ಕಳೆದ ಕೆಲವು ದಿನಗಳಿಂದ ಫುಲ್ ಫೇಮಸ್ ಆಗಿರುವ ಕಾಫೀ ನಾಡು ಚಂದ್ರು ರವರ ಸಂಪಾದನೆ ಎಷ್ಟಾಗಿದೆ ಗೊತ್ತೇ??

ಕಾಫಿನಾಡು ಚಂದು, ಈ ಹೆಸರನ್ನು ಕೇಳದೆ ಇರುವವರು ಈಗಿನ ದಿನಗಳಲ್ಲಿ ಇರಲು ಸಾಧ್ಯವಿಲ್ಲ ಎಂದರೆ ತಪ್ಪಾಗುವದಿಲ್ಲ. ಯಾಕಂದ್ರೆ ಕಾಫಿನಾಡು ಚಂದು ಹೆಸರು ಈಗ ಅಷ್ಟೇ ಪಾಪ್ಯುಲರ್ ಆಗಿದೆ. ಈತನ ವಿಡಿಯೋಗಳು, ಬರ್ತ್ ಡೇ ವಿಶ್ ಗಳು ಬಹಳ ಮನರಂಜನೆ ನೀಡುತ್ತಿವೆ. ಈತನೆ ಹೇಳಿಕೊಂಡಿರುವ ಹಾಗೆ, ಇವನ ಹೆಸರು ಕಾಫಿನಾಡು ಚಂದು, ಆಟೋ ಓಡಿಸುವುದು ಇವನ ವೃತ್ತಿ. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ತನ್ನದೇ ಆದ ಸ್ಟೈಲ್ ನಲ್ಲಿ ವಿಡಿಯೋಗಳಲ್ಲಿ ಮಾತನಾಡುತ್ತಾ ಫೇಮಸ್ ಆಗಿದ್ದಾನೆ.

ಕಾಫಿನಾಡು ಚಂದು ಮಾಡುವ ಬರ್ತ್ ಡೇ ವಿಶ್ ಗಳು ಭಾರಿ ವೈರಲ್ ಆಗುತ್ತವೆ. ಹಲವಾರು ಜನರು ಕಾಫಿನಾಡು ಚಂದು ಇಂದ ವಿಶ್ ಮಾಡಿಸಿಕೊಳ್ಳಬೇಕು ಎಂದು ಬಯಸುವ ಮಟ್ಟಿಗೆ, ಈ ವ್ಯಕ್ತಿಯ ವಿಡಿಯೋ ಗಳು ವೈರಲ್ ಆಗಿದೆ. ನಾನು ಕಾಫಿನಾಡು ಚಂದು ಎಂದೇ ವಿಡಿಯೋ ಶುರು ಮಾಡುತ್ತಾರೆ. ತಮ್ಮ ಸ್ನೇಹಿತರಿಗೆ, ಕುಟುಂಬದವರಿಗೆ ವಿಶ್ ಮಾಡಿ ಎಂದು ಹಲವರು ಈತನ ಬಳಿ ಮನವಿ ಮಾಡಿಕೊಳ್ಳುತ್ತಾರೆ. ಜನರು ತುಂಬಾ ಫೋರ್ಸ್ ಮಾಡುವುದರಿಂದ ಒಂದು ವಿಶ್ ಗೆ 50 ಅಥವಾ 100 ರೂಪಾಯಿ ತೆಗೆದುಕೊಳ್ಳುತ್ತಾನೆ. ಆದರೆ ಈತನಿಗೆ ಜೀವನ ನಡೆಸಲು ಇರುವುದು ಆಟೋ ಮಾತ್ರ.

ಕಾಫಿನಾಡು ಚಂದು ಆಟೋ ಓಡಿಸಿ ಮತ್ತು ಈ ವಿಶ್ ಗಳಿಂದ ಬಂದ ಹಣವನ್ನು ತನ್ನ ಖರ್ಚಿಗೆ ಬೇಕಾದಷ್ಟು, ಆಟೋ ಇಂಧನ ಖರ್ಚಿಗೆ ಇಟ್ಟುಕೊಂಡು, ಇನ್ನುಳಿದ ಹಣವನ್ನು ಈತ ಬಡ ಮಕ್ಕಳಿಗೆ ಪೆನ್ ಪೆನ್ಸಿಲ್ ಕೊಡಿಸಲು ಉಪಯೋಗಿಸಿಕೊಳ್ಳುತ್ತಾನೆ. ಜನರಿಗೆ ಸಹಾಯ ಮಾಡುತ್ತಾನೆ. ಅಷ್ಟೇ ಅಲ್ಲದೆ, ಹವ್ಯಾಸಗಾಗಿ ಗಿಡಗಳನ್ನು ನೆಡುವುದು ಸಹ ಈ ವ್ಯಕ್ತಿಯ ಅಭ್ಯಾಸ. ಓದಿರುವ, ಶ್ರೀಮಂತರಿಗೂ ಇಲ್ಲದ ಗಿಡ ನೆಡುವ ಗುಣ ಈತನಲ್ಲಿ ಇರುವುದು ಬಹಳ ಒಳ್ಳೆಯ ವಿಚಾರ ಎಂದರೆ ತಪ್ಪಾಗುವುದಿಲ್ಲ. ಕಾಫಿನಾಡು ಚಂದು, ತನ್ನಷ್ಟಕ್ಕೆ ತಾನು ಈ ರೀತಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.