ಒಲವಿನ ನಿಲ್ದಾಣದ ಮೊದಲ ಎಪಿಸೋಡ್ ನಲ್ಲಿಯೇ ಹೃದಯ ಕದ್ದಿರುವ ಚೆಲುವೆ ಹಲವಾರು ಆಡಿಷನ್ ನಲ್ಲಿ ರಿಜೆಕ್ಟ್ ಆಗಲು ಕಾರಣ ಏನಾಗಿತ್ತು ಗೊತ್ತೇ??

ಕನ್ನಡ ಧಾರವಾಹಿ ಲೋಕಕ್ಕೆ ಈಗ ಒಲವಿನ ನಿಲ್ದಾಣ ಎನ್ನುವ ಹೊಸ ಧಾರವಾಹಿ ಶುರುವಾಗುತ್ತಿದೆ. ಈ ಧಾರವಾಹಿ ಮೂಲಕ ಅಮಿತಾ ಸದಾಶಿವ ಹೆಸರಿನ ಹೊಸ ಹುಡುಗಿ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಧಾರವಾಹಿ ಒಂದು ಸುಂದರವಾದ ಪ್ರೇಮಕಥೆ ಆಗಿದೆ. ಬೆಂಗಳೂರು ಹುಡುಗ ಮತ್ತು ಮಲೆನಾಡ ಹುಡುಗಿಯ ನಡುವೆ ನಡೆಯುವ ಮಧುರವಾದ ಕಥೆ. ಈ ಧಾರವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿರುವ ಅಮಿತಾ ಸದಾಶಿವ ಅವರ ಬಗ್ಗೆ ತಿಳಿಯಲು ಕೆಲವು ಆಸಕ್ತಿಕರ ವಿಚಾರಗಳಿವೆ. ಇವರು ಮೂಲತಃ ತುಳುನಾಡಿನ ಹುಡುಗಿ.

ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದಿರುವ ಇವರು, ಯಾರಾದರೂ ಏನು ಓದಿದ್ದೀರಾ ಎಂದು ಕೇಳಿದರೆ, 10ನೇ ತರಗತಿ ಫೇಲ್ ಎಂದು ತಮಾಷೆ ಮಾಡುತ್ತಾರೆ. ಜೊತೆಗೆ, ಭರತನಾಟ್ಯಮ್ ನಲ್ಲಿ ಪದವಿ ಪಡೆದು, ದೇಶದ ಹಲವೆಡೆ ಪ್ರದರ್ಶನ ನೀಡಿದ್ದಾರೆ. ಅಮಿತಾ ಅವರದ್ದು ಅಚ್ಚ ತುಳುನಾಡಿನ ಕನ್ನಡ ಆಗಿದೆ. ಇವರ ಮಾತೃಭಾಷೆ ತುಳು ಆದರೂ, ಅಮಿತಾ ಅವರ ತಂದೆಗೆ ಮಗಳು ಕನ್ನಡದಲ್ಲಿ ಎಂಎ ಮಾಡಬೇಕು ಎನ್ನುವ ಆಸೆ ಇದ್ದ ಕಾರಣ, ಮನೆಯಲ್ಲಿ ಕನ್ನಡ ಭಾಷೆಯನ್ನೆ ಮಾತನಾಡುತ್ತಿದ್ದರಂತೆ. 17ನೇ ವಯಸ್ಸಿಗೆ ಬಾಂಬೆಗೆ ಹೋಗಿ ಅಲ್ಲಿ ಮಾಡೆಲಿಂಗ್ ಕಲಿತಿದ್ದಾರೆ ಅಮಿತಾ. ಬಾಂಬೆ ರಂಗಭೂಮಿಯಲ್ಲಿ ಕಲಿತಿದ್ದಾರೆ. ಕೋವಿಡ್ ಬಂದು, ಎಲ್ಲಾ ಪ್ರಾಜೆಕ್ಟ್ ಗಳಿಗೂ ತೊಂದರೆಯಾದ ಕಾರಣ, ಅಮಿತಾ ಸದಾಶಿವ ಅವರು, ಮುಂಬೈನಲ್ಲಿ ರೂಮ್ ಬಾಡಿಗೆ ಕಟ್ಟಲಾಗದೆ, ಮತ್ತೆ ಮಂಗಳೂರಿಗೆ ಬಂದರು.

ನಂತರ ಬೆಂಗಳೂರಿಗೆ ಬಂದು, ಆಡಿಷನ್ ಗಳನ್ನು ಕೊಡಲು ಶುರು ಮಾಡಿದರು, ಆಡಿಷನ್ ನಲ್ಲಿ ಸೆಲೆಕ್ಟ್ ಆದರೂ ಸಹ ಇವರಿಗೆ ತೊಂದರೆ ಆಗಿದ್ದು ಭಾಷೆ. ಅಮಿತಾ ಮಾತನಾಡುತ್ತಾ ಇದ್ದದ್ದು ಮಂಗಳೂರಿನ ಕನ್ನಡ ಭಾಷೆ, ಆದರೆ ಸಿನಿಮಾ ಅಥವಾ ಧಾರವಾಹಿಗೆ ಬೆಂಗಳೂರು ಶೈಲಿಯ ಕನ್ನಡ ಮಾತನಾಡಬೇಕು ಎನ್ನುವ ಕಾರಣದಿಂದ ಹಲವು ಆಡಿಷನ್ ಗಳಲ್ಲಿ ರಿಜೆಕ್ಟ್ ಆಗಿದ್ದರಂತೆ ಅಮಿತಾ. ಕೊನೆಗೆ ಶ್ರುತಿ ನಾಯ್ಡು ಅವರ ಕಂಪನಿಯ ಆಡಿಷನ್ ನಲ್ಲಿ ಪಾಲ್ಗೊಂಡು, ಸೆಲೆಕ್ಟ್ ಆದರಂತೆ, ರಮೇಶ್ ಇಂದಿರಾ ಅವರು ಹಾಗೂ ಶ್ರುತಿ ನಾಯ್ಡು ಅವರು, ಇಲ್ಲಿನ ಭಾಷೆಯನ್ನು ನಾವು ಕಲಿಸುತ್ತೇವೆ ಎಂದು ಹೇಳಿ, ಈಗ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಡೈಲಾಗ್ ಹೇಳುವಾಗ ಒಂದು ವೇಳೆ ಮಂಗಳೂರು ಕನ್ನಡ ಬಂದರೆ, ಖ್ಯಾತ ನಟ ಮಂಡ್ಯ ರಮೇಶ್ ಅವರು ಎಚ್ಚರಿಕೆ ನೀಡುತ್ತಾರಂತೆ. ಭಾಷೆಯನ್ನು ಒಂದು ಸಮಸ್ಯೆ ಆಗಿ ತೆಗೆದುಕೊಳ್ಳದೆ ಚೆನ್ನಾಗಿ ಕಲಿತು ಇಂದು ಧಾರವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಅಮಿತಾ ಸದಾಶಿವ.