ಅದೃಷ್ಟವನ್ನು ಆಕರ್ಷಿಸಲು ಯಾವ ವಾರದ ದಿನ ಏನೇನು ಮಾಡಬೇಕು ಗೊತ್ತಾ, ಹೀಗೆ ಮಾಡಿದರೆ ಅದೃಷ್ಟ ನಿಮ್ಮ ಬಳಿ ಬಂದು ಬೀಳುತ್ತೆ??

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರು ಕೂಡ ತಮ್ಮ ಜೀವನದಲ್ಲಿ ಅದೃಷ್ಟ ಇರಬೇಕು ಎಂಬುದಾಗಿ ಭಾವಿಸುತ್ತಾರೆ. ಅದೃಷ್ಟವಂತ ಇದ್ದರೆ ಸಾಕು ಯಾವುದೇ ಕೆಲಸವನ್ನಾಗಲಿ ಎಷ್ಟೇ ಕಷ್ಟ ಬಂದರೂ ಸಾಧಿಸಿ ಜೀವನದಲ್ಲಿ ಯಶಸ್ವಿಯಾಗಬಹುದು ಎಂಬ ಕಲ್ಪನೆಯಲ್ಲಿ ಎಲ್ಲರೂ ಇರುತ್ತಾರೆ. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ವಾರದಲ್ಲಿ ಏನು ಮಾಡಿದರೆ ಅದೃಷ್ಟ ಸಿಗುತ್ತದೆ ಎಂಬುದನ್ನು ಉಲ್ಲೇಖಿಸಲಾಗಿದೆ. ಹಾಗಿದ್ದರೆ ಜ್ಯೋತಿಷ್ಯಶಾಸ್ತ್ರದಲ್ಲಿ ಅದೃಷ್ಟ ಪಡೆಯಲು ಯಾವ ವಾರದಲ್ಲಿ ಏನು ಮಾಡಬೇಕು ಎಂಬುದನ್ನು ಸವಿವರವಾಗಿ ತಿಳಿಯೋಣ.

ಸೋಮವಾರ; ಇದು ವಾರದ ಮೊದಲ ದಿನವಾಗಿದ್ದು ಜ್ಯೋತಿಷ್ಯಾಸ್ತ್ರದ ಪ್ರಕಾರ ಈ ವಾರವನ್ನು ಶಿವನ ವಾರ ಎಂಬುದಾಗಿ ಪರಿಗಣಿಸಲಾಗುತ್ತದೆ. ಇದಕ್ಕಾಗಿ ನೀವು ಸೋಮವಾರ ಬೆಳಗ್ಗೆ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಬೇಕು. ವಿತ್ತೀಯ ಚಟುವಟಿಕೆಗಳಿಗೆ ಇದೊಂದು ಉತ್ತಮ ದಿನವಾಗಿದೆ. ಈ ದಿನ ಕಪ್ಪು ಬಟ್ಟೆಗಳನ್ನು ಧರಿಸುವುದು ಉತ್ತಮವಲ್ಲ ಕೇವಲ ಬಿಳಿ ಬಟ್ಟೆಯನ್ನು ಅದೃಷ್ಟ ಕ್ಕಾಗಿ ಧರಿಸಿ. ಈ ದಿನ ಮನೆಯಿಂದ ಹೊರಡುವಾಗ ಒಂದು ಲೋಟ ಹಾಲನ್ನು ಮರೆಯದೆ ಕುಡಿಯಿರಿ. ಜೇನುತುಪ್ಪ ಹಾಗೂ ಸೌತೆಕಾಯಿ ಸೇವನೆ ಮಾಡಿ ಮತ್ತು ಮನೆಯಿಂದ ಹೊರಡುವ ಮೊದಲು ಕನ್ನಡಿಯಲ್ಲಿ ನಿಮ್ಮ ಪ್ರತಿಬಿಂಬವನ್ನು ನೋಡಿ.

