ಕಂಡೀಷನ್ ಅಪ್ಲೈ: ನರೇಶ್ ಹಾಗೂ ಪವಿತ್ರ ಸಂಬಂಧದ ಕುರಿತು ಮತ್ತೊಂದು ದೊಡ್ಡ ವಿಚಾರ ಬಹಿರಂಗ. ಏನು ಗೊತ್ತೇ??

ನಟ ನರೇಶ್ ಮತ್ತು ನಟಿ ಪವಿತ್ರಾ ನಡುವಿನ ಸಂಬಂಧದ ವಿಚಾರ ಕೆಲ ದಿನಗಳ ಹಿಂದೆ ಇಂಡಸ್ಟ್ರಿಯಲ್ಲಿ ಚರ್ಚೆಗೆ ಗ್ರಾಸವಾಗಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹಿರಿಯ ನಟಿ, ನಿರ್ದೇಶಕಿ ಹಾಗೂ ನಿರ್ಮಾಪಕಿ ಆಗಿದ್ದ ವಿಜಯನಿರ್ಮಲಾ ಅವರ ಮಗನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ನರೇಶ್, ಈ ಹಿಂದೆ ನಾಯಕನಾಗಿ ನಟಿಸಿ ಹಲವು ಹಿಟ್ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿದ್ದಾರೆ. ಹೀರೋ ಆಗುವ ಅವಕಾಶಗಳು ಕಡಿಮೆಯಾದ ಮೇಲೂ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಎಂಟ್ರಿಕೊಟ್ಟು ಅಪ್ಪ, ಚಿಕ್ಕಪ್ಪನ ಪಾತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ವೈಯಕ್ತಿಕ ಜೀವನದಲ್ಲಿ ಒಂದಲ್ಲ, ಎರಡಲ್ಲ, ಮೂರು ಬಾರಿ ಮದುವೆಯಾಗಿ, ಭಿನ್ನಾಭಿಪ್ರಾಯದಿಂದ ಮೂರು ಮದುವೆಯನ್ನು ಮುರಿದುಕೊಂಡಿರುವ ನರೇಶ್, ಇದೀಗ ನಟಿ ಪವಿತ್ರಾ ಲೋಕೇಶ್ ಜತೆ ನಿಕಟ ಸಂಪರ್ಕದಲ್ಲಿದ್ದಾರೆ ಎಂಬ ಪ್ರಚಾರ ಇತ್ತೀಚೆಗೆ ಶುರುವಾಗಿದೆ.

ನಟಿ ಪವಿತ್ರಾ ಲೋಕೇಶ್ ಅವರು ನಟ ಸುಚೇಂದ್ರ ಪ್ರಸಾದ್ ಅವರನ್ನು ವಿವಾಹವಾದರು, ಅವರೊಡನೆ ಕೆಲವು ಭಿನ್ನಾಭಿಪ್ರಾಯಗಳಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಈ ಪ್ರಕರಣ ಇನ್ನೂ ನಡೆಯುತ್ತಿದ್ದು, ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಕಾನೂನು ಬದ್ಧವಾಗಿ ಅವಕಾಶ ಸಿಕ್ಕಾಗ ನರೇಶ್ ಹಾಗೂ ಪವಿತ್ರಾ ವಿವಾಹವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಲ್ಲಿ ಎಷ್ಟರಮಟ್ಟಿಗೆ ಸತ್ಯವಿದೆಯೋ ಗೊತ್ತಿಲ್ಲ, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇವೆರಡರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ಇವರಿಬ್ಬರ ಒಪ್ಪಂದದ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಜನರು ಬೇರೆ ಬೇರೆ ರೀತಿಯಲ್ಲಿ ಮಾತನಾಡುತ್ತಿದ್ದಾರೆ.

ಒಪ್ಪಂದದ ಪ್ರಕಾರ ಪವಿತ್ರಾ ಲೋಕೇಶ್ ಅವರಿಗೆ ನಟ ನರೇಶ್ ಪ್ರರಿ ತಿಂಗಳಿಗೆ 25 ಲಕ್ಷ ರೂಪಾಯಿ ಹಣ ನೀಡಬೇಕು. ಇದುವರೆಗೂ ಎಲ್ಲರೂ ಇವರದ್ದು ಹಳೇ ಲವ್ ಸ್ಟೋರಿ ಅಂತ ಅಂದುಕೊಂಡಿದ್ದರೇ ಈಗ ಈ ಅಗ್ರಿಮೆಂಟ್ ಹಾಗೂ ಇವರ ಸಂಬಂಧದ ಸುದ್ದಿ ವೈರಲ್ ಆಗಿದೆ ಹಾಗೂ ಇದರಲ್ಲಿ ಏನೆಲ್ಲಾ ತಿರುವುಗಳು ಅಡಗಿವೆ ಎನ್ನುವ ಅಸಲಿ ಸತ್ಯ ಮುಂದಿನ ದಿನಗಳಲ್ಲಿ ಬಯಲಾಗಲಿದೆ. ಸದ್ಯ ಇವರಿಬ್ಬರ ಬಗ್ಗೆ ಈ ಅಗ್ರಿಮೆಂಟ್ ಸುದ್ದಿ ಹರಿದಾಡುತ್ತಿದೆ.