ಅಲ್ಲೂ ಅರ್ಜುನ್ ರವರ ಕೆ;ಟ್ಟ ಸೆಂಟಿಮೆಂಟ್ ಗೆ ತಮ್ಮ ಸಿನಿ ಜೀವನವನ್ನೇ ಕಳೆದುಕೊಂಡ ನಾಯಕಿಯರು: ಅಲ್ಲು ಅರ್ಜುನ್ ಮಾಡಿದ್ದೇನು ಗೊತ್ತೇ??

ಟಾಲಿವುಡ್‌ನಲ್ಲಿ ಅಲ್ಲು ಅರ್ಜುನ್ ಹೆಸರು ಬ್ರಾಂಡ್ ಆಗಿದೆ. ಐಕಾನ್ ಸ್ಟಾರ್ ಆಗಿ ಕೋಟಿ ಕೋಟಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ, ಇತ್ತೀಚೆಗಷ್ಟೇ ಸುಕುಮಾರ್ ನಿರ್ದೇಶನದಲ್ಲಿ ಪುಷ್ಪ ಸಿನಿಮಾ ಮಾಡಿ ಅದಕ್ಕಿಂತ ಕಮ್ಮಿ ಇಲ್ಲ ಎನ್ನುವುದನ್ನು ಸಾಬೀತು ಪಡಿಸಿದರು. ಪ್ರಥಮ ಬಾರಿಗೆ ನೇರವಾಗಿ ಬಾಲಿವುಡ್ ಗೆ ಹೋದ ಪುಷ್ಪ ಸಿನಿಮಾ ಅಲ್ಲಿ ದಾಖಲೆ ಬರೆದಿತ್ತು. ಇದರೊಂದಿಗೆ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಪುಷ್ಪ ಡೈಲಾಗ್ ಗೆ ಕ್ರಿಕೆಟಿಗರು, ಬಾಲಿವುಡ್ ನಟರೂ ಫಿದಾ ಆಗಿದ್ದಾರೆ. ಈ ಒಂದೇ ಒಂದು ಡೈಲಾಗ್ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ. ಅಲ್ಲು ಅರ್ಜುನ್ ಸದ್ಯ ಪುಷ್ಪ-2 ಮತ್ತು ಹಲವು ಸ್ಟಾರ್ ನಿರ್ದೇಶಕರ ಸಿನಿಮಾಗಳಿಗೆ ಕಮಿಟ್ ಆಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಸದ್ಯ ಇಂಡಸ್ಟ್ರಿಯಲ್ಲಿ ಪ್ರೊಡ್ಯೂಸರ್ ಕೌನ್ಸಿಲ್ ಪ್ರತಿಭಟನೆಯಿಂದ ಸಂಪೂರ್ಣ ಶೂಟಿಂಗ್ ಸ್ಥಗಿತಗೊಂಡಿದೆ. ಸದ್ಯದಲ್ಲೇ ಪುಷ್ಪ-2 ಸಿನಿಮಾ ಸೆಟ್ಟೇರಲಿದೆ ಎಂದು ವರದಿಯಾಗಿದೆ. ಇದರ ನಡುವೆಯೂ ಸದ್ಯ ಮಾಡುತ್ತಿರುವ ಒಂದು ವಿಷಯ ವೈರಲ್ ಆಗುತ್ತಿದೆ. ಅಲ್ಲು ಅರ್ಜುನ್ ಅವರೊಡನೆ ಜೊತೆ ನಟಿಸುತ್ತಿರುವ ಹೊಸ ನಾಯಕಿಯರ ಕೆರಿಯರ್ ಅಪಾಯದಲ್ಲಿದೆ ಎಂಬ ಸೆಂಟಿಮೆಂಟ್ ವೈರಲ್ ಆಗುತ್ತಿದೆ. ಅಲ್ಲು ಅರ್ಜುನ್ ತಮ್ಮ ವೃತ್ತಿ ಜೀವನದಲ್ಲಿ ಅನೇಕ ನಾಯಕಿಯರನ್ನು ಬೆಳ್ಳಿತೆರೆಗೆ ಪರಿಚಯಿಸಿದರು. ಆದರೆ ಅವರೆಲ್ಲ ಇಂಡಸ್ಟ್ರಿಯಲ್ಲಿ ಹೆಚ್ಚು ಕಾಲ ಇರಲು ಸಾಧ್ಯವಾಗಲಿಲ್ಲ. ಅತಿ ಕಡಿಮೆ ಸಮಯದಲ್ಲಿ ಇವರೆಲ್ಲ ಟಾಲಿವುಡ್ ನಿಂದ ದೂರ ಸರಿದಿದ್ದಾರೆ ಎಂಬ ಪ್ರಚಾರ ನಡೆಯುತ್ತಿದೆ.

