ಕನ್ನಡಿಗರ ನೆಚ್ಚಿನ ಝೀ ಕನ್ನಡದಲ್ಲಿ ಶುರುವಾಗುತ್ತಿದೆ ಎರಡು ಹೊಸ ಧಾರಾವಾಹಿಗಳು, ಕಥೆ ಹೇಗಿರಲಿದೆ ಗೊತ್ತೇ??

ಜೀಕನ್ನಡ ವಾಹಿನಿ ವೀಕ್ಷಕರಿಗೆ ಮನರಂಜನೆ ಕೊಡುವುದರಲ್ಲಿ ನಂಬರ್1 ಸ್ಥಾನದಲ್ಲಿದೆ. ಪ್ರತಿ ವಾರ ಟಿ.ಆರ್.ಪಿ ಲಿಸ್ಟ್ ನಲ್ಲಿ ಸಹ ಜೀಕನ್ನಡ ವಾಹಿನಿ ಮೊದಲ ಸ್ಥಾನ ಪಡೆದುಕೊಳ್ಳುತ್ತದೆ. ಜೀವಾಹಿನಿಯಲ್ಲಿ ಈಗ ಹೊಸ ಧಾರವಾಹಿಗಳು ಸಹ ಶುರುವಾಗಲಿದೆ. ಇದೀಗ ನಾಗಿಣಿ2 ಧಾರವಾಹಿ ಮುಗಿಯುವ ಹಂತಕ್ಕೆ ತಲುಪಿದ್ದು, ಅದರ ಜಾಗಕ್ಕೆ ಹೊಸ ಧಾರವಾಹಿ ಶ್ರೀರಸ್ತು ಶುಭಮಸ್ತು ಬರಲಿದೆ ಎನ್ನಲಾಗುತ್ತಿದೆ. ಈಗಾಗಲೇ ಶ್ರೀರಸ್ತು ಶುಭಮಸ್ತು ಹೆಸರಿನಲ್ಲಿ ಧಾರವಾಹಿ ಪ್ರಸಾರವಾಗಿ ಸೂಪರ್ ಹಿಟ್ ಆಗಿತ್ತು. ಈಗ ಹೊಸ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಖ್ಯಾತ ನಟಿ ಸುಧಾರಾಣಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ನಾಗಿಣಿ2 ಮುಗಿದ ಬಳಿಕ ಶ್ರೀರಸ್ತು ಶುಭಮಸ್ತು ಶುರುವಾಗಬಹುದು. ಇದಷ್ಟೇ ಅಲ್ಲದೆ, ಈಗ ಡಬ್ಬಿಂಗ್ ಧಾರವಾಹಿಗಳು ಸಹ ಜನರಿಗೆ ಬಹಳ ಇಷ್ಟವಾಗಿದೆ. ಈಗಾಗಲೇ ತ್ರಿನಯನಿ ಹಾಗೂ ನಂಬರ್1 ಸೊಸೆ ಡಬ್ಬಿಂಗ್ ಧಾರವಾಹಿಗಳು ಪ್ರಸಾರವಾಗಿ ಜನರು ಸಹ ಇಷ್ಟಪಟ್ಟು ನೋಡುತ್ತಿದ್ದಾರೆ. ಕನ್ನಡದಲ್ಲಿ ಡಬ್ಬಿಂಗ್ ಧಾರವಾಹಿಗಳು ಒಳ್ಳೆಯ ಪ್ರತಿಕ್ರಿಯೆಯನ್ನೇ ಪಡೆದುಕೊಳ್ಳುತ್ತಿದೆ. ಇದೀಗ ಅದೇ ಸಾಲಿಗೆ ಮತ್ತೊಂದು ಹೊಸ ಧಾರವಾಹಿ ಸೇರ್ಪಡೆ ಆಗುತ್ತಿದೆ. ತೆಲುಗಿನಲ್ಲಿ ಪ್ರಸಾರವಾಗಿ ಫೇಮಸ್ ಆಗಿರುವ ಧಾರವಾಹಿ ಒಂದು ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗಲಿದೆ. ಅದು ಇಂಟಿಗುಟ್ಟು ಧಾರವಾಹಿ.

ತೆಲುಗಿನ ಇಂಟಿಗುಟ್ಟು ಧಾರವಾಹಿ ಕನ್ನಡದಲ್ಲಿ ಮನೆಮಗಳು ಹೆಸರಿನಲ್ಲಿ ಡಬ್ ಆಗಿ ಪ್ರಸಾರವಾಗಲಿದೆ. ಈ ಧಾರವಾಹಿ ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದು, ಕನ್ನಡಕ್ಕೂ ಡಬ್ ಆಗುತ್ತಿದೆ. ನಂಬರ್1 ಸೊಸೆ ಧಾರವಾಹಿ ಮುಕ್ತಾಯ ಹಂತದಲ್ಲಿದೆ ಎನ್ನಲಾಗುತ್ತಿದೆ. ಹಾಗಾಗಿ ಆ ಡಬ್ಬಿಂಗ್ ಧಾರವಾಹಿ ಸ್ಥಾನಕ್ಕೆ ಮನೆಮಗಳು ಶುರುವಾಗುತ್ತದೆ ಎನ್ನುವ ಮಾಹಿತಿ ಸಿಕ್ಕಿದೆ. ಈ ಹೊಸ ಡಬ್ಬಿಂಗ್ ಧಾರವಾಹಿ ವೀಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.