ಇದ್ದಕ್ಕಿದ್ದ ಹಾಗೆ ಸೋನು ಗೌಡ ರವರಿಗೆ ಮೈ ಚಳಿ ಬಿಡಿದ ಸುದೀಪ್; ವರ್ತನೆ ನೋಡಿ, ಕಿಚ್ಚನೇ ಬಂದು ಹೇಳಿದ್ದೇನು ಗೊತ್ತೇ??

ಬಿಗ್ ಬಾಸ್ ಕನ್ನಡ ಓಟಿಟಿ ಮೊದಲ ಸೀಸನ್ ಶುರುವಾಗಿ ಒಂದು ವಾರ ಕಳೆದಿದೆ. ಮೊದಲ ಎಲಿಮಿನೇಶನ್ ನಲ್ಲಿ ಕಿರಣ್ ಯೋಗೇಶ್ವರ್ ಮನೆಯಿಂದ ಹೊರಬಂದಿದ್ದಾರೆ. ಬಿಗ್ ಮನೆಯಲ್ಲಿ ಹೆಚ್ಚು ಸುದ್ದಿಯಾಗುತ್ತಿರುವುದು ಸೋನು ಶ್ರೀನಿವಾಸ್ ಗೌಡ ಎಂದರೆ ತಪ್ಪಾಗುವುದಿಲ್ಲ. ಸೋನು ಅವರು ಸೋಷಿಗಲ್ ಮೀಡಿಯಾದಲ್ಲಿ ರೀಲ್ಸ್ ಗಳನ್ನು ಮಾಡುತ್ತಾ, ಫೋಟೋಸ್ ಶೇರ್ ಮಾಡುತ್ತಾ ಫೇಮಸ್ ಆದವರು. ಕೆಲವೊಮ್ಮೆ ಟ್ರೋಲ್ ಸಹ ಆಗಿದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ ಬಂದಿದ್ದಾರೆ..

ಬಿಗ್ ಬಾಸ್ ಮನೆಯಲ್ಲಿ ಸೋನು ಗೌಡ ವರ್ತನೆ ಹಲವರಿಗೆ ಇಷ್ಟವಾಗಿಲ್ಲ. ಮನೆಯ ಸ್ಪರ್ಧಿಗಳು ಸೋನು ಗೌಡ ಇಂದ ಕೆಲವೊಮ್ಮೆ ಇರಿಟೇಟ್ ಸಹ ಆಗಿದ್ದಾರೆ. ಸೋನು ಗೌಡ ತನಗೆ ಒಂದು ನ್ಯಾಯ, ಮತ್ತೊಬ್ಬರಿಗೆ ಬೇರೆ ನ್ಯಾಯ ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ. ಇದನ್ನು ಈಗಾಗಲೇ ಎಲ್ಲರೂ ಗಮನಿಸಿದ್ದು, ಸುದೀಪ್ ಅವರ ಎದುರು ಸೋನು ಗೌಡ ಇದೇ ರೀತಿ ವರ್ತನೆ ಮಾಡಿದ್ದು, ಕಿಚ್ಚ ಸುದೀಪ್ ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ವೀಕೇಂಡ್ ಎಪಿಸೋಡ್ ನಲ್ಲಿ ಸುದೀಪ್ ಅವರು ಎಂದಿನ ಹಾಗೆ ಎಸ್ ಆರ್ ನೋ ರೌಂಡ್ ನಡೆಸುತ್ತಿದ್ದರು.

ಆಗ ಮನೆಯ ಸ್ಪರ್ಧಿಗಳು ಸೋನು ಬಗ್ಗೆ ತಮಾಷೆ ಮಾಡಿದ್ದು, ಅದನ್ನು ಸೋನು ಗಂಭೀರವಾಗಿ ತೆಗೆದುಕೊಂಡು ಕೋಪ ಮಾಡಿಕೊಂಡಿದ್ದಾರೆ. ಸುದೀಪ್ ಅವರ ಎದುರಲ್ಲೇ ಆ ರೀತಿ ರಿಯಾಕ್ಟ್ ಮಾಡಿದ್ದು, ಕಿಚ್ಚ ಸುದೀಪ್ ಅವರು ಸೋನು ಗೌಡ ಗೆ ವಾರ್ನಿಂಗ್ ಕೊಟ್ಟಿದ್ದಾರೆ, ನೀವು ತಮಾಷೆ ಮಾಡಿದಾಗ ಬೇರೆಯವರು ಅದನ್ನು ತೆಗೆದುಕೊಳ್ಳಬೇಕು, ಅದೇ ರೀತಿ ಬೇರೆಯವರು ತಮಾಷೆ ಮಾಡಿದಾಗ ನೀವು ತೆಗೆದುಕೊಳ್ಳುವುದಿಲ್ಲ. ನೀವು ತಮಾಷೆ ಮಾಡಿದಾಗ, ಅವರು ಕೂಡ ರೇಗಾಡಬಹುದಿತ್ತಲ್ಲ, ಇನ್ನುಮೇಲೆ ನೀವು ಬೇರೆಯವರ ಮೇಲೆ ಲೇವಡಿ ಮಾಡುವ ಹಾಗಿಲ್ಲ. ಆ ರೀತಿ ಮಾಡಿದರೆ. ಈ ಶೋ ನಡೆಯಲ್ಲ..” ಎಂದಿದ್ದಾರೆ ಕಿಚ್ಚ ಸುದೀಪ್.