ಕರ್ಣನನ್ನು ಯುದ್ಧದಲ್ಲಿ ಸೋಲಿಸಿ ಮಹಾಭಾರತ ಯುದ್ಧ ಮುಗಿದ ಬಳಿಕ ಅಹಂಕಾರದಿಂದ ಅರ್ಜುನನ ಎಲ್ಲಾ ಅಹಂಕಾರ ಒಮ್ಮೆ ಇಳಿಯುವಂತೆ ಆಗಿದ್ದು ಹೇಗೆ ಗೊತ್ತೆ??

ನಮಸ್ಕಾರ ಸ್ನೇಹಿತರೇ ನೀವೆಲ್ಲರೂ ಚಿಕ್ಕವಯಸ್ಸಿನಿಂದಲೂ ಕೂಡ ಮಹಾಭಾರತ ಭಗವದ್ಗೀತೆಗಳನ್ನು ಓದಿರುತ್ತೀರಿ ಹಾಗೂ ವಾಹಿನಿಗಳಲ್ಲಿ ದೃಶ್ಯರೂಪದಲ್ಲಿ ನೋಡಿರುತ್ತೀರಿ. ಚಿಕ್ಕವಯಸ್ಸಿನಿಂದಲೂ ಕೂಡ ಪ್ರತಿಯೊಬ್ಬರು ಖಂಡಿತವಾಗಿ ಮಹಾಭಾರತದ ಕುರಿತಂತೆ ತಿಳಿದಿರುತ್ತೀರಿ. ಇಂದು ನಾವು ಮಾತನಾಡಲು ಹೊರಟಿರುವುದು ಮಹಾಭಾರತದ ಹದಿನೆಂಟು ದಿನಗಳ ಯು’ದ್ಧದಲ್ಲಿ ನಡೆದಿರುವಂತಹ ಒಂದು ಘಟನೆಯ ಕುರಿತಂತೆ ನಿಮಗೆ ವಿವರಿಸುವುದಕ್ಕೆ. ಮಹಾಭಾರತ ಸಮರದಲ್ಲಿ ಕರ್ಣಾರ್ಜುನರ ಪರಸ್ಪರ ಕಾದಾಡುತ್ತಿರುತ್ತಾರೆ. ಅರ್ಜುನನಿಗೆ ಸಾರಥಿಯಾಗಿ ಶ್ರೀಕೃಷ್ಣಪರಮಾತ್ಮ ಅವನ ಜೊತೆ ಇರುತ್ತಾನೆ. ಕರ್ಣ ಬಾಣವನ್ನು ಪ್ರಯೋಗಿಸಿದಾಗ ಅರ್ಜುನನ ರಥ ಕೇವಲ ಕೆಲವು ಅಡಿಗಳಷ್ಟು ಮಾತ್ರ ಹಿಂದಕ್ಕೆ ಹೋಗುತ್ತಿತ್ತು.

ಆದರೆ ಅರ್ಜುನ ಬಾಣ ಪ್ರಯೋಗಿಸಿದಾಗ ಕರ್ಣನ ರಥ ಸಾಕಷ್ಟು ಹಿಂದಕ್ಕೆ ಹೋಗುತ್ತಿತ್ತು. ಆದರೂ ಕೂಡ ಶ್ರೀಕೃಷ್ಣಪರಮಾತ್ಮ ಕರ್ಣನ ಪ್ರಯತ್ನವನ್ನು ಸಾರಥಿಯ ಜಾಗದಲ್ಲಿ ಕೂತುಕೊಂಡು ಹೊಗಳುತ್ತಿದ್ದ. ಇದನ್ನು ಅರ್ಜುನ ಕೂಡ ಗಮನಿಸುತ್ತಲೇ ಇದ್ದ. ಹೀಗೆ ಹಲವಾರು ಬಾರಿ ಕೃಷ್ಣ ಕರ್ಣನನ್ನು ಹೊಗಳಿದಾಗ ತಾಳ್ಮೆ ಕಳೆದುಕೊಂಡು ಅರ್ಜುನ ಓ ವಾಸುದೇವ ನನ್ನ ಬಾಣ ತಗುಲಿ ಕರ್ಣನ ರಥ ಹಲವಾರು ಅಡಿಗಳಷ್ಟು ಹಿಂದಕ್ಕೆ ಹೋಗುತ್ತಿದೆ. ಅದಕ್ಕಾಗಿ ನನ್ನನ್ನು ನೀನು ಹೊಗಳುತ್ತಿಲ್ಲ. ಆದರೆ ಆತನ ಬಾಣ ತಗುಲಿ ನನ್ನ ರಥ ಕೇವಲ ಏಳು ಅಡಿಗಳಷ್ಟು ಹಿಂದಕ್ಕೆ ಹೋಗುತ್ತಿದೆ ಅದಕ್ಕಾಗಿ ಆತನನ್ನು ಪರಾಕ್ರಮಿ ಎಂದು ಹೊಗಳುತ್ತಿದ್ದೀಯಲ್ಲ ಇದು ಪಕ್ಷಪಾತ ತಾನೇ ಎಂಬುದಾಗಿ ಶ್ರೀಕೃಷ್ಣ ಪರಮಾತ್ಮನಿಗೆ ಅರ್ಜುನ ಹೇಳುತ್ತಾನೆ.

