ದಿ ಕಿಂಗ್ ಇಸ್ ಬ್ಯಾಕ್: ಕೊಹ್ಲಿ ವಾಪಸ್ಸು ಬಂದಿದ ವಿಚಾರವಾಗಿ ರಿಕ್ಕಿ ಪಾಂಟಿಂಗ್ ಹೇಳಿದ್ದೇನು ಗೊತ್ತೇ??

ಕಿಂಗ್ ಕೋಹ್ಲಿ ಹೆಸರಿನಲ್ಲಿ ಇರುವ ದಾಖಲೆಗಳು ಒಂದಾ ಎರಡಾ.. ರನ್ ಮಷಿನ್ ಎಂದೇ ಕೋಹ್ಲಿ ಅವರು ಹೆಸರು ಪಡೆದುಕೊಂಡಿದ್ದಾರೆ. ವಿರಾಟ್ ಕೋಹ್ಲಿ ಭಾರತ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಬಹಳಷ್ಟು ಪಂದ್ಯಗಳು ಗೆಲ್ಲುವ ಹಾಗೆ ಮಾಡಿದ್ದಾರೆ. ಆದರೆ 2019ರ ನಂತರ ವಿರಾಟ್ ಕೋಹ್ಲಿ ಅವರು ಫಾರ್ಮ್ ಕಳೆದುಕೊಂಡಿದ್ದರು, ಮೂರು ವರ್ಷಗಳಿಂದ ಕೋಹ್ಲಿ ಅವರಿಂದ ಒಳ್ಳೆಯ ಇನ್ನಿಂಗ್ಸ್ ಬಂದಿರಲಿಲ್ಲ, ಎಲ್ಲರೂ ಕಿಂಗ್ ಕೋಹ್ಲಿ ಕಂಬ್ಯಾಕ್ ಗಾಗಿ ಕಾಯುತ್ತಿದ್ದರು.

ಇದೀಗ ಕೋಹ್ಲಿ ಕಂಬ್ಯಾಕ್ ಮಾಡಿದ್ದಾರೆ. ಏಷ್ಯಾಕಪ್ 2022ರ ಎರಡನೇ ಪಂದ್ಯ, ಹಾಂಗ್ ಕಾಂಗ್ ವಿರುದ್ಧ ನಡೆದ ಪಂದ್ಯದಲ್ಲಿ ಕೋಹ್ಲಿ ಅವರು ಉತ್ತಮವಾದ ಪ್ರದರ್ಶನ ನೀಡಿದರು, 44 ಎಸೆತಗಳಲ್ಲಿ 59 ರನ್ ಸಿಡಿಸಿದರು ಕೋಹ್ಲಿ, ಕೋಹ್ಲಿ ಅವರ ಈ ಇನ್ನಿಂಗ್ಸ್ ನೋಡಿದ ಅಭಿಮಾನಿಗಳು ಕಿಂಗ್ ಇಸ್ ಬ್ಯಾಕ್ ಎನ್ನುತ್ತಿದ್ದಾರೆ. ಕೋಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರ ಜೊತೆಯಾಟ ಟೀಮ್ ಇಂಡಿಯಾ ಹಾಂಗ್ ಕಾಂಗ್ ವಿರುದ್ಧ 192 ರನ್ ಗಳಿಸಲು ಸಾಧ್ಯವಾಯಿತು. 192 ರನ್ ಚೇಸ್ ಮಾಡಲಾಗದೆ ಹಾಂಗ್ ಕಾಂಗ್ 5 ವಿಕೆಟ್ ಗಳ ನಷ್ಟಕ್ಕೆ 152 ರನ್ ಗಳಿಸಿತು.

ಇದೀಗ ವಿರಾಟ್ ಕೋಹ್ಲಿ ಅವರ ಈ ಫಾರ್ಮ್ ಬಗ್ಗೆ ಅಪ್ರತಿಮ ಬ್ಯಾಟ್ಸ್ಮನ್, ಆಸ್ಟ್ರೇಲಿಯಾ ಆಟಗಾರ ರಿಕ್ಕಿ ಪಾಂಟಿಂಗ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಸಂದರ್ಶನ ಒಂದರಲ್ಲಿ ಮಾತನಾಡಿದ ರಿಕ್ಕಿ ಪಾಂಟಿಂಗ್ ಅವರು, “ಅಗ್ರ ಬ್ಯಾಟ್ಸ್ಮನ್ ಮತ್ತೆ ಲಯಕ್ಕೆ ಬಂದಿರೋದು ಸಂತೋಷ ನೀಡಿದೆ. ವಿರಾಟ್ ಕೋಹ್ಲಿ ಅವರ ಹಿಂದಿನ ದಾಖಲೆಗಳನ್ನು ನೋಡಿದರೆ, ರನ್ ಚೇಸಿಂಗ್ ನಲ್ಲಿ ಅದ್ಭುತವಾದ ದಾಖಲೆಗಳನ್ನು ಮಾಡಿದ್ದಾರೆ. ರನ್ ಚೇಸಿಂಗ್ ಕೋಹ್ಲಿ ಉತ್ತಮ..” ಎಂದು ಕಿಂಗ್ ಬಗ್ಗೆ ಹೇಳಿದ್ದಾರೆ ಕ್ರಿಕೆಟ್ ಲೆಜೆಂಡ್ ರಿಕ್ಕಿ ಪಾಂಟಿಂಗ್.