ಸಾರಾ ರವರು ಕೈ ಕೊಟ್ಟ ಮೇಲೆ ಟಾಪ್ ಬಾಲಿವುಡ್ ನಟಿಯ ಜೊತೆ ಡೇಟಿಂಗ್ ಆರಂಭಿಸಿದ ಶುಭ್ಮಂ ಗಿಲ್? ಒಟ್ಟಾಗಿ ಹೋಟೆಲ್ ನಲ್ಲಿ ಕಾಣಿಸಿಕೊಂಡಿದ್ದು ಯಾರ ಜೊತೆ ಗೊತ್ತೇ??

ಭಾರತ ತಂಡದ ಯುವಭರವಸೆಯ ಆಟಗಾರ ಶುಬ್ಮನ್ ಗಿಲ್ ಜಿಂಬಾಬ್ವೆ ಮತ್ತು ಇಂಗ್ಲೆಂಡ್ ಸರಣಿಯಲ್ಲಿ ಉತ್ತಮವಾದ ಪ್ರದರ್ಶನ ನೀಡಿ ಒಳ್ಳೆಯ ಪ್ರಶಂಸೆ ಪಡೆದುಕೊಂಡಿದ್ದರು. ಕ್ರಿಕೆಟ್ ಮಾತ್ರವಲ್ಲರೆ ಶುಬ್ಮನ್ ಗಿಲ್ ಅವರು ವೈಯಕ್ತಿಕ ಜೀವನದ ವಿಚಾರದಲ್ಲಿ ಸಹ ಆಗಾಗ ಸುದ್ದಿಯಾಗುತ್ತಿದ್ದರು, ಭಾರತದ ಮಾಜಿ ಕ್ರಿಕೆಟ್ ಆಟಗಾರ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾಕ್ರ ತೆಂಡೂಲ್ಕರ್ ಜೊತೆಗೆ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿತ್ತು.

ಆದರೆ ಕೆಲವೇ ಕೆಲವು ದಿನಗಳ ಹಿಂದೆ ಶುಬ್ಮನ್ ಗಿಲ್ ಹಾಗೂ ಸಾರಾ ತೆಂಡೂಲ್ಕರ್ ಬ್ರೇಕಪ್ ಆಗಿರಬಹುದು ಎನ್ನುವ ಮಾತುಗಳು ಸಹ ಕೇಳಿಬಂದಿತ್ತು. ಇದೀಗ ಈ ಸುದ್ದಿ ನಿಜವೇ ಇರಬಹುದು ಎನ್ನುವ ಹಾಗೆ ತೋರುತ್ತಿದೆ. ಏಕೆಂದರೆ ಶುಬ್ಮನ್ ಗಿಲ್ ಇದೀಗ ಬಾಲಿವುಡ್ ನ ಮತ್ತೊಬ್ಬ ಸ್ಟಾರ್ ನಟಿ ಜೊತೆಗೆ ರೆಸ್ಟೋರೆಂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ..ಇದು ನಿಜಕ್ಕೂ ಹಲವರಿಗೆ ಆಶ್ಚರ್ಯ ತಂದಿದೆ ಎಂದರೆ ತಪ್ಪಾಗುವುದಿಲ್ಲ. ಈ ಬಾರಿ ಕೂಡ ಶುಬ್ಮನ್ ಗಿಲ್ ಅವರು ಕಾಣಿಸಿಕೊಂಡಿರುವುದು ಸಾರಾ ಅವರ ಜೊತೆ ಎನ್ನುವುದು ಮತ್ತೊಂದು ಆಶ್ಚರ್ಯ ತರುವ ವಿಚಾರ.

ನಟ ಸೈಫ್ ಅಲಿ ಖಾನ್ ಅವರ ಮಗಳು ಸಾರಾ ಅಲಿ ಖಾನ್ ಅವರೊಡನೆ ರೆಸ್ಟೋರೆಂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ ಶುಬ್ಮನ್ ಗಿಲ್, ಇಬ್ಬರು ಈಗ ಲಂಡನ್ ನಲ್ಲಿದ್ದು, ಅಲ್ಲಿನ ಒಂದು ರೆಸ್ಟೋರೆಂಟ್ ನಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದು, ರೆಸ್ಟೋರೆಂಟ್ ನಲ್ಲಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶುಬ್ಮನ್ ಗಿಲ್ ಅವರಿಗೆ ಈಗ 22 ವರ್ಷ, ಸಾರಾ ಅಲಿ ಖಾನ್ ಅವರಿಗೆ 27 ವರ್ಷ, ತನಗಿಂತ 5 ವರ್ಷ ದೊಡ್ಡ ನಟಿಯ ಜೊತೆಗೆ ಶುಬ್ಮನ್ ಗಿಲ್ ಪ್ರೀತಿಯಲ್ಲಿ ಬಿದ್ದಿದ್ದಾರಾ ಎನ್ನುವ ಚರ್ಚೆ ಈಗ ಶುರುವಾಗಿದೆ