ತಿರುಪತಿಗೆ ನೀವು ಈ ವಾರ ಹೋದರೆ ಡಬಲ್ ಪುಣ್ಯ ಪಕ್ಕ: ಹತ್ತಾರು ಬಾರಿ ಹೋಗಿದ್ದರೂ ನಿಮಗೆ ತಿಳಿಯದ ರಹಸ್ಯ. ಏನು ಗೊತ್ತೇ?

ನಮಸ್ಕಾರ ಸ್ನೇಹಿತರೆ ಜಗತ್ತಿನ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ನಮ್ಮ ದೇಶದ ಪ್ರಭಾವಶಾಲಿ ದೇವರಾಗಿರುವ ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ದೇಶ ವಿದೇಶಗಳಿಂದ ಲಕ್ಷಾಂತರ ಕೋಟ್ಯಾಂತರ ಭಕ್ತರು ಆಗಮಿಸುತ್ತಾರೆ. ಸ್ವಾಮಿಯ ದರ್ಶನ ಪಡೆದು ಕೃಪೆಗೆ ಪಾತ್ರರಾಗಿ ಅನುಗ್ರಹ ಪಡೆಯುತ್ತಾರೆ. ಆದರೆ ತಿಮ್ಮಪ್ಪನ ದರ್ಶನ ಪಡೆದ ಎಲ್ಲಾರಿಗೂ ಕೂಡ ಅಂದುಕೊಂಡ ಕೆಲಸ ಕಾರ್ಯಗಳು ನೆರವೇರುವುದಿಲ್ಲ. ಜೊತೆಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ. ಅದಕ್ಕೆ ಪ್ರಮುಖ ಕಾರಣಗಳು ಕೂಡ ಇವೆ.

ತಿಮ್ಮಪನ ಭಕ್ತರು ಅದೆಷ್ಟು ಭಾರಿ ತಿರುಪತಿ ಬೆಟ್ಟವನ್ನೇರಿ ತಿಮ್ಮಪನ ದರ್ಶನ ಪಡೆದಿದ್ದಾರೊ ಅವರಿಗೆ ತಿಳಿಯದು. ನಮ್ಮ ಭಾರತೀಯರಲ್ಲಿ ಒಂದು ಬಹು ದೊಡ್ಡ ಬಯಕೆ ಕೊನೆ ಆಸೆ ಅನ್ನೋದು ಇರುತ್ತದೆ. ಅದೇನಪ್ಪಾ ಅಂದರೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬೇಕು ಎಂಬುದು. ಅದೆಷ್ಟೋ ಭಾರಿ ದರ್ಶನ ಪಡೆದರು ಮತ್ತೆ ಮತ್ತೆ ಬಂದು ತಿಮ್ಮಪ್ಪನ ದರ್ಶನ ಪಡೆಯಬೇಕು ಎಷ್ಟೇ ನೂಕುನುಗ್ಗಲು ಇದ್ದರೂ ಕಷ್ಟ ಆದರೂ ಮತ್ತೆ ಒಂದು ಬಾರಿ ಹೋಗಿ ಬರಲೇಬೇಕು ಎಂಬುವ ಸನ್ನಿಧಿ ಈ ತಿರುಪತಿ ತಿಮ್ಮಪ್ಪನ ದೇಗುಲವಾಗಿದೆ.

ಈ ದೇಗುಲದ ಬಗ್ಗೆ ಯಾರೂ ಅರಿಯದ ಒಂದು ವಿಶೇಷತೆ ಇದೆ. ಸಂಕಟ ಬಂದಾಗ ವೆಂಕಟ ರಮಣ ಎನ್ನುವುದು ನಾವು ಕೇಳಿಯೇ ಇರ್ತೀವಿ. ಇದರ ಪ್ರಕಾರ ಕಷ್ಟ ಎನಿಸಿದಾಗಲೇ ಅಲ್ಲವೇ ನಾವು ತಿಮ್ಮಪನ ನೆನೆದು ದರ್ಶನ ಪಡೆಯೋ ಆಸೆ ಮೂಡುವುದು. ಈ ತಿರುಮಲ ಕ್ಷೇತ್ರವು ಭೂಮಿ ಮೇಲೆ ಇರುವ ಅತ್ಯಂತ ವಿಶೇಷವಿರುವ ಚಂದ್ರ ಕ್ಷೇತ್ರ. ಚಂದ್ರದೇವನ ಅತೀ ವಿಶೇಷವಾದ ಕ್ಷೇತ್ರವಿದು. ಚಂದ್ರ ಮನೋಕಾರಕ. ಕಷ್ಟ ಬಂದಾಗ ಮೊದಲು ಕುಗ್ಗೋದೆ ಮನಸ್ಸು. ಈ ಮನಸ್ಸು ಗೊಂದಲದಲ್ಲಿದ್ದಾಗ ತೀರಾ ಹೋಗಬೇಕಿರೋದೆ ಚಂದ್ರ ಕ್ಷೇತ್ರಕ್ಕೆ . ಈ ಕ್ಷೇತ್ರದಲ್ಲಿ ಮಾತ್ರ ನಮ್ಮ ಮನಸಿನ ಗೊಂದಲಗಳಿಗೆ ಪರಿಹಾರ ಸಿಗಲು ಸಾಧ್ಯ.

