ಹುಡುಗುರ ಹೃದಯ ಕದಿಯುವಂತೆ ದುಬಾರಿ ಸೀರೆಯಲ್ಲಿ ಮಿಂಚಿದ ನಮ್ರತಾ ಗೌಡ: ಈ ಸೀರೆಯ ಬೆಲೆ ಎಷ್ಟು ಗೊತ್ತೇ?

ನಾಗಿಣಿ2 ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಹೊಸ ಸೆನ್ಸೇಷನ್ ಆಗಿರುವವರು ನಮ್ರತಾ ಗೌಡ. ನಾಗಿಣಿ2 ಪಾತ್ರದಲ್ಲಿ ಇವರ ಅಭಿನಯವನ್ನು ಜನರು ತುಂಬಾ ಇಷ್ಟಪಟ್ಟಿದ್ದಾರೆ. ನಾಗಿಣಿ2 ಧಾರಾವಾಹಿಗಿಂತ ಮೊದಲು ನಮ್ರತಾ ಅವರು ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿದ್ದರು. ಅದಾದ ಬಳಿಕ ಈಗ ನಾಗಿಣಿ2 ಧಾರಾವಾಹಿಯ ಮೂಲಕ ಜನರನ್ನು ರಂಜಿಸುತ್ತಿದ್ದಾರೆ. ಸುಮಾರು ಐದಾರು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ ನಮ್ರತಾ ಗೌಡ.

ನಮ್ರತಾ ಗೌಡ ಅವರು ಒಬ್ಬ ನಟಿಯಾಗಿ ಇಂದು ಕರ್ನಾಟಕದ ಮನೆಮಾತಾಗಿದ್ದಾರೆ, ಇಂದು ನಮ್ರತಾ ಗೌಡ ಅವರಿಗೆ ದೊಡ್ಡ ಫ್ಯಾನ್ ಬೇಸ್ ಮತ್ತು ಜನರ ಸಪೋರ್ಟ್ ಇದೆ. ಇವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್. ಹೊಸ ಫೋಟೋಗಳು, ಫೋಟೋಶೂಟ್ ಗಳು ಎಲ್ಲದರ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಹಬ್ಬಗಳು ಬಂತೆಂದರೆ, ಸಾಂಪ್ರದಾಯಿಕ ಉಡುಗೆಗಳಲ್ಲಿ ಮಿಂಚುತ್ತಾರೆ ನಮ್ರತಾ. ಈ ಬಾರಿ ವರಮಹಾಲಕ್ಷ್ಮಿ ಹಬ್ಬದ ದಿನ ನಮ್ರತಾ ಗೌಡ ಅವರು ಸುಂದರವಾದ ಸೀರೆಯೊಂದನ್ನು ಧರಿಸಿ, ದೇವಿಯ ಪೂಜೆ ಮಾಡಿದ್ದಾರೆ.

ಹಬ್ಬದ ದಿನದ ಫೋಟೋಗಳನ್ನು ಸಹ ಶೇರ್ ಮಾಡಿಕೊಂಡಿದ್ದಾರೆ. ನಮ್ರತಾ ಅವರು ಅಂದು ಧರಿಸಿದ್ದ ಸೀರೆ ಮತ್ತು ಅದರ ಬ್ಲೌಸ್ ಡಿಸೈನ್ ಎಲ್ಲರ ಗಮನ ಸೆಳೆದಿದೆ. ನಮ್ರತಾ ಅವರ ಈ ಬ್ಲೌಸ್ ನ ಬೆಲೆ ಎಷ್ಟಿರಬಹುದು ಎನ್ನುವ ಕುತೂಹಲ ಎಲ್ಲರಿಗೂ ಮೂಡಿದ್ದು, ಇದರ ಬಗ್ಗೆ ಮಾಹಿತಿ ಸಿಕ್ಕಿದೆ. ನಮ್ರತಾ ಅವರು ಯಾವಾಗಲೂ ಪ್ರಿಫರ್ ಮಾಡುವ ಟೈನಾಟ್ ಫ್ಯಾಶನ್ ಸಂಸ್ಥೆಯಲ್ಲಿ ಬ್ಲೌಸ್ ಮತ್ತು ಸೀರೆ ಡಿಸೈನ್ ಮಾಡಲಾಗಿದ್ದು, ಅದರ 1500 ರೂಪಾಯಿಗಳು ಎಂದು ತಿಳಿದು ಬಂದಿದೆ.