ಅಲ್ಲು ಅರ್ಜುನ್ ಅನ್ನೋದು ಬ್ಯಾಡ್ ಸೆಂಟಿಮೆಂಟ್ ಅಂತ ಕೆಲವರು ಹೇಳ್ತಾರೆ. ಮೊದಲ ಸಿನಿಮಾ ಗಂಗೋತ್ರಿಯಲ್ಲಿ ಅಲ್ಲು ಅರ್ಜುನ್ ಜೊತೆ ನಟಿಸಿದ್ದ ಅದಿತಿ ಅಗರ್ವಾಲ್ ಎಲ್ಲಿ ಹೋಗಿದ್ದಾರೆ ಅನ್ನೋದು ಯಾರಿಗೂ ಗೊತ್ತಿಲ್ಲ. ಈ ಚೆಲುವೆ ಆರತಿ ಅಗರ್ವಾಲ್ ಅವರ ತಂಗಿ. ಅಲ್ಲದೆ ಅಲ್ಲು ಅರ್ಜುನ್ ಅವರ ವಿವಿ ವಿನಾಯಕ್ ಕಾಂಬಿನೇಷನ್ ನಲ್ಲಿ ಅಲ್ಲು ಅರ್ಜುನ್ ಅವರ ಜೊತೆ ಗೌರಿ ಮುಂಜಾಲ್ ನಾಯಕಿಯಾಗಿ ಪರಿಚಯವಾಗಿದ್ದರು. ಆ ನಂತರ ತೆಲುಗಿನಲ್ಲಿ, ಕನ್ನಡ ಮತ್ತು ಮಲಯಾಳಂನಲ್ಲಿ ಒಂದಷ್ಟು ಸಿನಿಮಾಗಳನ್ನು ಮಾಡಿ ನಾಪತ್ತೆಯಾದರು.

ಅದಾದ ನಂತರ ನಾಯಕಿ ಅನುರಾಧಾ ಮೆಹ್ತಾ ಆರ್ಯ ಚಿತ್ರದಲ್ಲಿ ನಟಿಸಿದ್ದರು. ಕೆಲವು ಚಿಕ್ಕ ಸಿನಿಮಾಗಳನ್ನು ಮಾಡಿದ ನಂತರ ಅವರು ನಾಪತ್ತೆಯಾದರು. ಭಾನು ಶ್ರೀ ಮೆಹ್ರಾ, ಅಲ್ಲು ಅರ್ಜುನ್ ಗುಣಶೇಖರ್ ಕಾಂಬಿನೇಷನ್‌ ನಲ್ಲಿ ಮೂಡಿಬಂದ ವರುಡು ಚಿತ್ರದ ಮೂಲಕ ಭಾನು ಶ್ರೀ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು, ಒಂದೇ ಒಂದು ಚಿತ್ರದ ನಂತರ ಚಿತ್ರರಂಗ ತೊರೆದರು. ಶೀಲಾ, ಇವರು ಪರುಗು ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ನಟಿಸಿದರು. ನಂತರ ಜ್ಯೂನಿಯರ್ ಎನ್.ಟಿ.ಆರ್ ಅವರ ಜೊತೆ ಅದರ್ಸ್ ಸಿನಿಮಾದಲ್ಲೂ ನಟಿಸಿದ್ದಾರೆ, ಅದರ ನಂತರ ಅವಳರು ಚಿತ್ರರಂಗವನ್ನು ತೊರೆದರು. ಹೀಗೆ ಅಲ್ಲು ಅರ್ಜುನ್ ಅವರೊಡನೆ ನಟಿಸಿದ ಸಾಕಷ್ಟು ಹೀರೋಯಿನ್ ಗಳು ನಟನೆ ತ್ಯಜಿಸಿದ್ದಾರೆ..