ಮೊದಲ ವಾರ ಆ ಮಹಿಳಾ ಸ್ಪರ್ದಿ ಹೊರಹೋಗುವುದು ಬಹುತೇಕ ಖಚಿತ: ಯಾರು ಗೊತ್ತೇ?? ಪ್ರೇಕ್ಷಕರು ಕಳುಹಿಸುವುದು ಯಾರನ್ನು ಗೊತ್ತೇ??

ಬಿಗ್ ಬಾಸ್ ಶೋ ಶುರುವಾದರೆ ಮನೆಯ ಒಳಗಿರುವ ಸ್ಪರ್ಧಿಗಳಿಗೆ ಬಿಗ್ ಬಾಸ್ ಕೊಡುವ ಟಾಸ್ಕ್ ಗಳ ಹಬ್ಬವಾದರೆ, ಹೋರಾಗಿರುವವರಿಗೆ ಮನರಂಜನೆ ಅದ್ಧೂರಿಯಾಗಿರುತ್ತದೆ. ಪ್ರತಿ ಎಪಿಸೋಡ್ ನಲ್ಲೂ ಒಂದಲ್ಲ ಒಂದು ವಿಚಾರ ಚರ್ಚೆಗೆ ಒಳಗಾಗುವುದು ಮತ್ತು ಟ್ರೋಲ್ ಆಗುತ್ತಲೇ ಇರುತ್ತದೆ. ಇನ್ನು ಹೆಚ್ಚಾಗಿ ಚರ್ಚೆಯಾಗುವ ವಿಚಾರಗಳಲ್ಲಿ ಒಂದು ನಾಮಿನೇಷನ್ ಮತ್ತು ಎಲಿಮಿನೇಷನ್ ಪ್ರಕ್ರಿಯೆಗಳು. ಬಿಗ್ ಬಾಸ್ ಮನೆಯ ವಾಸದ ಮೊದಲ ವಾರದಲ್ಲಿ 9 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.

ಮೊದಲ ದಿನ ಒಬ್ಬರು ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದರು. ಎಲ್ಲರ ಜೊತೆಗೆ ಮನೆಯ ಸ್ಪರ್ಧಿಗಳು ಮಾತನಾಡುವ ಪ್ರಯತ್ನ ಮಾಡುತ್ತಿದ್ದರು. ಅಷ್ಟರಲ್ಲೇ ನಾಮಿನೇಶನ್ ವಿಚಾರ ಬಂದು, ಮನೆಯವರ ಪ್ರತ್ಯೇಕ ವೋಟ್ ನ ಪ್ರಕಾರ, 9 ಜನ ನಾಮಿನೇಟ್ ಆಗಿದ್ದಾರೆ. ಸೋನು ಗೌಡ, ಆರ್ಯವರ್ಧನ್ ಗುರೂಜಿ, ಸ್ಫೂರ್ತಿ ಗೌಡ, ಜಶ್ವಂತ್, ನಂದಿನಿ, ಜಯಶ್ರೀ ಆರಾಧ್ಯ, ಕಿರಣ್ ಯೋಗೇಶ್ವರ್ ಮತ್ತು ಅಕ್ಷತಾ ಕುಕ್ಕಿ ನಾಮಿನೇಟ್ ಆಗಿದ್ದಾರೆ. ಈಗಾಗಲೇ ಈ ವಾರ ಮನೆಯಿಂದ ಹೊರಹೋಗುವ ಸ್ಪರ್ಧಿಗಳು ಯಾರ್ಯಾರು ಎನ್ನುವ ಚರ್ಚೆ ಶುರುವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ನೋಡಿದರೆ, ಈ ವಾರ ಒಬ್ಬ ಮಹಿಳಾ ಸ್ಪರ್ಧಿ ಮನೆಯಿಂದ ಹೊರಗೆ ಬರುವುದು ಪಕ್ಕಾ ಎನ್ನಲಾಗುತ್ತಿದ್ದು, ಆ ಸ್ಪರ್ಧಿ ಮತ್ಯಾರು ಅಲ್ಲ, ಸೋನು ಗೌಡ ಈ ವಾರ ಮನೆಯಿಂದ ಹೊರಹೋಗುತ್ತಾರೆ ಎನ್ನುವ ಅಭಿಪ್ರಾಯ ಶುರುವಾಗಿದೆ. ಸೋನು ಗೌಡ ಮೇಲೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತವಾಗಿದ್ದು ಸೋನು ಗೌಡ ಮನೆಯಿಂದ ಹೊರಬಂದರೆ ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹಾಗಾಗಿ ಮೊದಲ ಎಲಿಮಿನೇಶನ್ ನಲ್ಲಿ ಸೋನು ಗೌಡ ಮನೆಯಿಂದ ಹೊರಗೆ ಬಂದರೆ ಒಳ್ಳೆಯದು ಎನ್ನಲಾಗುತ್ತಿದೆ.