ತಿದ್ದಾರೆ. ತೆಲುಗಿನ ಜೆರ್ಸಿ ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡುವ ಮೂಲಕ ದಿಲ್ ರಾಜು ಅವರು ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ತಮಿಳು ಚಿತ್ರರಂಗದ ದಳಪತಿ ವಿಜಯ್ ಅವರೊಡನೆ ಸಿನಿಮಾ ಮಾಡುತ್ತಿದ್ದು, ತಮಿಳು ಮತ್ತು ತೆಲುಗಿನಲ್ಲಿ ಆ ಸಿನಿಮಾ ತಯಾರಾಗುತ್ತಿದೆ. ಇದರ ನಡುವೆಯೇ ಯಶ್ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡುತ್ತಾರೆ ಎನ್ನುವ ಗಾಸಿಪ್ ಈಗ ಜೋರಾಗಿಯೇ ಚರ್ಚೆಯಾಗುತ್ತಿದೆ. ಇದು ನಿಜವೋ ಸುಳ್ಳೋ ಎಂದು ತಿಳಿಯಲು ಅಧಿಕೃತ ಮಾಹಿತಿಗಾಗಿ ಕಾಯಬೇಕಿದೆ.