ಮಂಗಳವಾರ; ಮಂಗಳವಾರದ ದಿನವನ್ನು ಶಿವ-ಪಾರ್ವತಿಯರ ಮುದ್ದು ಮಗನಾಗಿರುವ ಕಾರ್ತಿಕೇಯನ ದಿನವೆಂದು ಭಾವಿಸಲಾಗುತ್ತದೆ. ಈ ದಿನವನ್ನು ಕಾರ್ಥಿಕೆಯ ಹಾಗೂ ಆಂಜನೇಯನ ಪೂಜೆಯ ಮೂಲಕ ಪ್ರಾರಂಭಿಸಿ. ಅಡೆತಡೆಗಳನ್ನು ನಿವಾರಿಸಲು ಈ ದಿನ ನೀವು ಕೆಂಪು ಬಟ್ಟೆಯನ್ನು ಧರಿಸಿ. ಬಡವರಿಗೆ ಈ ದಿನ ಹಣ್ಣು-ಹಂಪಲುಗಳನ್ನು ದಾನ ಮಾಡಿ. ಸುಟ್ಟ ಬದನೆ ಅಥವಾ ಆಲೂಗಡ್ಡೆಯನ್ನು ಸೇವಿಸುವ ಮೂಲಕ ನೀವು ನಿಮ್ಮಿಂದ ನಕರಾತ್ಮಕ ಶಕ್ತಿಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ. ಮನೆಯಿಂದ ಹೊರಡುವಾಗ ಹಸಿರು ಕೊತ್ತುಂಬರಿಸೊಪ್ಪು ಸೇವಿಸಿ.

ಬುಧವಾರ; ಇದು ಗಣಪನ ವಿಶೇಷ ದಿನ ಎಂದು ಭಾವಿಸಲಾಗುತ್ತದೆ. ಈದಿನ ಮುಂಜಾನೆಯ ಗಣಪನನ್ನು ಆರಾಧಿಸಿ. ಪ್ರೀತಿ ಪ್ರಣಯಕ್ಕೆ ಸರಿಯಾದ ದಿನ. ಮನೆಯಿಂದ ಹೊರಡುವ ಮುನ್ನ ಸಿಹಿ ತಿನ್ನಿ. ನಾಲ್ಕು ಚಕ್ರದ ವಾಹನಗಳನ್ನು ಪ್ರಯಾಣಕ್ಕಾಗಿ ಬಳಸಬೇಡಿ. ಬೀನ್ಸ್ ತಿನ್ನುವ ಮೂಲಕ ಉತ್ತಮ ಫಲಿತಾಂಶವನ್ನು ಸಾಧಿಸಬಹುದಾಗಿದೆ.

ಗುರುವಾರ; ಇದು ವಿಷ್ಣುವಿನ ದಿನವಾಗಿದ್ದು ಆದಷ್ಟು ಮುಂಜಾವಿನಲ್ಲಿ ದೇವಸ್ಥಾನಕ್ಕೆ ಹೋಗಿ ವಿಷ್ಣುವಿನ ಪೂಜೆ ಮಾಡಿ ಆಶೀರ್ವಾದಕ್ಕೆ ಪಾತ್ರರಾಗಿ. ಗುರುವಾರದ ದಿನ ಆದಷ್ಟು ಹಳದಿ ಬಣ್ಣದ ಬಟ್ಟೆಯನ್ನು ಹಾಕಿಕೊಂಡು ಓಡಾಡಿ. ನೀವು ಕೆಲಸ ಮಾಡುವ ಕಚೇರಿಯಲ್ಲಿ ಲಕ್ಷ್ಮೀದೇವಿಯ ಚಿಕ್ಕ ಮೂರ್ತಿಯನ್ನು ಇಡಿ. ಮನೆಯಿಂದ ಹೊರಡುವ ಮುನ್ನ ಸಾಸಿವೆಯನ್ನು ಯಾವುದಾದರೂ ರೂಪದಲ್ಲಿ ಸೇವಿಸಿರಿ. ಪಪ್ಪಾಯಿ ತುಪ್ಪಾನ್ನ ಹಾಗೂ ದಾಲ್ ಅನ್ನು ಗುರುವಾರದ ದಿನದಂದು ಸೇವಿಸಬಾರದು.

