ಕೋಟಿ ಕೋಟಿ ವರದಕ್ಷಿಣೆ ಕೊಟ್ಟು ಮದುವೆಯಾಗುವ ಮುನ್ನ ಎನ್ಟಿಆರ್ ರವರಿಗೆ ಅವರ ಪತ್ನಿ ಹಾಕಿದ ಕಂಡೀಶನ್ ಗಳು ಏನೇನು ಗೊತ್ತೇ??

ಯಂಗ್ ಟೈಗರ್ ಜ್ಯೂನಿಯರ್ ಎನ್.ಟಿ.ಆರ್ ನಂದಮೂರಿ ಕುಟುಂಬದ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಬಾಲಕೃಷ್ಣ ನಂತರ ಎನ್.ಟಿ.ಆರ್ ಈಗಿನ ಪೀಳಿಗೆಯ ಸ್ಟಾರ್ ಹೀರೋ ಎನಿಸಿಕೊಂಡರು. ಲುಕ್‌ನಲ್ಲಿ ಮಾತ್ರವಲ್ಲದೆ ನಟನೆಯಲ್ಲಿಯೂ ತಾತನ ಮೊಮ್ಮಗ ಎಂಬುದನ್ನು ಸಾಬೀತುಪಡಿಸಿದರು. ಇತ್ತೀಚೆಗೆ, ಅವರು RRR ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇಂಡಸ್ಟ್ರಿಯಲ್ಲಿ ಇದುವರೆಗೂ ತಾರಕ್ ಬಗ್ಗೆ ಯಾವುದೇ ವದಂತಿಗಳಿಲ್ಲ. ಅದು ಅಲ್ಲದೆ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ಮದುವೆಯಾಗಿ ಸಂಸಾರದೊಂದಿಗೆ ಸಂತಸದಿಂದ ಕಾಲ ಕಳೆಯುತ್ತಿದ್ದಾರೆ.

ಜ್ಯೂನಿಯರ್ ಎನ್‌.ಟಿ.ಆರ್ ಅವರು ತಮ್ಮ ಸಂಬಂಧಿಕರ ಮಗಳು ಲಕ್ಷ್ಮಿ ಪ್ರಣತಿ ಅವರನ್ನು ವಿವಾಹವಾದರು ಎಂದು ತಿಳಿದಿದೆ. ಅವರ ಮದುವೆ ಅದ್ಧೂರಿಯಾಗಿ ನಡೆಯಿತು. ಜ್ಯೂನಿಯರ್ ಎನ್.ಟಿ.ಆರ್ ಮತ್ತು ಪ್ರಣತಿ ಅವರಿಗೆ ಅಭಯ್ ರಾಮ್ ಮತ್ತು ಭಾರ್ಗವ್ ರಾಮ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಜ್ಯೂನಿಯರ್ ಎನ್.ಟಿ.ಆರ್ ಮದುವೆಯಾಗಿದ್ದು ತಂದೆ ತಾಯಿ ನೋಡಿದ ಹುಡುಗಿಯನ್ನೇ ಆದರೂ, ಪ್ರಣತಿ ಮೊದಲಿನಿಂದಲೂ ಪರಿಚಿತರಾಗಿದ್ದರು. ಹೀಗಾಗಿ ಮದುವೆಗೂ ಮುನ್ನ ಇಬ್ಬರೂ ಆಗಾಗ ಫೋನ್ ನಲ್ಲಿ ಮಾತನಾಡುತ್ತಿದ್ದರು. ಆ ವೇಳೆ ಎನ್.ಟಿ.ಆರ್ ಅವರಿಗೆ ಪ್ರಣತಿ ಕೆಲ ಷರತ್ತುಗಳನ್ನು ಹಾಕಿದ್ದರು ಎನ್ನಲಾಗಿದೆ.

ಮದುವೆಯ ನಂತರ ಸಿನಿಮಾದಲ್ಲಿ ಬ್ಯುಸಿಯಾಗಿದ್ದರೂ ಪ್ರತಿ ವರ್ಷ ತನಗಾಗಿ ಎರಡು ತಿಂಗಳು ಬಿಡಬೇಕು ಎಂದಿದ್ದರಂತೆ ಪ್ರಣತಿ. ಅದೂ ಅಲ್ಲದೆ ಮದುವೆಗಿಂತ ಮೊದಲು ಜ್ಯೂನಿಯರ್ ಎನ್.ಟಿ.ಆರ್ ತಮ್ಮ ಸ್ನೇಹಿತರ ಜೊತೆ ಹೆಚ್ಚಾಗಿ ಓಡಾಡುತ್ತಿದ್ದರು. ಮದುವೆಯ ನಂತರ ಸ್ನೇಹಿತರೊಂದಿಗೆ ಹೊರಗೆ ಹೋಗುವುದನ್ನು ಕಡಿಮೆ ಮಾಡಬೇಕು ಎಂದು ಸಹ ಷರತ್ತು ಹಾಕಿದ್ದರಂತೆ ಪ್ರಣತಿ. ಔಟ್ ಡೋರ್ ಶೂಟಿಂಗ್‌ ಗೆ ಹೋದಾಗ ಧರಿಸುವ ಡ್ರೆಸ್‌ ಬಗ್ಗೆ ಕಾಳಜಿ ವಹಿಸುವುದಾಗಿ ಜ್ಯೂನಿಯರ್ ಎನ್‌.ಟಿ.ಆರ್‌ ಈಗಾಗಲೇ ಹೇಳಿದ್ದಾರೆ. ಪ್ರಣತಿ ಎನ್‌.ಟಿ.ಆರ್‌ ಅವರಿಗೆ ಕಂಡೀಷನ್‌ ಗಳನ್ನು ಹಾಕಿದ್ದರು ಆದರೆ ಅವರು ಗಂಡನಿಗಿಂತ ಚಿಕ್ಕವರು. ಈಗ ಈ ಜೋಡಿ ಅನೇಕರಿಗೆ ಮಾದರಿಯಾಗಿ ನಿಂತಿದ್ದಾರೆ.