ಬಿಗ್ ಷಾಕಿಂಗ್: ಮದುವೆಯಾಗಿದ್ದವನನ್ನು ಪ್ರೀತಿಸಿ ಮದುವೆಯಾಗಿದ್ದ ಪ್ರಿಯಾಮಣಿ ಈಗ ವಿಚ್ಚೇದನ: ಯಾಕೆ ಅಂತೇ ಗೊತ್ತೇ?? ಏನೆಲ್ಲಾ ನಡೆದಿದೆ ಗೊತ್ತೇ??

ಏನಾಗುತ್ತಿದೆಯೋ ಗೊತ್ತಿಲ್ಲ.. ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಟಾಲಿವುಡ್, ಕಾಲಿವುಡ್, ಬಾಲಿವುಡ್ ಹೀಗೆ ಎಲ್ಲಿ ನೋಡಿದರೂ ಸ್ಟಾರ್ ಜೋಡಿಗಳು ಬೇರ್ಪಡುವ ಘಟನೆಗಳು ಹೆಚ್ಚುತ್ತಲೇ ಇವೆ. ಸಮಂತಾ ನಾಗಚೈತನ್ಯ, ಧನುಷ್-ಐಶ್ವರ್ಯ ಜೊತೆಗೆ ಅಮೀರ್ ಖಾನ್ ಕೂಡ ಪತ್ನಿಯಿಂದ ಬೇರ್ಪಟ್ಟರು. ಹೀಗೇ ಬ್ರೇಕಪ್ ಆಗುತ್ತಿರುವ ಹೊತ್ತಿನಲ್ಲಿ ಇದೀಗ ಮತ್ತೊಬ್ಬ ಹೀರೋಯಿನ್ ತನ್ನ ಪತಿಗೆ ವಿಚ್ಛೇದನ ನೀಡಲು ರೆಡಿಯಾಗಿದ್ದಾರೆ. ನಟಿಯಾಗಿ ಅವರಿಗೆ ಒಳ್ಳೆಯ ಕ್ರೇಜ್ ಇದೆ. ದಕ್ಷಿಣ ಭಾರತದಲ್ಲಿ ಟಾಪ್ ಹೀರೋಗಳ ಜೊತೆ ನಟಿಸಿ ಗುರುತಿಸಿಕೊಂಡಿದ್ದಾರೆ.

ವೃತ್ತಿಜೀವನ ಉತ್ತುಂಗದಲ್ಲಿರುವಾಗಲೇ ಪ್ರೇಮ ವಿವಾಹವಾಗಿತ್ತು. ಇಲ್ಲಿ ಅಸಲಿ ವಿಷಯ ಏನಪ್ಪಾ ಅಂದ್ರೆ ಈಕೆಗಯ ಪತಿ ಮುಸ್ತಫಾ ಅವರಿಗೆ ಈಗಾಗಲೇ ಮದುವೆ ಆಗಿದೆ. ಆದರೆ ಪ್ರಿಯಾಮಣಿ ಮುಸ್ತಫಾ ಎಲ್ಲರ ಸಮ್ಮುಖದಲ್ಲಿ ಪ್ರೀತಿಸಿ ಮದುವೆಯಾದರು. ಆ ವೇಳೆ ಮುಸ್ತಫಾ ಮೊದಲ ಪತ್ನಿ, ಪ್ರಿಯಾಮಣಿ ಅವರ ವಿರುದ್ಧ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಪ್ರಿಯಾಮಣಿ ಸ್ವಲ್ಪವೂ ಹೆದರಲಿಲ್ಲ. ಪತಿಯೊಂದಿಗೆ ಇರುವುದಾಗಿ ಹೇಳಿದ್ದರು. ಅಂದಿನಿಂದ ದಂಪತಿಗಳು ಒಟ್ಟಿಗೆ ವಾಸಿಸುತ್ತಿದ್ದಾರೆ. ಇನ್ನು ಎರಡನೇ ಇನ್ನಿಂಗ್ಸ್ ನಲ್ಲಿ ಒಳ್ಳೆ ಆಫರ್ ಗಳು ಬರುವಾಗಲೇ ಪ್ರಿಯಾಮಣಿ ವಿಚ್ಛೇದನಕ್ಕೆ ರೆಡಿ ಎಂಬ ಗುಸುಗುಸು ಶುರುವಾಗಿದೆ. ಈ ಸುದ್ದಿ ಈಗ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ.

ಮದುವೆಯಾಗಿ ವರ್ಷಗಳೇ ಕಳೆದರೂ ಇನ್ನು ಮಕ್ಕಳಾಗಿಲ್ಲ. ತಮ್ಮ ವೃತ್ತಿಜೀವನದಲ್ಲಿ ಚೆನ್ನಾಗಿ ಸೆಟ್ ಆದ ನಂತರ ಪ್ರಿಯಾಮಣಿ ಮಕ್ಕಳಿಗೆ ಕಂಡೀಷನ್ ಮಾಡುತ್ತಿದ್ದಾರೆ. ಇದು ಪತಿಗೆ ಇಷ್ಟವಾಗದ ಕಾರಣ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಇವುಗಳು ಅತಿಯಾಗಿರುವುದರಿಂದ ಪ್ರಿಯಾಮಣಿ ಆ ಸಂಬಂಧಕ್ಕೆ ವಿಚ್ಛೇದನ ನೀಡಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಪ್ರಿಯಾಮಣಿ ಅಥವಾ ಅವರ ಪತಿ ಇನ್ನು ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಪ್ರಿಯಾಮಣಿ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಿದೆ.