ಕೊನೆಗೂ ಬುದ್ದಿ ಕಲಿತ ಸೋನು ಗೌಡ: ಭೇಷ್ ಎಂದ ಫ್ಯಾನ್ಸ್: ತಾನೇ ಉದಾಹರಣೆಯಾಗಿ ಎಲ್ಲಾ ಹುಡುಗಿಯರಿಗೆ ಹೇಳಿದ್ದೇನು ಗೊತ್ತೇ??

ಸೋಷಿಯಲ್ ಮೀಡಿಯಾ ಇಂದ ಪಾಪ್ಯುಲರ್ ಆಗಿ, ಜೊತೆಗೆ ಸಾಕಷ್ಟು ಬಾರಿ ಟ್ರೋಲ್ ಸಹ ಆಗಿರುವ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತಮ್ಮ ಪರ್ಸನಲ್ ವಿಚಾರದ ಬಗ್ಗೆ ಮಾತನಾಡಿದ್ದಾರೆ ಸೋನು ಗೌಡ, ತಪ್ಪು ಮಾಡಿದ ಬಳಿಕ ತಾವು ಬುದ್ಧಿ ಕಲಿತಿರುವ ಬಗ್ಗೆ ಮಾತನಾಡಿ, ಯಾವ ಹುಡುಗಿಯು ಆ ರೀತಿ ಮಾಡಬಾರದು ಎಂದು ಹುಡುಗಿಯರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ವಿಚಾರ ಏನು ಎಂದು ತಿಳಿಸುತ್ತೇವೆ ನೋಡಿ..

ಸೋನು ಗೌಡ ಅವರ ಖಾಸಗಿ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವು ದಿನಗಳ ಹಿಂದೆ ಭಾರಿ ವೈರಲ್ ಆಗಿತ್ತು. ಅದರ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಸೋನು ಮಾತನಾಡಿದ್ದಾರೆ. ಆ ವಿಡಿಯೋ ವೈರಲ್ ಆಗಿದ್ದು ಬಾಯ್ ಫ್ರೆಂಡ್ ಇಂದ ಎಂದು ಹೇಳಿದ್ದಾರೆ. ಪ್ರೀತಿ ಮಾಡಿ, ಹುಡುಗರು ಮೀಟ್ ಮಾಡುವುದು, ಫೋನ್ ಮಾಡುವುದು, ಮೆಸೇಜ್ ಮಾಡುವುದು ಇದೆಲ್ಲವನ್ನು ಮಾಡುತ್ತಾರೆ. ಕೊನೆಗೆ ವಿಡಿಯೋ ಕಾಲ್ ಮಾಡಿ, ಅದನ್ನು ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುವ ಸಾಕಷ್ಟು ಘಟನೆಗಳ ಬಗ್ಗೆ ನಾವು ಕೇಳಿರುತ್ತೇವೆ. ಸೋನು ಗೌಡ ವಿಚಾರದಲ್ಲಿ ಆಗಿರುವುದು ಸಹ ಅದೇ.

ಮೂರು ವರ್ಷದಿಂದ ಪರಿಚಯವಿದ್ದ ಸ್ನೇಹಿತ, ಎಂಎಸ್ಸಿ ಮುಗಿಸಿ, ಅಮೆರಿಕಾಗೆ ಹೋದ ಬಳಿಕ ಪ್ರೊಪೋಸ್ ಮಾಡಿ, ಸೋನು ಒಪ್ಪಿಕೊಂಡು, ವಿಡಿಯೋ ಕಾಲ್ ಮಾಡಿ, ಅದನ್ನು ರೆಕಾರ್ಡ್ ಮಾಡಿಕೊಂಡು, ಲೀಕ್ ಮಾಡಿದ್ದಾನೆ. ಈ ವಿಚಾರವನ್ನು ಹಂಚಿಕೊಡು ಸೋನು ಗೌಡ ಕಣ್ಣೀರು ಹಾಕಿದ್ದಾರೆ. ಅವನ ಬಗ್ಗೆ ದೂರು ಕೊಟ್ಟಿದ್ದರು ಸಹ, ಆತ ಅಮೆರಿಕಾದಲ್ಲಿರುವ ಕಾರಣ ಹುಡುಕಲು ಸಾಧ್ಯವಾಗಿಲ್ಲ ಎಂದು ಸಹ ತಿಳಿಸಿದ್ದಾರೆ. ಹುಡುಗಿಯರು ಒಂದು ಹುಡುಗನ ವಿಚಾರದಲ್ಲಿ ಬಹಳ ಸ್ಟ್ರಿಕ್ಟ್ ಆಗಿರಬೇಕು, ಈ ರೀತಿಯ ತಪ್ಪಗಳನ್ನು ಎಂದಿಗೂ ಮಾಡಬಾರದು ಎಂದು ತನ್ನ ತಪ್ಪನ್ನು ಒಪ್ಪಿಕೊಂಡ ಸೋನು, ಎಲ್ಲಾ ಹುಡುಗಿಯರಿಗೂ ಮನವಿ ಮಾಡಿದ್ದಾರೆ.