ಅಪ್ಪನೇ ಆ ರೀತಿಯ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿದ್ದರಂತೆ: ಅದ್ಯಾಕೆ ಹಾಗೆ ಗೊತ್ತೇ?? ಸಾನ್ಯಾ ರವರ ಜೀವನದಲ್ಲಿ ಏನೆಲ್ಲಾ ಆಗಿದೆ ಗೊತ್ತೇ?

ಪುಟ್ಟ ಗೌರಿ ಮದುವೆ ಧಾರವಾಹಿಯ ಬಾಲನಟಿ ಸಾನ್ಯಾ ಅಯ್ಯರ್ ಈಗ ಬಿಗ್ ಬಾಸ್ ಓಟಿಟಿ ಸೀಸನ್ 1ರ ಸ್ಪರ್ಧಿಯಾಗಿ ಬಿಗ್ ಮನೆಯೊಳಗೆ ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಮನೆ ವಾಸದ ಮೊದಲ ದಿನವೇ ಸ್ಪರ್ಧಿಗಳಿಗೆ ಭಾವನಾತ್ಮಕವಾದ ಟಾಸ್ಕ್ ಒಂದನ್ನು ಬಿಗ್ ಬಾಸ್ ನೀಡಿದ್ದರು. ಅದರಲ್ಲಿ ಎಲ್ಲಾ ಸ್ಪರ್ಧಿಗಳು ಸಹ ತಮ್ಮ ಮನದಾಳದ ನೋವುಗಳನ್ನು ಹಂಚಿಕೊಂಡಿದ್ದರು. ಅದೇ ಸಾನ್ಯಾ ಸಹ ತಮ್ಮ ಜೀವನದ ಕೆಲವು ಕಹಿ ಘಟನೆಗಳ ಬಗ್ಗೆ ಹಂಚಿಕೊಂಡು ಕಣ್ಣೀರು ಹಾಕಿದರು. ಮಲತಂದೆ ಇಂದಲೇ ಆದ ನೋವಿನ ಬಗ್ಗೆ ಮಾತನಾಡಿ ಕಣ್ಣೀರು ಹಾಕಿದರು.

ಇನ್ನು ಈ ವಿಚಾರದ ಬಗ್ಗೆ ಸಾನ್ಯಾ ಅಯ್ಯರ್ ಹೇಳಿದ ವಿಚಾರ ದ ಬಗ್ಗೆ ಅವರ ತಾಯಿ ದೀಪಾ ಅಯ್ಯರ್ ಪ್ರತಿಕ್ರಿಯೆ ನೀಡಿದ್ದಾರೆ. “ಸಾನ್ಯಾ ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಅತ್ತಿದ್ದು ನೋಡಿ ನಮಗೂ ಅಳು ಬಂತು. ಸಾನ್ಯಾ ಹೇಳಿದ್ದು ನಿಜ. ಸಾನ್ಯಾ ಗೆ ಎರಡು ವರ್ಷ ಇದ್ದಾಗ ನನಗೆ ಡೈವರ್ಸ್ ಆಯ್ತು, ಸಾನ್ಯಾಗೆ ತಂದೆ ಪ್ರೀತಿ ಸಿಗಲೇ ಇಲ್ಲ. ನಂತರ ನಾನು ನನ್ನ ಸ್ನೇಹಿತ ಒಬ್ಬರ ಜೊತೆಗೆ ಮದುವೆಯಾದೆ. ಅದು ನನ್ನ ಜೀವನದ ದೊಡ್ಡ ತಪ್ಪಾದ ನಿರ್ಧಾರ. ಸ್ನೇಹಿತರಾಗಿದ್ದಾಗ ಇದ್ದ ಪ್ರೀತಿ, ಮದುವೆ ಆದಮೇಲೆ ಇರಲಿಲ್ಲ. ಸಾನ್ಯಾ ಬಯಸಿದ್ದು ತಂದೆ ಪ್ರೀತಿ ಅದು ಅವಳಿಗೆ ಸಿಗಲಿಲ್ಲ. 4 ವರ್ಷಗಳ ಹಿಂದೆ ಸಾನ್ಯಾ ತನ್ನ ಬಾಯ್ ಫ್ರೆಂಡ್ ಜೊತೆಗೆ ರೂಮ್ ನಲ್ಲಿದ್ದಾಗ, ಅವರು ಪಕ್ಕದ ಮನೆ ಕಿಟಕಿ ಇಂದ ಅವರಿಬ್ಬರ ವಿಡಿಯೋ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದ.

ಅದನ್ನ ಸಂಬಂಧ ಇಲ್ಲದೆ ಇರೋರಿಗೆಲ್ಲಾ ತೋರಿಸಿಕೊಂಡು ಬಂದಿದ್ದ. ತಾನು ಒಳ್ಳೆಯವನು ಅಂತ ತೋರಿಸಿಕೊಳ್ಳೋದಕ್ಕೆ ಇಂತಹ ಕೆಲಸ ಮಾಡಿದ್ದ. ಅವನ ನೋಟ ಸರಿ ಇಲ್ಲ ಅಂತ ಸಾನ್ಯಾ ಹೇಳ್ತಿದ್ಲು, ಅವನ ಜೊತೆ ಸಾನ್ಯಾಗೆ ಅನ್ ಕಂಫರ್ಟ್ ಆಗ್ತಿತ್ತು, ಆದರೆ ನಾವು ಅದ್ಯಾವುದನ್ನು ಎಲ್ಲಿಯೂ ಹೇಳಲಿಲ್ಲ. ಆದರೆ ಸಾನ್ಯಾ ಬಗ್ಗೆ ಈ ರೀತಿಯ ಗಾಸಿಪ್ ಗಳನ್ನು ಆತ ಎಲ್ಲಾ ಕಡೆ ಹರಡಿಸಿದ್ದ. ಇದರಿಂದ ಸಾನ್ಯಾ ತುಂಬಾ ಸಫರ್ ಆಗಿದ್ದಳು. ಇದೆಲ್ಲದ್ರಿಂದ ಅಪ್ಪ ಬೇಕು ಎಂದು ಆಸೆ ಇಟ್ಟುಕೊಂಡಿದ್ದ ಸಾನ್ಯಾಗೆ ಸಾಕಾಗಿ ಹೋಗಿತ್ತು..” ಎಂದು ಕುಟುಂಬದ ನೋವಿನ ವಿಚಾರ ಹಂಚಿಕೊಂಡಿದ್ದಾರೆ ದೀಪಾ ಅಯ್ಯರ್.