ಆಗ ಶಾಂತಮೂರ್ತಿ ಆಗಿರುವ ಕೃಷ್ಣ ಪರಮಾತ್ಮ ಖಂಡಿತವಾಗಿ ನೀನು ಸರಿಯಾದದ್ದನ್ನು ಕೇಳಿದ್ದೀಯಾ. ಕರ್ಣನು ನಿಜಕ್ಕೂ ಕೂಡ ಅತಿರಥ ಪರಾಕ್ರಮಿಯೇ. ಯಾಕೆಂದರೆ ನಿನ್ನ ರಥದ ಮೇಲೆ ಬಾವುಟದಲ್ಲಿ ಜಗತ್ತಿನಲ್ಲಿ ಅತ್ಯಂತ ಶಕ್ತಿಶಾಲಿಯಾಗಿರುವ ಆಂಜನೇಯಂ ಇದ್ದಾನೆ. ಮುಂದೆ ಸಾರಥಿಯಾಗಿ ನಾನಿದ್ದೇನೆ. ಇಷ್ಟಿದ್ದರೂ ಕೂಡ ಕರ್ಣ ನಿನ್ನ ರಥವನ್ನು 7 ಅಡಿ ಹಿಂದಕ್ಕೆ ಹೋಗುವಂತೆ ಮಾಡುತ್ತಾನೆ ಎಂದರೆ ಖಂಡಿತವಾಗಿ ಆತ ನಿಜವಾದ ಪರಾಕ್ರಮಿ ಎಂಬುದಾಗಿ ಕೃಷ್ಣಪರಮಾತ್ಮ ಹೇಳುತ್ತಾರೆ. ಆಗ ಅರ್ಜುನನಿಗೂ ಕೂಡ ಇದರ ಅರಿವಾಗಿ ಆತ ಸುಮ್ಮನಿರುತ್ತಾನೆ.

ಇದಕ್ಕೂ ಮುನ್ನ ಅರ್ಜುನನಿಗೆ ತನ್ನ ಪರಾಕ್ರಮದ ಕುರಿತಂತೆ ಅಹಂಕಾರವಿತ್ತು. ತಾನು ತ್ರಿಲೋಕವಿಜಯಿ ಎನ್ನುವ ಅಹಂ ಅವನಲ್ಲಿತ್ತು. ಆದರೆ ಅದು ಸಮರದ ಕೊನೆಯ ದಿನದಲ್ಲಿ ಅರ್ಜುನನಿಗೆ ಸಂಪೂರ್ಣವಾಗಿ ಇಡೀ ಮಹಾಭಾರತ ಕದನದಲ್ಲಿ ಏನಾಯಿತು ಎಂಬುದು ತಿಳಿದುಬರುತ್ತದೆ. ಮಹಾಭಾರತದ ಕೊನೆಯ ದಿನದಲ್ಲಿ ಕೃಷ್ಣ ಅರ್ಜುನನನ್ನು ಮೊದಲು ರಥದಿಂದ ಇಳಿಯಲು ಹೇಳುತ್ತಾನೆ. ಸಾಮಾನ್ಯವಾಗಿ ಕೃಷ್ಣ ದೇವನೆ ಮುಂಚೆ ರಥದಿಂದ ಇಳಿದು ಅರ್ಜುನನಿಗಾಗಿ ಬಾಗಿಲು ತೆರೆಯುತ್ತಿದ್ದ. ಆದರೆ ಈ ಬಾರಿ ಯಾಕೆ ನನ್ನನ್ನು ಮೊದಲು ತಿಳಿಯಲು ಹೇಳಿದ ಎನ್ನುವುದಾಗಿ ಅರ್ಜುನನಿಗೆ ತಿಳಿಯಲಿಲ್ಲ ಆದರೂ ಕೂಡ ರಥದಿಂದಿಳಿದು ದೂರ ನಿಲ್ಲುತ್ತಾನೆ.

