ಎರಡು ದಿನಗಳ ಮುನ್ನವೇ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುವ ಸ್ಪರ್ದಿಗಳ ಹೆಸರು ಬಹಿರಂಗ. ಯಾವ್ಯಾವ ಟಾಪ್ ಕಲಾವಿದರು ಬರುತ್ತಿದ್ದಾರೆ ಗೊತ್ತೇ??

ಬಿಗ್ ಬಾಸ್ ಓಟಿಟಿ ಸೀಸನ್ 1 ಶುರುವಾಗಲು ಇನ್ನೇನು ಎರಡು ದಿನಗಳು ಮಾತ್ರ ಉಳಿದಿದೆ. ಆಗಸ್ಟ್ 6ರಂದು ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್1 ಅದ್ಧೂರಿಯಾಗಿ ಲಾಂಚ್ ಆಗಲಿದೆ. ಈ ಶೋ 45 ದಿನಗಳ ಕಾಲ ನಡೆಯುತ್ತದೆ ಎನ್ನಲಾಗಿದೆ. ಕಿಚ್ಚ ಸುದೀಪ್ ಅವರೇ ಓಟಿಟಿ ಶೋ ನಿರೂಪಣೆ ಮಾಡಲಿದ್ದಾರೆ. ಈಗಾಗಲೇ ಸಿಕ್ಕಿರುವ ಖಚಿತ ಮಾಹಿತಿಯ ಪ್ರಕಾರ, ಬಿಗ್ ಬಾಸ್ ಕನ್ನಡ ಓಟಿಟಿ ಶೋ ಟಿವಿ ಯಲ್ಲಿ ಪ್ರಸಾರವಾಗುವುದಿಲ್ಲ, ವೂಟ್ ಆಪ್ ನಲ್ಲಿ ಮಾತ್ರ ಪ್ರಸಾರವಾಗುತ್ತದೆ. ಬಿಗ್ ಬಾಸ್ ಓಟಿಟಿಗೆ 18 ಸ್ಪರ್ಧಿಗಳು ಹೋಗಲಿದ್ದು, ಅವರಲ್ಲಿ ಟಾಪ್ 5 ಸ್ಪರ್ಧಿಗಳು, ಆಕ್ಟೊಬರ್ ನಲ್ಲಿ ಶುರುವಾಗುವ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಡೈರೆಕ್ಟ್ ಆಗಿ ಸೆಲೆಕ್ಟ್ ಆಗುತ್ತಾರೆ ಈ ಎನ್ನಲಾಗುತ್ತಿದೆ..

ಇದೀಗ ಓಟಿಟಿ ಬಿಗ್ ಬಾಸ್ ಕನ್ನಡ ಸೀಸನ್ 1ಕ್ಕೆ ಯಾರೆಲ್ಲಾ ಸ್ಪರ್ಧಿಗಳು ಬರುತ್ತಾರೆ ಎನ್ನುವ ಲಿಸ್ಟ್ ಶೋ ಶುರುವಾಗುವ ಮೊದಲೇ ಲೀಕ್ ಆಗಿದೆ, ಆ ಸ್ಪರ್ಧಿಗಳು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ.. ನಾಗಿಣಿ2 ಧಾರವಾಹಿಯಲ್ಲಿ ಶಿವಾನಿ ಆಗಿ ಫೇಮಸ್ ಆಗಿರುವ ನಮ್ರತಾ ಗೌಡ ಬಿಗ್ ಬಾಸ್ ಓಟಿಟಿ ಸ್ಪರ್ಧಿಯಾಗಲಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ 35ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ರೇಖಾ ವೇದವ್ಯಾಸ್, ಈಗಾಗಲೇ ಇವರು ಕನ್ನಡದ ಸ್ಟಾರ್ ನಟರಾದ ಸುದೀಪ್ ಹಾಗೂ ಗಣೇಶ್ ಅವರೊಡನೆ ನಟಿಸಿದ್ದಾರೆ. ಸ್ಯಾಂಡಲ್ ವುಡ್ ನ ಖ್ಯಾತ ನಟ ನವೀನ್ ಕೃಷ್ಣ ಅವರು ಬಿಗ್ ಬಾಸ್ ಮನೆಗೆ ಬರುತ್ತಾರೆ ಎನ್ನಲಾಗಿದೆ.

ಖುಷಿ ಸಿನಿಮಾ ಇಂದ ಚಂದನವನಕ್ಕೆ ಎಂಟ್ರಿ ಕೊಟ್ಟ ಮಗ ತರುಣ್ ಚಂದ್ರ ಬಿಗ್ ಬಾಸ್ ಗೆ ಬರಲಿದ್ದಾರೆ ಎನ್ನಲಾಗಿದೆ. ಹಲವು ವರ್ಷಗಳಿಂದ ನಿರೂಪಣೆಯಲ್ಲಿ ತೊಡಗಿಸಿಕೊಂಡಿರುವ ಚಂದನ್ ಶರ್ಮಾ ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರಂತೆ. ಚಿತ್ರರಂಗ ಮತ್ತು ಕಿರುತೆರೆ ಎರಡರಲ್ಲೂ ನಾಯಕನಾಗಿ, ನಿರ್ಮಾಪಕನಾಗಿ ಹಾಗೂ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಖ್ಯಾತ ನಟ ದಿಲೀಪ್ ರಾಜ್, ಚಂದನವನದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರವಿ ಶ್ರೀವತ್ಸ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ. ಮಿಲಿಕ್ರಿ ಆರ್ಟಿಸ್ಟ್ ಹಾಗು ಹಾಗೂ ಹಾಸ್ಯನಟನಾಗಿ ಗುರುತಿಸಿಕೊಂಡಿರುವ ಮಿಮಿಕ್ರಿ ಗೋಪಿ ಅವರು ಬಿಗ್ ಮನೆಗೆ ಬರಲಿದ್ದಾರೆ.

ಸೋಷಿಯಲ್ ಮೀಡಿಯಾ, ಟಿಕ್ ಟಾಕ್ ವಿಡಿಯೋ ಹಾಗೂ ಇನ್ಸ್ಟಾಗ್ರಾಮ್ ವಿಡಿಯೋಗಳಿಂದ ಫೇಮಸ್ ಆಗಿರುವ ಭೂಮಿಕಾ ಬಸವರಾಜ್, ಖ್ಯಾತ ರೂಪದರ್ಶಿ ಹಾಗೂ ಕನ್ನಡ ಚಿತ್ರರಂಗಕ್ಕೆ ರಾಬರ್ಟ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಆಶಾ ಭಟ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರೆ ಎನ್ನಲಾಗಿದೆ. ಇಷ್ಟು ಹೆಸರುಗಳು ಸಧ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದ್ದು, ಈ ಹೆಸರುಗಳು ಅಧಿಕೃತವಾಗಿ ಹೊರಬಂದಿಲ್ಲ. ಸುದೀಪ್ ಅವರು ವೇದಿಕೆಯ ಮೇಲೆ ಸ್ಪರ್ಧಿಗಳ ಹೆಸರನ್ನು ಕರೆಯುವವರೆಗೂ, ಸ್ಪರ್ಧಿಗಳ ಬಗ್ಗೆ ಪೂರ್ತಿಯಾಗಿ ಗೊತ್ತಾಗುವುದಿಲ್ಲ.