ಅಂದು ಇದ್ದಕ್ಕಿದ್ದ ಹಾಗೆ ಪುನೀತ್ ರಾಜ್ ಕುಮಾರ್ ರವರು ದರ್ಶನ್ ರವರಿಗೆ ವಾಚ್ ಕೊಟ್ಟಿದ್ದು ಯಾಕೆ: ಪುನೀತ್ ಗೆ ಎಲ್ಲವೂ ತಿಳಿದಿತ್ತಾ??

ಅಭಿಮಾನಿಗಳ ಮೆಚ್ಚಿನ ಪವರ್ ಸ್ಟಾರ್ ಅಪ್ಪು ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ, ಒಬ್ಬರಿಗೂ ನೋಯಿಸಿದವರಲ್ಲ ಅಪ್ಪು. ಚಿತ್ರರಂಗದಲ್ಲಿ ಎಲ್ಲರೊಡನೆ ಸ್ನೇಹದಿಂದ ಇದ್ದರು. ಅಪ್ಪು ಅವರು ದರ್ಶನ್ ಅವರೊಡನೆ ಬಹಳ ಆತ್ಮೀಯವಾಗಿದ್ದರು. ಅಪ್ಪು ಅವರು ಅಭಿನಯದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು ಅರಸು. ಈ ಸಿನಿಮಾದ ವಿಶೇಷತೆ ಏನೆಂದರೆ ಸ್ಯಾಂಡಲ್ ವುಡ್ ನ ಇಬ್ಬರು ಸ್ಟಾರ್ ನಟರಾದ ಆದಿತ್ಯ ಮತ್ತು ಡಿಬಾಸ್ ದರ್ಶನ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅರಸು ಸಿನಿಮಾದ ಅತಿಥಿ ಪಾತ್ರದಲ್ಲಿ ದರ್ಶನ್ ನಟಿಸಿದರೆ ತುಂಬಾ ಚೆನ್ನಾಗಿರುತ್ತದೆ ಎಂದು ನಿರ್ಧಾರ ಅದ ನಂತರ, ರಾಘಣ್ಣ ಮತ್ತು ಅಪ್ಪು ಅವರು ದರ್ಶನ್ ಅವರನ್ನು ಭೇಟಿಯಾಗಿ ಅತಿಥಿ ಪಾತ್ರದಲ್ಲಿ ನೀವು ನಟಿಸಬೇಕು ಎಂದು ಹೇಳಿದಾಗ, ಮರುಕ್ಷಣವೇ ದರ್ಶನ್ ಒಪ್ಪಿಗೆ ನೀಡಿದರಂತೆ.

ಆದರೆ ಅದರ ಜೊತೆ ಒಂದು ಕಂಡೀಷನ್ ಹಾಕಿದರಂತೆ, ನೀವು ಯಾವುದೇ ಕಾರಣಕ್ಕೂ ಸಂಭಾವನೆ ಕೊಡುತ್ತೇನೆ ಅಂತ ಹೇಳಬಾರದು ಅಂದರಂತೆ ದರ್ಶನ್. ರಾಘಣ್ಣ ಹಾಗೂ ಅಪ್ಪು ಅವರು ನೀವು ಸಂಭಾವನೆ ತೆಗೆದುಕೊಳ್ಳಬೇಕು ಎಂದು ಎಷ್ಟೇ ಮನವೊಲಿಸುವ ಪ್ರಯತ್ನ ಮಾಡಿದರು ಸಹ ದರ್ಶನ್ ಅದಕ್ಕೆ ಒಪ್ಪಿಗೆ ನೀಡಿಲ್ಲ. ನನ್ನ ತಂದೆ ನಿಮ್ಮ ಕಂಪನಿಯಲ್ಲಿ ನಟನೆ ಮಾಡುವಾಗ ಒಂದು ಸಾರಿಯು ದುಡ್ಡಿನ ಬಗ್ಗೆ ಮಾತನಾಡಿಲ್ಲ, ಅಣ್ಣಾವ್ರ ಪ್ರತಿ ಸಿನಿಮಾದಲ್ಲೂ ನಮ್ಮ ತಂದೆಗೆ ಒಂದು ಪಾತ್ರ ಇರುತ್ತಿತ್ತು, ನಿಮ್ಮ ನಮ್ಮ ಕುಟುಂಬಕ್ಕೆ ಇರುವ ಬಾಂಧವ್ಯ ಅಂಥದ್ದು. ನನಗೆ ದಯವಿಟ್ಟು ಸಂಭಾವನೆ ಬೇಡ, ನಿಮ್ಮ ಕುಟುಂಬದ ಜೊತೆಗೆ ನಾವಿದ್ದೇವೆ ಎಂದು ಹೇಳಿದ್ದರಂತೆ ದರ್ಶನ್. ನಂತರ ಚಿತ್ರೀಕರಣದಲ್ಲಿ ಪಾಲ್ಗೊಂಡು ಎಲ್ಲವನ್ನು ಚೆನ್ನಾಗಿ ಮಾಡಿಕೊಟ್ಟರಂತೆ ಡಿಬಾಸ್.

ಅರಸು ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಯಿತು. ಸಿನಿಮಾ ಹಿಟ್ ಆಗಿದ್ದಕ್ಕೆ ಕಾರಣ ದರ್ಶನ್ ಅವರು ಕೂಡ, ಅವರಿಗೂ ಈ ಯಶಸ್ಸು ಸೇರಬೇಕು, ಆದರೆ ಅವರು ಹಣ ತೆಗೆದುಕೊಳ್ಳುವುದಿಲ್ಲ ಎಂದು ಅಪ್ಪು ಅವರು ದರ್ಶನ್ ಅವರಿಗೆ ಒಂದು ವಾಚ್ ಅನ್ನು ಗಿಫ್ಟ್ ಆಗಿ ನೀಡಿದರೆ ಹೇಗೆ ಎಂದು ಐಡಿಯಾ ಮಾಡಿ, ಅಪ್ಪು ಹಾಗೂ ರಾಘಣ್ಣ ವಾಚ್ ತೆಗೆದುಕೊಂಡು, ನಮ್ಮ ಸಿನಿಮಾದಲ್ಲಿ ನಟಿಸಿದ ಪ್ರೀತಿಗಾಗಿ ನೀವು ಈ ಉಡುಗೊರೆ ತೆಗೆದುಕೊಳ್ಳಲೇಬೇಕು, ಇದು ನಮ್ಮ ಮನೆಯ ಸದಸ್ಯನಿಗೆ ನಾವು ಪ್ರೀತಿಯಿಂದ ಕೊಡುತ್ತಿರುವುದು ತೆಗೆದುಕೊಳ್ಳಲೇಬೇಕು ಎಂದು ರಾಘಣ್ಣ ಅಪ್ಪು ಹೇಳಿದ ನಂತರ ವಾಚ್ ತೆಗೆದುಕೊಂಡರಂತೆ ದರ್ಶನ್. ದರ್ಶನ್ ಅವರ ಗುಣ ಎಂಥದ್ದು ಎಂದು ಈ ಘಟನೆಯಲ್ಲಿ ಗೊತ್ತಾಗುತ್ತದೆ ಎಂದರೆ ತಪ್ಪಾಗುವುದಿಲ್ಲ.