ಶನಿ ದೇವನ ಕೃಪೆ ಮೂರು ರಾಶಿಗಳಿಗೆ ಆರಂಭ: ಮಕರ ರಾಶಿ ಪ್ರವೇಶದಿಂದ ಶನಿ ದೇವರ ಆಶೀರ್ವಾದ ಪಡೆಯುತ್ತಿರುವುದು ಯಾರು ಗೊತ್ತೆ??

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಅತಿಹೆಚ್ಚು ನಿಧಾನವಾಗಿ ಚಲಿಸುವ ಗ್ರಹ ಆಗಿದೆ. ಎಲ್ಲಾ ವ್ಯಕ್ತಿಗಳಿಗೂ ಕರ್ಮಫಲ ನೀಡುವವನು ಶನಿ. ಶನಿಯು ನಿಧಾನವಾಗಿ ಚಲಿಸುವ ಕಾರಣ, ಅವನ ಪ್ರಭಾವ ಎಲ್ಲಾ ರಾಶಿಗಳ ಮೇಲೆ ದೀರ್ಘವಾಗಿ ಇರುತ್ತದೆ. ಶನಿಯು ಜುಲೈ 12ರಂದು ಮಕರ ರಾಶಿಯನ್ನು ಪ್ರವೇಶ ಮಾಡಿದ್ದು, 6 ತಿಂಗಳು ಅಂದರೆ ಸುಮಾರು 145 ದಿನಗಳ ಕಾಲ ಅದೇ ರಾಶಿಯಲ್ಲಿ ಇರಲಿದ್ದಾನೆ, ಜನವರಿ 23, 2023ರಂದು ಶನಿಯು ಕುಂಭ ರಾಶಿಗೆ ಬರಲಿದ್ದಾನೆ. ಇದರಿಂದಾಗಿ ಒಳ್ಳೆಯ ಫಲ ಪಡೆಯುವ 3 ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಬ್ಯುಸಿನೆಸ್ ಮಾಡುತ್ತಿರುವವರು ಹೆಚ್ಚಿನ ಲಾಭ ಪಡೆಯುತ್ತಾರೆ. ಇವರ ಆದಾಯ ಹೆಚ್ಚಾಗಲಿದೆ. ಹೊಸ ಕೆಲಸ ಸಹ ಹುಡುಕಿ ಬರಬಹುದು. ನಿಮ್ಮ ಕೆಲಸದ ಶೈಲಿ ಬದಲಾಗಿ, ಉನ್ನತ ಅಧಿಕಾರಿಗಳಿಂದ ಮೆಚ್ಚುಗೆ ಪಡೆದು, ಕೆಲಸದಲ್ಲಿ ಬಡ್ತಿ ಪಡೆಯುತ್ತೀರಿ.

ಮೀನಾ ರಾಶಿ :- ಶನಿ ಮಕರ ರಾಶಿಗೆ ಪ್ರವೇಷ ಮಾಡಿದಾಗ, ಮೀನ ರಾಶಿಯವರಿಗೆ ಒಳ್ಳೆಯ ಸಮಯ ಶುರುವಾಗುತ್ತದೆ. ಈ ರಾಶಿಯಲ್ಲಿ ಶನಿ 11ನೇ ಮನೆಯಲ್ಲಿ ಹಿಮ್ಮುಖವಾಗಿ ಸಂಚಾರ ಶುರು ಮಾಡಲಿದ್ದಾನೆ. ಇದು ಆದಾಯ ಮತ್ತು ಆರ್ಥಿಕ ಅಂಶ ಆಗಿದೆ. ಈ ಸಮಯದಲ್ಲಿ ಮೀನ ರಾಶಿಯವರು ಹೆಚ್ಚಾಗಿ ಹಣ ಗಳಿಸಿ, ಹೆಚ್ಚಿನ ಲಾಭ ಪಡೆಯುತ್ತಾರೆ. ಬ್ಯುಸಿನೆಸ್ ಮಾಡುವವರಿಗೆ ಇದು ಒಳ್ಳೆಯ ಸಮಯ ಆಗಿದೆ.

ಧನು ರಾಶಿ :- ಷೇರು ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿರುವವರು, ಹಾಗೂ ಲಾಟರಿ ತೆಗೆದುಕೊಳ್ಳುವ ಅಭ್ಯಾಸ ಇರುವವರಿಗೆ ಲಾಭ ಹೆಚ್ಚಾಗುತ್ತದೆ. ಇದರಿಂದ ಆದಾಯ ಜಾಸ್ತಿಯಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭದ ಮುನ್ಸೂಚನೆ ಸಿಗುತ್ತದೆ. ವಾಹನ ಮತ್ತು ಆಸ್ತಿ ಖರೀದಿ ಮಾಡಲು ಇದು ಒಳ್ಳೆಯ ಸಮಯ ಆಗಿರುತ್ತದೆ.