ಶುಕ್ರವಾರ: ಲಕ್ಷ್ಮಿ ಮಾತೆಯ ದಿನವಾಗಿರುವ ಶುಕ್ರವಾರದ ದಿನದಂದು ಅನಾರೋಗ್ಯದಿಂದ ಕಾಪಾಡಿಕೊಳ್ಳಲು ಬೆಳ್ಳಂಬೆಳಗ್ಗೆ ಭುವನೇಶ್ವರಿಯ ಮಂತ್ರವನ್ನು ಪಠಣೆ ಮಾಡಿ. ಮೌಲ್ಯಯುತ ವಸ್ತುಗಳನ್ನು ಖರೀದಿಸಲು ಇದೊಂದು ಶುಭದಿನ. ಈ ದಿನ ತಿಳಿನೀಲಿ ಅಥವಾ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ. ಮನೆಯಿಂದ ಹೊರಡುವ ಮೊದಲು ಮೊಸರನ್ನು ಸೇವಿಸಿ. ಹಸಿರು ತರಕಾರಿ ಹಾಗೂ ಅನ್ನವನ್ನು ಶುಕ್ರವಾರದಂದು ಸೇವಿಸುವುದನ್ನು ಕಡಿಮೆ ಮಾಡಿ.

ಶನಿವಾರ; ಈ ದಿನದಂದು ವಿಶೇಷವಾಗಿ ಶನಿದೇವನ ಪೂಜೆ ಮಾಡಿ. ವ್ಯಾಪಾರಿ ಚಟುವಟಿಕೆಗಳಿಗೆ ಶುಭದಿನ. ಈ ದಿನ ಉಪವಾಸ ಇರುವುದು ಉತ್ತಮ ಫಲಿತಾಂಶವನ್ನು ನೀಡಲಿದೆ. ಮನೆಯಿಂದ ಹೊರಡುವಾಗ ಯಾವಾಗಲೂ ಒಂದು ಚಮಚ ತುಪ್ಪವನ್ನು ಸೇವಿಸುವುದು ಒಳ್ಳೆಯದು. ಈಗಿನ ಶನಿದೇವನನ್ನು ಮೆಚ್ಚಿಸಲು ಹಾಗೂ ಅದೃಷ್ಟವನ್ನು ಆಕರ್ಷಿಸಲು ಕಪ್ಪು ಬಣ್ಣದ ಬಟ್ಟೆಯನ್ನು ತಪ್ಪದೆ ಧರಿಸಿ. ಶನಿವಾರದ ದಿನದಂದು ಮನೆಯನ್ನು ಮಾತ್ರ ತಪ್ಪದೆ ಬದಲಾಯಿಸಬೇಡಿ.

ಭಾನುವಾರ; ಭಾನುವಾರ ಸೂರ್ಯದೇವನ ವಿಶೇಷ ದಿನವಾಗಿದ್ದು ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಸೂರ್ಯನ ಉಗಮ ಆಗುವ ಸಂದರ್ಭದಲ್ಲಿ ಸೂರ್ಯ ನಮಸ್ಕಾರ ಮಾಡಿ. ಕುಟುಂಬದ ಕಲಹಗಳನ್ನು ಪರಿಹಾರ ಮಾಡಲು ಇದೊಂದು ಸೂಕ್ತ ಸಮಯ. ಈ ದಿನದ ಶುಭ ಬಣ್ಣ ಬಿಳಿ ಹಾಗೂ ಗುಲಾಬಿ. ಮನೆ ಬದಲಾಯಿಸಲು ಉತ್ತಮ ದಿನ. ಭಾನುವಾರ ದಿನದಂದು ಸಂಜೆ 4ರ ನಂತರ ಬಡವರಿಗೆ ಆಹಾರ ವಿತರಣೆ ಮಾಡುವುದು ನಿಮಗೆ ಪುಣ್ಯ ಮೂಡುವಂತೆ ಮಾಡುತ್ತದೆ. ಕಬ್ಬಿಣದ ವಸ್ತುಗಳನ್ನು ಇಂದು ಖರೀದಿಸುವುದನ್ನು ನಿಲ್ಲಿಸಿ. ಈ ಎಲ್ಲಾ ವಿಚಾರಗಳನ್ನು ಆಯಾಯ ವಾರಗಳಿಗೆ ತಕ್ಕಂತೆ ಮಾಡಬೇಕು ಆಗಲೇ ನಿಮಗೆ ಅದೃಷ್ಟ ಖುಲಾಯಿಸುತ್ತದೆ.