ಅಬ್ಬಬ್ಬಾ: ಹೊಸ ತಿರುವು, ಸಮಂತಾ ಗೆ ಕೈ ಕೊಟ್ಟ ಮೇಲೆ ಶೋಭಿತ ಬಗ್ಗೆ ತನಗಿರುವ ಎಲ್ಲಾ ಫೀಲಿಂಗ್ ಅನ್ನು ವ್ಯಕ್ತ ಪಡಿಸಿದ್ದು ಹೇಗೆ ಗೊತ್ತೇ??

ಮಾಧ್ಯಮಗಳಲ್ಲಿ ಕಳೆದ ವರ್ಷದಿಂದಲು ಹಾಟ್ ಟಾಪಿಕ್ ಆಗಿ ಚರ್ಚೆ ಆಗುತ್ತಿರುವ ವಿಚಾರ ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಅವರ ವಿಚ್ಛೇದನದ ವಿಚಾರ. ನಾಲ್ಕು ವರ್ಷಗಳ ಕಾಲ ಸುಂದರವಾದ ದಾಂಪತ್ಯ ಜೀವನ ನಡೆಸಿದ ಈ ಜೋಡಿ, ಇದ್ದಕ್ಕಿದ್ದ ಹಾಗೆ ವಿಚ್ಛೇದನದ ಬಗ್ಗೆ ಘೋಷಣೆ ನೀಡಿದ್ದು, ನಿಜಕ್ಕೂ ಬಹಳ ಶಾಕ್ ಆಗಿತ್ತು. ಆಗಿನಿಂದ ಇವರಿಬ್ಬರು ನೀಡುವ ಹೇಳಿಕೆಗಳು ವೈರಲ್ ಆಗುತ್ತಲೇ ಇವೆ. ಇತ್ತೀಚೆಗೆ ನಟಿ ಸಮಂತಾ ಕರಣ್ ಜೋಹರ್ ಶೋನಲ್ಲಿ ಭಾಗವಹಿಸಿದ್ದರು, ಆಗ ನಾಗಚೈತನ್ಯ ಅವರ ಬಗ್ಗೆ ನೀಡಿದ ಹೇಳಿಕೆ ವೈರಲ್ ಆಗಿತ್ತು.

ಕರಣ್ ಜೋಹರ್ ಅವರು, ನಿಮ್ಮ ಪತಿ ಎಂದು ಹೇಳಿದಾಗ, ಸಮಂತಾ ಮಾಜಿ ಪತಿ ಎಂದು ಸರಿಪಡಿಸಿದ್ದರು. ಹಾಗೆಯೇ, ನಾಗಚೈತನ್ಯ ಅವರೊಡನೆ ನೀವು ಸೌಹಾರ್ದಯುತವಾಗಿ ಇದ್ದೀರಾ ಎಂದು ಕೇಳಿದ ಪ್ರಶ್ನೆಗೆ, ನಿಮ್ಮ ಮಾತಿನ ಅರ್ಥ, ಒಂದು ಕೋಣೆಯಲ್ಲಿ ನಮ್ಮಿಬ್ಬರನ್ನು ಇರಿಸಿದರೆ ಹರಿತವಾದ ವಸ್ತುಗಳನ್ನು ದೂರ ಇಡಬೇಕು ಎನ್ನುವುದೇ? ಸಧ್ಯದ ಪರಿಸ್ಥಿತಿಯಲ್ಲಿ ಹೌದು, ಮುಂದೆ ನೀವು ಹೇಳಿದ ಹಾಗೆ ಆಗಬಹುದು..ಎಂದಿದ್ದಾರೆ. ಸಮಂತಾ ಅವರ ಈ ಕಮೆಂಟ್ಸ್ ಭಾರಿ ವೈರಲ್ ಆಗಿದ್ದವು. ಇನ್ನು ನಾಗಚೈತನ್ಯ ಅವರು ನಟಿ ಶೋಭನಾ ಧುಲಿಪಾಲಿ ಅವರ ವಿಚಾರದಿಂದ ಭಾರಿ ಸುದ್ದಿಯಾಗಿದ್ದರು. ಅವರಿಬ್ಬರು ಡೇಟ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಸದ್ದು ಮಾಡುತ್ತಿದೆ.

ಇಬ್ಬರು ಜೊತೆಯಾಗಿ ಸುತ್ತಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇತ್ತೀಚೆಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ಪ್ರೊಮೋಷನ್ ನಲ್ಲಿ ನಾಗಚೈತನ್ಯ ಪಾಲ್ಗೊಂಡಿದ್ದಾಗ, ಕೇಳಿದ ಪ್ರಶ್ನೆಗಳಲ್ಲಿ, ಬೇರೆ ಕೆಲಾವಿದರ ಬಗ್ಗೆ ಒನ್ ವರ್ಡ್ ನಲ್ಲಿ ಉತ್ತರ ಕೊಡಬೇಕು ಎಂದಾಗ, ಉತ್ತರ ಕೊಟ್ಟ ನಾಗಚೈತನ್ಯ, ಶೋಭನಾ ಅವರ ಹೆಸರು ಹೇಳಿದಾಗ ಜೋರಾಗಿ ನಕ್ಕಿದ್ದಾರೆ, ನಗುವೆ ನನ್ನ ಉತ್ತರ ಎಂದು ಹೇಳಿ ನಗುವಿನಲ್ಲೇ ಉತ್ತರ ನೀಡಿದ್ದಾರೆ. ಈ ಮೂಲಕ ಇವರಿಬ್ಬರ ನಡುವೆ ಸಂಬಂಧ ಇರುವುದು ನಿಜವೇ ಇರಬಹುದೇ ಎನ್ನುವ ಮಾತುಗಳು ಕೇಳಿಬರುತ್ತಿವೆ.