ದರ್ಶನ್ ರವರ ನಟಿಯಾಗಿ ಆಯ್ಕೆಯಾಗಿರುವ ಮಾಲಾಶ್ರೀ ಮಗಳು ರಾಧಾನಾ ರವರು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?? ಕೇಳಿದರೆ ತಲೆ ತಿರುಗುತ್ತದೆ.

ಕನಸಿನ ರಾಣಿ ಮಾಲಾಶ್ರೀ ಮತ್ತು ನಿರ್ಮಾಪಕ ಕೋಟಿ ರಾಮು ಅವರ ಮಗಳು ರಾಧನ ಈಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಾಲಾಶ್ರೀ ಅವರು ನಾಯಕಿಯಾಗಿ ಸ್ಯಾಂಡಲ್ ವುಡ್ ನಲ್ಲಿ ಟಾಪ್ ನಟಿಯಾಗಿ ಮಿಂಚಿದವರು. ಇದೀಗ ಅವರ ಮಗಳು ಇದೇ ಇಂಡಸ್ಟ್ರಿಗೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ಸಿನಿಮಾದಲ್ಲೇ ದರ್ಶನ್ ಅವರಿಗೆ ನಾಯಕಿಯಾಗಿ, ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಹಾಗೆಯೇ ರಾಕ್ ಲೈನ್ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಲಾಂಚ್ ಆಗುತ್ತಿದ್ದಾರೆ ರಾಧನ. ಇವರ ಬಗ್ಗೆ ಈಗ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ.

ನಟಿ ಮಾಲಾಶ್ರೀ ಅವರು ಬಾಲನಟಿಯಾಗಿ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು ಸಹ, ನಾಯಕಿಯಾಗಿ ಮೊದಲ ಬಾರಿಗೆ ನಟಿಸಿದ್ದು, ಕನ್ನಡದ ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ, ಆಗ ಮಾಲಾಶ್ರೀ ಅವರಿಗೆ 15 ವರ್ಷವಾಗಿತ್ತು. ಈಗ ಅವರ ಮಗಳಿಗೆ ಎಷ್ಟು ವರ್ಷ ಇರಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ. ರಾಧನ ಅವರು 13 ವರ್ಷ ಇದ್ದಾಗಲೇ ನಟಿಯಾಗಬೇಕು ಎಂದು ಹೇಳಿದ್ದರಂತೆ. ಕಳೆದ ಎರಡು ವರ್ಷಗಳಿಂದ ನಟನೆಯ ತರಬೇತಿ ಸಹ ಪಡೆದಿದ್ದಾರೆ. ಅನನ್ಯ ಎಂದು ಇವರ ಹೆಸರು, ಆದರೆ ರಾಮು ಅವರೇ ರಾಧನ ಎಂದು ಹೆಸರಿಟ್ಟು, ಚಿತ್ರರಂಗಕ್ಕೆ ಪರಿಚಯ ಆಗುವಾಗ, ಹೆಸರು ಬದಲಾಯಿಸಬೇಕು ಎಂದುಕೊಂಡಿದ್ದರಂತೆ. ಅದೇ ರೀತಿ ಈಗ ರಾಧನ ಎಂದು ಬದಲಾಯಿಸಿ, ಪರಿಚಯ ಮಾಡಲಾಗುತ್ತಿದೆ.

ರಾಧನ ಅವರ ಬಗ್ಗೆ ಈಗಾಗಲೇ ಸಾಕಷ್ಟು ವಿಚಾರಗಳು ಚರ್ಚೆಯಾಗುತ್ತಿದೆ. ರಾಧನ ದೊಡ್ಡ ಸಿನಿಮಾ ಮೂಲಕ, ದರ್ಶನ್ ಅವರಿಗೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಜೊತೆಗೆ, ರಾಕ್ ಲೈನ್ ಪ್ರೊಡಕ್ಷನ್ಸ್ ಅಂತಹ ದೊಡ್ಡ ಸಂಸ್ಥೆಯ ಮೂಲಕ ಲಾಂಚ್ ಆಗುತ್ತಿರುವ ಬಗ್ಗೆ ಸಹ ಚರ್ಚೆಯಾಗುತ್ತಿದೆ. ಅದರ ಜೊತೆಗೆ ಮೊದಲ ಸಿನಿಮಾಗೆ ರಾಧನ ಅವರಿಗೆ ನೀಡಲಾಗುತ್ತಿರುವ ಸಂಭಾವನೆ ಬಗ್ಗೆ ಸಹ ಮಾತುಗಳು ಕೇಳಿ ಬರುತ್ತಿದ್ದು, ರಾಧನ ಅವರು ಮೊದಲ ಸಿನಿಮಾಗೆ ರಾಧನ ಅವರಿಗೆ 40 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ. ಮೊದಲ ಸಿನಿಮಾಗೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ಸಿನಿರಂಗ ಶಾಕ್ ಆಗಿದೆ.