ಕೊನೆಗೂ ರಾಹುವಿನ ಸಮಯ ಬಂದೆ ಬಿಡ್ತು: ರಾಹು ಕೃಪೆಯಿಂದ ಧನರಾಜ ಯೋಗ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??

ಗ್ರಹಗಳ ರಾಶಿ ಬದಲಾವಣೆ, ಸ್ಥಾನ ಬದಲಾವಣೆ ಮನುಷ್ಯರ ಜೀವನದ ಪರಿಣಾಮ ಬೀರುತ್ತದೆ. ಇವುಗಳಿಂದಾಗಿ ಕೆಲವು ರಾಶಿಗಳಿಗೆ ಉತ್ತಮ ಫಲ, ಇನ್ನು ಕೆಲವು ರಾಶಿಗಳಿಗೆ ನಕಾರಾತ್ಮಕ ಫಲಿತಾಂಶ ಸಿಗುತ್ತದೆ. ಇದೀಗ ರಾಹು ಗ್ರಹವು ಮೇಷ ರಾಶಿಗೆ ಪ್ರವೇಶ ಮಾಡಲಿದ್ದು, ಇದರಿಂದಾಗಿ ಕೆಲವು ರಾಶಿಗಳಿಗೆ ಅತ್ಯುತ್ತಮವಾದ ಫಲ ಸಿಗಲಿದೆ. ರಾಜಾಯೋಗ ಶುರುವಾಗಲಿದೆ, ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ರಾಹು ಗ್ರಹವು ನಿಮ್ಮ ರಾಶಿಯ 11ನೇ ಮನೆಗೆ ಪ್ರವೇಶ ಮಾಡಲಿದ್ದು, ಇದರಿಂದ ನಿಮಗೆ ಲಾಭವಿದೆ. 11ನೇ ಮನೆಯನ್ನು ಆದಾಯದ ಮನೆ ಎಂದು ಕರೆಯಲಾಗುತ್ತದೆ, ಈ ಸಮಯದಲ್ಲಿ ನೀವು ವ್ಯಾಪಾರಗಳಲ್ಲಿ ಲಾಭ ಪಡೆಯುತ್ತೀರಿ. ಹೊಸ ಆದಾಯದ ಮೂಲಗಳು ಶುರುವಾಗುತ್ತದೆ. ವೃತ್ತಿ ಮತ್ತು ವ್ಯವಹಾರಗಳಲ್ಲಿ ಯಶಸ್ಸು ಪಡೆದು, ವಿದೇಶದಿಂದ ಹಣ ಬರುವ ಸಾಧ್ಯತೆ ಇದೆ. ಈ ರಾಶಿಯ ಅಧಿಪತಿ ಬುಧ ಆಗಿರುವುದರಿಂದ ವ್ಯಾಪಾರ ಲಾಭದಾಯಕ ಆಗಿರುತ್ತದೆ.

ಕರ್ಕಾಟಕ ರಾಶಿ :- ರಾಹುವು ಈ ರಾಶಿಯ 10ನೇ ಮನೆಗೆ ಪ್ರವೇಶ ಮಾಡಲಿದ್ದಾನೆ. ಇದು ವೃತ್ತಿ ಮತ್ತು ಕಾರ್ಯಕ್ಷೇತ್ರದ ಮನೆ ಆಗಿದೆ. ಈ ಸಮಯದಲ್ಲಿ ನಿಮಗೆ ಹೊಸ ಉದ್ಯೋಗದ ಪ್ರಸ್ತಾಪ ಸಿಗಬಹುದು. ಇನ್ನು ಈಗಾಗಲೇ ಕೆಲಸ ಮಾಡುತ್ತಿರುವವರಿಗೆ ಒಳ್ಳೆಯ ಲಾಭ ಯಶಸ್ಸು ಬಡ್ತಿ ಸಿಗುತ್ತದೆ. ವ್ಯಾಪಾರದಲ್ಲಿ ಯಶಸ್ಸು ಪಡೆಯುತ್ತೀರಿ. ಹೊಸ ಬೈಸಿನೆಸ್ ಶುರು ಮಾಡಲು ಇದು ಒಳ್ಳೆಯ ಸಮಯ ಆಗಿದೆ.

ಮೀನ ರಾಶಿ :- ರಾಹು ಗ್ರಹವು ನಿಮ್ಮ ರಾಶಿಯ ಎರಡನೇ ಮನೆಗೆ ಪ್ರವೇಶ ಮಾಡಿದ್ದು, ಇದರಿಂದಾಗಿ ನಿಮಗೆ ರಾಜಯೋಗ ಶುರುವಾಗಲಿದೆ. ಎರಡನೆ ಮನೆ ಮಾತು ಮತ್ತು ಆಡಳಿತದ ಸ್ಥಾನ ಆಗಿದೆ. ಹಾಗಾಗಿ ಹಠಾತ್ ಧನಲಾಭ ಪಡೆಯುತ್ತೀರಿ. ವೃತ್ತಿ ಮತ್ತು ವ್ಯವಹಾರಗಳಲ್ಲಿ ಲಾಭ ಗಳಿಸುತ್ತೀರಿ. ನಿಮ್ಮ ಶಕ್ತಿ ಹೆಚ್ಚಾಗಿ, ಶತ್ರುಗಳು ನಾಶವಾಗುತ್ತಾರೆ. ರಾಜಕೀಯದಲ್ಲಿ ಸಕ್ರಿಯರಾಗಿರುವವರಿಗೆ ಯಶಸ್ಸು ಸಿಗುತ್ತದೆ. ಈ ರಾಶಿಯ ಅಧಿಪತಿ ಗುರು, ಗುರು ಮತ್ತು ರಾಹುವಿಗೆ ಸಂಬಂಧಿಸಿದ ಜನರು ಯಶಸ್ಸು ಪಡೆಯುತ್ತಾರೆ. ಚಿನ್ನದ ರತ್ನ ಧರಿಸುವುದರಿಂದ ಅದೃಷ್ಟ ನಿಮ್ಮದಾಗುತ್ತದೆ.