ತಿರುಪತಿ ಅಂತ ವಿಶೇಷತೆಯಿಂದ ಕೂಡಿದ ಚಂದ್ರಕ್ಷೇತ್ರ ಎಂಬುದು ನಂಬಿಕೆ. ಇದರ ವಿಶೇಷತೆ ಎಂದರೆ, ತಿರುಪತಿಗೆ ಸೋಮವಾರ ಹೋಗುವುದೇ ಉತ್ತಮ. ಅದರಲ್ಲೂ ಸೋಮವಾರ ತಿರುಪತಿಯಲ್ಲಿ ಉಳಿದು ಮಂಗಳವಾರ ತಿಮ್ಮಪನ ದರ್ಶನ ಪಡೆಯುವುದು ಇನ್ನು ಉತ್ತಮವಾದ ಕೆಲಸ. ಈ ಪದ್ಧತಿಯಿಂದ ನಿಜಕ್ಕೂ ನಿಮ್ಮ ಮನಸಿನ ಭಾರ ಕಡಿಮೆ ಆಗುತ್ತದೆ. ಚಂದ್ರಕ್ಷೇತ್ರದ ಅಘೋಷಿತ ನಿಯಮವೇ ಇದಾಗಿದೆ. ಸೋಮವಾರ ಅಲ್ಲಿ ಉಳಿದರೆ ನಿಜಕ್ಕೂ ನಿಮ್ಮ ಮನಃಶಾಂತಿ ಸಿಗುತ್ತದೆ .

ನೀವು ಅಂದು ಕೊಂಡಿರುವ ಕೆಲಸ ಕೂಡ ಆಗುತ್ತದೆ. ಕಾರಣ ಸೋಮವಾರ ರಾತ್ರಿ ಚಂದ್ರನು ಕೂಡ ಈ ಕ್ಷೇತ್ರದಲ್ಲಿ ತಂಗುತ್ತಾನೆ. ಈ ರೀತಿ ಚಂದ್ರ ಕ್ಷೇತ್ರದಲ್ಲಿ ಉಳಿದುಕೊಳ್ಳುವುದರಿಂದ ಇದನ್ನು ಚಂದ್ರಕ್ಷೇತ್ರ ಎಂದು ಕರೆಯಲಾಗುತ್ತದೆ. ಗ್ರಹಗತಿ ಎಂದು ಏನೂ ಕರೆಯುತ್ತೇವೆ ಅದನ್ನು ಸರಳವಾಗಿ ಚಲನೆ ಎಂದು ಕರೆಯುತ್ತೇವೆ. ಅಂತಹ ಗತಿಯನ್ನು ಪ್ರತಿ ಗ್ರಹವು ಕಾಯ್ದುಕೊಳ್ಳುತ್ತವೆ. ಇದೆ ಕಾರಣಕ್ಕೆ ಪ್ರತಿಯೊಬ್ಬರ ಜನ್ಮ ನಕ್ಷತ್ರ , ಜಾತಕ, ಕುಂಡಲಿ ಗಳ ಅನುಗುಣವಾಗಿ ವೈಪರೀತ್ಯಗಳು ಏರಿಳಿತಗಳು ಆಗುತ್ತಲೇ ಇರುತ್ತವೆ. ಇದರಲ್ಲಿ ಚಂದ್ರಗ್ರಹ ಯಾಕೆ ಮುಖ್ಯ ಅಂದರೆ ಮನುಷ್ಯನಲ್ಲಿ ಏನೇ ವ್ಯತ್ಯಾಸವಾಗಲಿ ಸವಾಲುಗಳು ಎದುರಾಗಲಿ ಇದನ್ನು ಎದುರಿಸಲು ಮನಸ್ಸು ಗಟ್ಟಿ ಆಗಿರಬೇಕು.

ಈ ಮನಸ್ಸು ಗಟ್ಟಿ ಅಥವಾ ದುರ್ಬಲ ಮಾಡುವ ಶಕ್ತಿ ಇರುವ ಗ್ರಹ ಎಂದರೆ ಅದು ಚಂದ್ರ ಮಾತ್ರ. ಈ ಚಂದ್ರ ಪ್ರತಿಗ್ರಹದ ಮನೆಗೂ ಸಹ ಹೋಗುತ್ತಾನೆ. ಹಾಗೂ ಅದೇ ರೀತಿ ಪ್ರತಿ ಗ್ರಹದ ಕ್ಷೇತ್ರಗಳಿಗೂ ಸಂಚಾರ ಮಾಡುತ್ತಾನೆ. ಆ ರೀತಿ ಸಂಚಾರ ಮಾಡಿ ಕೊನೆಗೆ ಎಲ್ಲಾದರು ಒಂದು ಕಡೆ ಬಂದು ತಂಗುತ್ತಾನೆ. ಅಂದರೆ ಅದು ಸ್ವಗೃಹ ಚಂದ್ರ ಕ್ಷೇತ್ರದಲ್ಲಿ ಮಾತ್ರ. ಅಂತಹ ಕ್ಷೇತ್ರವೇ ತಿರುಮಲ ಕ್ಷೇತ್ರ ಎಂಬುದು ನಂಬಿಕೆ. ಹೀಗಾಗಿ ಈ ಕ್ಷೇತ್ರದಲ್ಲಿ ಒಂದು ರಾತ್ರಿ ಕಳೆಯುವುದು ಉತ್ತಮ ಕೆಲಸ , ಒಂದು ರಾತ್ರಿ ಕಳೆದು ಮರುದಿನ ತಿಮ್ಮಪನ ದರ್ಶನ ಪಡೆದರೆ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ.‌ಹಾಗಾಗಿ ನೀವು ತಿರುಪತಿ ದರ್ಶನ ಪಡೆಯಬೇಕು ಅಂದುಕೊಂಡರೆ ಸೋಮವಾರ ಮತ್ತು ಮಂಗಳವಾರ ಅತ್ಯಂತ ಶ್ರೇಷ್ಠವಾದ ದಿನ ಎಂದು ಪರಿಗಣಿಸಲಾಗುತ್ತದೆ.