ನಂತರ ಕೊನೆಗೆ ಕೃಷ್ಣಪರಮಾತ್ಮ ರಥದಿಂದ ಕೆಳಗೆ ಇಳಿಯುತ್ತಾನೆ ಅದೇ ಕೂಡಲೇ ರಥ ಹೊತ್ತಿ ಉರಿಯುತ್ತದೆ. ಆಗ ಅರ್ಜುನಾ ಕಷ್ಟ ಪರಮಾತ್ಮನಲ್ಲಿ ಇದರ ಕಾರಣ ಕೇಳುತ್ತಾನೆ. ಆಗ ಕಷ್ಟ ಪರಮಾತ್ಮ ಭೀಷ್ಮ ಕರ್ಣ ಕೃಪಾ ದ್ರೋಣಾಚಾರ್ಯರ ಬಾಣಗಳ ಪ್ರಭಾವದಿಂದ ಈ ಮೊದಲೇ ಕದನದಲ್ಲಿ ರಥ ಭಸ್ಮವಾಗಿ ಬಿಟ್ಟಿತ್ತು. ಆದರೆ ನಾನು ನನ್ನ ಯೋಗಮಾಯೆ ಯಿಂದಾಗಿ ರಥವನ್ನು ಮಾಂತ್ರಿಕವಾಗಿ ಸೃಷ್ಟಿಸಿದ್ದೇ ಎಂಬುದಾಗಿ ಕೃಷ್ಣಪರಮಾತ್ಮ ಅರ್ಜುನನಿಗೆ ಹೇಳಿದಾಗ ಅರ್ಜುನನಿಗೆ ತನ್ನ ಪರಾಕ್ರಮದ ಮೇಲೆ ಇಟ್ಟಿದ್ದ ಅಂತಹ ಎಲ್ಲಾ ಅಹಂಕಾರ ಮಳೆ ನೀರಿನಂತೆ ಕೆಳಗಿಳಿದು ಬರುತ್ತದೆ.

ನಾನು ನನ್ನದು ಎನ್ನುವ ಅಹಂಕಾರ ಇರಬಾರದು ಬದಲಾಗಿ ಅಭಿಮಾನ ಇರಬೇಕು. ಇಲ್ಲಿ ಎಲ್ಲವೂ ತನ್ನಿಂದಲೇ ಆಗಿರುವುದು ಎನ್ನುವುದಾಗಿ ಅರ್ಜುನ ಭಾವಿಸಿದ್ದರೆ ಶ್ರೀಕೃಷ್ಣಪರಮಾತ್ಮ ಆತನ ಕಣ್ಣಿಗೆ ಪೊರೆಯಾಗಿ ಅಂಟಿಕೊಂಡಿದ್ದ ಮಾಯೆಯನ್ನು ಸರಿಸಿ ನಿಜ ಜೀವನವನ್ನು ಅರ್ಥ ಮಾಡಿಸುತ್ತಾನೆ. ಇದೇ ಮರ್ಮವನ್ನು ನಾವು ನಮ್ಮ ಜೀವನದಲ್ಲಿ ಕೂಡ ಅಳವಡಿಸಿಕೊಳ್ಳಬೇಕು. ನಾವೇ ನನ್ನಿಂದಲೇ ಎಂದು ಅಂದುಕೊಳ್ಳುವ ಬದಲು ಆ ಪರಮಾತ್ಮನ ಇಚ್ಛೆಯಿಂದ ನಾವು ಈ ಲೋಕದಲ್ಲಿ ಬದುಕುತ್ತಿದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.