ಟಿಕ್ ಟಾಕ್ ನಲ್ಲಿಯೇ ಲಕ್ಷ ಲಕ್ಷ ದುಡಿಯುತ್ತಿದ್ದ ಸೋನು ಶ್ರೀನವಾಸ್ ಗೌಡ, ಬಿಗ್ ಬಾಸ್ ನಲ್ಲಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?? ಇಷ್ಟು ಕಡಿಮೇನಾ??

ಕಿರುತೆರೆ ವೀಕ್ಷಕರು ಬಹಳ ಕುತೂಹಲದಿಂದ ಮತ್ತು ಕಾತುರರಾಗಿ ಕಾಯುವ ಶೋಗಳಲ್ಲಿ ಒಂದು ಬಿಗ್ ಬಾಸ್. ಬಿಗ್ ಬಾಸ್ ಹೊಸ ಸೀಸನ್ ಯಾವಾಗ ಶುರುವಾಗುತ್ತದೆ ಎಂದು ವೀಕ್ಷಕರು ಕಾಯುತ್ತಿದ್ದರು. ಇದೀಗ ನಿನ್ನೆಯಷ್ಟೇ ಬಿಗ್ ಬಾಸ್ ಓಟಿಟಿ ಶೋ ಶುರುವಾಗಿದೆ. ಈ ಬಾರಿ 42 ದಿನಗಳ ಕಾಲ ನಡೆಯಲಿರುವ ಈ ಓಟಿಟಿ ಶೋ ವೂಟ್ ಆಪ್ ನ ಚಂದಾದಾರಿಕೆ ಇದ್ದರೆ ಮಾತ್ರ ನೋಡಬಹುದಾಗಿದೆ. ಈಗಾಗಲೇ 16 ಸ್ಪರ್ಧಿಗಳು ಬಿಗ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.

ಬಿಗ್ ಬಾಸ್ ಎಂಟ್ರಿ ಕೊಟ್ಟ ಎರಡನೇ ಸ್ಪರ್ಧಿ ಟಿಕ್ ಟಾಕ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಫೇಮಸ್ ಆದ ಸೋನು ಶ್ರೀನಿವಾಸ್ ಗೌಡ ಅವರಿಗೆ ಈಗ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಗಟ್ಟಲೆ ಫಾಲೋವರ್ಸ್ ಗಳಿದ್ದಾರೆ. ಆಗಾಗ ಏನಾದರೂ ಒಂದು ಕಾರಣಕ್ಕೆ ಟ್ರೋಲ್ ಆಗುತ್ತಾರೆ ಸೋನು ಶ್ರೀನಿವಾಸ್ ಗೌಡ. ಈಕೆಯ ನಿಜವಾದ ಹೆಸರು ಶಾಂಭವಿ, ಸೋಷಿಯಲ್ ಮೀಡಿಯಾದಲ್ಲಿ ಸೋನು ಶ್ರೀನಿವಾಸ್ ಗೌಡ ಹೆಸರಿನಿಂದ ಫೇಮಸ್ ಆಗಿದ್ದಾರೆ. ಟಿಕ್ ಟಾಕ್ ನಲ್ಲಿ ವಿಡಿಯೋಗಳು, ಸೋಷಿಯಲ್ ಮೀಡಿಯಾದಲ್ಲಿ ಏನಾದರೂ ಹೇಳಿ ವಿಡಿಯೋ ಮಾಡಿ, ಇನ್ಸ್ಟಾಗ್ರಾಮ್ ಲೈವ್ ಬಂದು ಜನರ ಜೊತೆ ಮಾತನಾಡುವ ಸೋನು, ಹಲವಾರು ಬಾರಿ ಟ್ರೋಲ್ ಸಹ ಆಗಿದ್ದಾರೆ.

ಈ ಹುಡುಗಿ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸೋನು ಶ್ರೀನಿವಾಸ್ ಗೌಡ ಮೊದಲ ದಿನವೇ, ಸಾಕಷ್ಟು ವಿಚಾರ ಮಾತನಾಡಿದ್ದಾರೆ. ಟಿಕ್ ಟಾಕ್ ಮತ್ತು ಇನ್ಸ್ಟಾಗ್ರಾಮ್ ಮೂಲಕವೇ ಇವರು ತಿಂಗಳಿಗೆ ಲಕ್ಷಗಟ್ಟಲೆ ಹಣ ಗಳಿಸುತ್ತಿದ್ದರು. ಇದೀಗ ಬಿಗ್ ಬಾಸ್ ಇಂದ ಇವರಿಗೆ ಸಿಗುವ ಸಂಭಾವನೆ ಎಷ್ಟಿರಬಹುದು ಎನ್ನುವ ಕುತೂಹಲ ಜನರಲ್ಲಿ ಶುರುವಾಗಿದ್ದು, ಅದಕ್ಕೆ ಈಗ ಮಾಹಿತಿ ಸಿಕ್ಕಿದೆ. ಪ್ರಸ್ತುತ ಸಿಕ್ಕಿರುವ ಮಾಹಿತಿಯ ಪ್ರಕಾರ ಸೋನು ಶ್ರೀನಿವಾಸ್ ಗೌಡ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ನೆಲೆಸಲು ಒಂದು ವಾರಕ್ಕೆ 30 ಸಾವಿರ ರೂಪಾಯಿ ಸಂಭಾವನೆ ಕೊಡಲಾಗುತ್ತಿದೆಯಂತೆ.