ನಿಮ್ಮ ಮನೆಗೆ ಹಣ ಹುಡುಕಿಕೊಂಡು ಬರಬೇಕು ಎಂದರೆ ಈ ವಸ್ತು ಇಡಿ ಸಾಕು, ಅನಿರೀಕ್ಷಿತ ಹಣ ಬೇಡ ಬೇಡ ಎಂದರು ಹುಡುಕಿಕೊಂಡು ಬರುತ್ತದೆ.

ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ, ಕೆಲವು ವಸ್ತುಗಳನ್ನು ನಿಮ್ಮ ಮನೆಯಲ್ಲಿ ಅಥವಾ ಅಕ್ಕಪದಲ್ಲಿ ಇಡುವುದರಿಂದ ನೀರಿಕ್ಷೆ ಮಾಡದೆಯೇ ಲಾಭ ಬರುತ್ತದೆ. ಇಂತಹ ವಸ್ತುಗಳನ್ನು ಮನೆಯ ಬಾಲ್ಕನಿಯಲ್ಲಿ ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ, ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಕುಟುಂಬದಲ್ಲಿ ಸಂತೋಷದ ವಾತಾವರಣ ಶುರುವಾಗುತ್ತದೆ.
ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಲು, ಅಥವಾ ಜೀವನದಲ್ಲಿ ಸಮೃದ್ಧಿ ಪಡೆಯಲು ವಾಸ್ತು ಶಾಸ್ತ್ರದಲ್ಲಿ ಕೆಲವು ದಾರಿಗಳಿವೆ. ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಮನೆಯಲ್ಲಿನ ಕೆಲವು ವಸ್ತುಗಳುಜೀವನದ ಮೇಲೆ ಪರಿಣಾಮ ಬೀರುತ್ತವೆ. ಅಂತಹ ವಸ್ತುಗಳನ್ನು ಸರಿಯಾದ ಸ್ಥಳದಲ್ಲಿ ಹಾಗೂ ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಹೀಗೆ ಯಾವ ವಸ್ತುವನ್ನು ಎಲ್ಲಿಡಬೇಕು, ಯಾವ ದಿಕ್ಕಿನಲ್ಲಿ ಇಡಬೇಕು ಎಂದು ತಿಳಿಸುತ್ತೇವೆ ನೋಡಿ..

ತುಳಸಿ ಗಿಡ :- ಹಿಂದೂ ಸಂಪ್ರದಾಯದ ಪ್ರಕಾರ, ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿ ತುಳಸಿ ಗಿಡದಲ್ಲಿ ನೆಲೆಸಿದ್ದಾಳೆ. ಹಾಗಾಗಿ ತುಳಸಿ ಗಿಡವನ್ನು ಮನೆಯ ಬಾಲ್ಕನಿಯಲ್ಲಿ ನೆಟ್ಟರೆ ಒಳ್ಳೆಯದು ಎನ್ನುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ಬಾಲ್ಕನಿಯ ಪೂರ್ವ ದಿಕ್ಕಿನಲ್ಲಿ ನೆಡಬೇಕು. ಇದರಿಂದ ವಾಸ್ತು ದೋಷ ಇದ್ದರೆ, ಅವುಗಳನ್ನು ನಿವಾರಣೆ ಆಗುತ್ತದೆ. ಹಣದ ಕೊರತೆ ನೀಗಿ ಆದಾಯವೂ ಹೆಚ್ಚುತ್ತದೆ ಎಂದು ತಜ್ಞರು ಹೇಳುತ್ತಾರೆ. ಮನಿ ಪ್ಲಾಂಟ್ :- ಹಿಂದೂ ಧರ್ಮದ ಪ್ರಕಾರ ಕುಬೇರ ಉತ್ತರ ದಿಕ್ಕಿನಲ್ಲಿದ್ದಾನೆ ಎನ್ನಲಾಗುತ್ತದೆ. ಹಾಗಾಗಿ ಮನಿ ಪ್ಲಾಂಟ್ ಅನ್ನು ಮನೆಯ ಬಾಲ್ಕನಿಯ ಉತ್ತರ ದಿಕ್ಕಿನಲ್ಲಿ ಇಡಬೇಕು. ಮನಿ ಪ್ಲಾಂಟ್ ನೆಡುವುದರಿಂದ ಹೆಚ್ಚಿನ ಹಣ ಬರುತ್ತದೆ. ಮನೆ ಮುಂದೆ ಮನಿ ಪ್ಲಾಂಟ್ ಬೆಳೆಸಿ, ಇದನ್ನು ಮನೆಯ ಹಿಂದೆ ಹಾಕಿದರೆ ಲಾಭವಿಲ್ಲ. ಈ ಗಿಡಕ್ಕೆ ಹೆಚ್ಚು ನೀರು ಹಾಕುವ ಅವಶ್ಯಕತೆ ಸಹ ಇಲ್ಲ. ಬಳ್ಳಿಯಂತೆ ಈ ಗಿಡ ಬೆಳೆಯುತ್ತದೆ. ಮನಿ ಪ್ಲಾಂಟ್ ಗೆ ಹಗ್ಗದ ಆಸರೆ ಸಾಕು.

ತಾಮ್ರದ ಸೂರ್ಯ :- ಧಾರ್ಮಿಕ ನಂಬಿಕೆಗಳ ಪ್ರಕಾರ, ತಾಮ್ರದ ಲೋಹವು ಸೂರ್ಯ ಗ್ರಹದೊಂದಿಗೆ ಸಂಬಂಧಿಸಿದೆ. ಆದ್ದರಿಂದ ತಾಮ್ರದ ಸೂರ್ಯನ ಪ್ರತಿಮೆಯನ್ನು ನಿಮ್ಮ ಮನೆಯ ಬಾಲ್ಕನಿಯಲ್ಲಿ ಇಡಬೇಕು. ವಾಸ್ತು ಪ್ರಕಾರ ತಾಮ್ರದ ಸೂರ್ಯನನ್ನು ಬಾಲ್ಕನಿಯ ಪೂರ್ವ ದಿಕ್ಕಿನಲ್ಲಿ ಇಡುವುದು ಒಳ್ಳೆಯದು. ಈ ರೀತಿ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ ಜೊತೆಗೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಲಾಫಿಂಗ್ ಬುದ್ಧ :- ಮನೆಯ ಬಾಲ್ಕನಿಯಲ್ಲಿ ಲಾಫಿಂಗ್ ಬುದ್ಧ ಇಡುವುದು ಶುಭ ಎಂದು ಪರಿಗಣಿಸಲಾಗುತ್ತದೆ. ಕೆಲವರು ಇದನ್ನು ಕಚೇರಿಯಲ್ಲಿ ಸಹ ಇಡುತ್ತಾರೆ. ಈ ರೀತಿ ಇಡುವುದು ಸಂಬಂಧಕ್ಕೆ ಸಿಹಿ ತರುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಒತ್ತಡದಲ್ಲಿರುವವರಿಗೆ ಇದನ್ನು ನೋಡಿದರೆ ಸಮಾಧಾನವಾಗುತ್ತದೆ ಎಂದು ಹೇಳುತ್ತಾರೆ..