ಬಿಗ್ ಬಾಸ್ ಮನೆಯಲ್ಲಿ ಬಾರಿ ಸದ್ದು ಮಾಡುತ್ತಿರುವ ಸೋನು ಗೌಡ ರವರಿಗೆ ಬಿಟ್ಟು ಬ್ರೇಕ್: ಮುಟ್ಟಿ ನೋಡಿಕೊಳ್ಳುವಂತೆ ಉತ್ತರ. ಏನಾಗಿದೆ ಗೊತ್ತೇ ದೊಡ್ಮನೆಯಲ್ಲಿ??

ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸುದ್ದಿಯಾಗುತ್ತಿರುವುದು ಸೋನು ಗೌಡ. ಮೊದಲ ವಾರವೇ ಮನೆಯಲ್ಲಿ ಒಂದಲ್ಲಾ ಹೆಚ್ಚು ಅವಾಂತರ ಮಾಡಿಕೊಂಡ ಸೋನು ಗೌಡ, ಮೊದಲ ವಾರವೇ ನಾಮಿನೇಟ್ ಆಗಿ, ವೀಕೆಂಡ್ ಎಪಿಸೋಡ್ ನಲ್ಲಿ ಹೆಚ್ಚಿನ ವೋಟ್ಸ್ ಬಂದು ಉಳಿದುಕೊಂಡರು. ಆದರೆ ಈ ವಾರ ಸಹ ಸೋನು ಗೌಡ ನಾಮಿನೇಟ್ ಆಗಿದ್ದಾರೆ. ಅದಕ್ಕೆ ಕಾರಣ ಬಿಗ್ ಬಾಸ್ ಮನೆಯ ಹ್ಯಾಂಡ್ಸಮ್ ಹುಡುಗ ಜಶ್ವಂತ್ ಆಗಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು ಎಂದು ತಿಳಿಸುತ್ತೇವೆ ನೋಡಿ..

ಎರಡನೇ ವಾರದ ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ನಡೆದಿದೆ. ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಫನ್ ಟಾಸ್ಕ್ ನೀಡಿದ್ದರು. ಇದು ಮ್ಯೂಸಿಕಲ್ ಚೇರ್ ರೀತಿಯ ಟಾಸ್ಕ್ ಆಗಿತ್ತು. ಈ ಟಾಸ್ಕ್ ನಲ್ಲಿ ಸೋನು ಗೌಡ ಅವರಿಗೆ ಒಬ್ಬರನ್ನು ನಾಮಿನೇಟ್ ಮಾಡಬೇಕು ಎಂದು ಬರುತ್ತದೆ. ಆಗ ಸೋನು ಗೌಡ ನಂದು ಅವರನ್ನು ನಾಮಿನೇಟ್ ಮಾಡಿ, ನಂದು ಸಕ್ಕತ್ತಾಗಿ ಆಟ ಆಡುತ್ತಾಳೆ, ನನಗೆ ಟಫ್ ಕಾಂಪಿಟೇಟರ್ ಅದಕ್ಕೆ ನಾಮಿನೇಟ್ ಮಾಡುತ್ತೇನೆ ಎಂದು ಹೇಳಿದರು. ನಂತರ ಜಶ್ವಂತ್ ಅವರಿಗೂ ಇದೆ ಅವಕಾಶ ಸಿಕ್ಕಿತು.

ಆಗ ಜಶ್ವಂತ್ ಸೋನು ಅವರನ್ನು ನಾಮಿನೇಟ್ ಮಾಡಿದ್ದಾರೆ. ಸೋನು ಎಲ್ಲರ ಜೊತೆಗೆ ಬೆರೆಯುತ್ತಿಲ್ಲ. ಜೊತೆಗೆ ಸೋನು ನನ್ನ ಗರ್ಲ್ ಫ್ರೆಂಡ್ ನ ನಾಮಿನೇಟ್ ಮಾಡಿದ್ದಾಳೆ, ಅದಕ್ಕೆ ನಾನು ನಾಮಿನೇಟ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಸೋನು ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ಸೋನು ಮೊದಲ ವಾರವೇ ಮನೆ ಇಂದ ಹೊರಬರುತ್ತಾರೆ ಎಂದು ನೆಟ್ಟಿಗರು ಅಂದುಕೊಂಡಿದ್ದರು. ಆದರೆ ಮೊದಲ ವಾರ ಸೋನು ಸೇಫ್ ಆಗಿದ್ದಾರೆ. ಎರಡನೇ ವಾರ ಸಹ ಅವರು ನಾಮಿನೇಟ್ ಆಗಿದ್ದು, ಎರಡನೆ ವಾರ ಮನೆಯಿಂದ ಹೊರಬರುತ್ತಾರಾ ಎಂದು ಕಾದು ನೋಡಬೇಕಿದೆ.