ಪ್ರತಿಯೊಬ್ಬರ ಮನೆಯಲ್ಲೂ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೇ ಇರುತ್ತದೆ. ಅವುಗಳನ್ನು ಹೇಗಾದರೂ ಮಾಡಿ ಬಗೆಹರಿಸಿಕೊಳ್ಳಬೇಕು ಎಂದು ಎಲ್ಲರೂ ಪ್ರಯತ್ನ ಮಾಡುತ್ತಾರೆ. ಅದರಲ್ಲೂ ಹಣದ ಸಮಸ್ಯೆಗಳು ಎಲ್ಲರಿಗು ಹೆಚ್ಚಿನ ಬಾಧೆ ಕೊಡುತ್ತದೆ. ಅದರಿಂದ ಹೊರಬರಬೇಕು ಎಂದು ಬಯಸುತ್ತಾರೆ. ಆ ಸಮಸ್ಯೆಗಳಿಂದ ಹೊರಬರಲು ನೀವು ನಿಮ್ಮ ಮನೆಯಲ್ಲಿ ಕೆಲವು ವಸ್ತುಗಳನ್ನು ಇಟ್ಟರೆ ಸಾಕು. ಆ ವಸ್ತುಗಳು ಯಾವುದು ಎಂದು ತಿಳಿಸುತ್ತೇವೆ ನೋಡಿ..
ಆಮೆ :- ಹಿಂದೂ ಧರ್ಮದಲ್ಲಿ ಆಮೆಯನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಐಶ್ವರ್ಯದ ದೇವತೆ ಲಕ್ಷ್ಮೀದೇವಿ ಕೆಲವು ಕಡೆಗಳಲ್ಲಿ ನೆಲೆಸಿದ್ದಾಳೆ ಎನ್ನುವ ನಂಬಿಕೆ ಇದೆ. ನಿಮ್ಮ ಮನೆ ಅಥವಾ ಕೆಲಸ ಮಾಡುವ ಕಡೆ ಉತ್ತರ ದಿಕ್ಕಿನಲ್ಲಿ ಲೋಹದ ಆಮೆಯನ್ನು ಇಟ್ಟರೆ ನಿಮ್ಮ ಸಮಸ್ಯೆಗಳು ಪರಿಹಾರ ಆಗುತ್ತದೆ ಎನ್ನುವ ನಂಬಿಕೆ ಇದೆ.
ಮೂರು ಕಾಲಿನ ಕಪ್ಪೆ :- ಫೆಂಗ್ ಶೂಯಿಯಲ್ಲಿ ಮೂರು ಕಾಲಿನ ಕಪ್ಪೆಯನ್ನು ಒಳ್ಳೆಯದು ಎಂದು ಹೇಳುತ್ತಾರೆ. ಬಾಯಲ್ಲಿ ನಾಣ್ಯ ಇರುವ ಮೂರು ಕಾಲಿನ ಕಪ್ಪೆಯನ್ನು ನಿಮ್ಮ ಮನೆಯ ಮುಖ್ಯ ದ್ವಾರದ ಹತ್ತಿರ ಅಥವಾ ನಿಮ್ಮ ಮನೆಯ ಸಂಪತ್ತಿನ ಬಳಿ ಇಟ್ಟರೆ, ಹಣದ ಒಳಹರಿವು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ. ನಿಮ್ಮ ಮನೆಯ ಪರಿಸ್ಥಿತಿ ಬೇಗ ಸುಧಾರಿಸುತ್ತದೆ.
ಲಾಫಿಂಗ್ ಬುದ್ಧ :- ಇವರನ್ನು ಮನೆಗಳಲ್ಲಿ ಮತ್ತು ಕಚೇರಿಗಳಲ್ಲಿ ನೋಡಬಹುದು. ಫೆಂಗ್ ಶೂಯಿ ಪ್ರಕಾರ ಇದು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ. ಸಂತೋಷ ಸಮೃದ್ಧಿ ಎರಡನ್ನು ಸಹ ಲಾಫಿಂಗ್ ಬುದ್ಧ ತರುತ್ತಾನೆ ಎಂದು ಹೇಳಲಾಗುತ್ತದೆ.
ಕ್ರಿಸ್ಟಲ್ :- ಫೆಂಗ್ ಶೂಯಿ ಪ್ರಕಾರ ಕ್ರಿಸ್ಟಲ್ ಪಾಸಿಟಿವ್ ಏನರ್ಜಿಯನ್ನು ಹೆಚ್ಚಿಸುತ್ತದೆ. ಇದಕ್ಕಾಗಿ ಬಿಳಿ ಸ್ಫಟಿಕವನ್ನು ಇಡುತ್ತಾರೆ. ಇದನ್ನು ವಾಯುವ್ಯ ದಿಕ್ಕಿನಲ್ಲಿ ಇಡುತ್ತಾರೆ.
ಮೂರು ಚೀನಿ ನಾಣ್ಯಗಳು :- ಇವುಗಳನ್ನು ಫೆಂಗ್ ಶೂಯಿಯಲ್ಲಿ ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಈ ನಾಣ್ಯಗಳನ್ನು ಕೆಂಪು ದಾರ ಅಥವಾ ರಿಬ್ಬನ್ ನಲ್ಲಿ ಕಟ್ಟುವುದರಿಂದ ಒಬ್ಬ ವ್ಯಕ್ತಿ ಶ್ರೀಮಂತನಾಗಿ ಬೆಳೆಯುತ್ತಾನೆ ಎನ್ನಲಾಗುತ್ತಿದೆ.