ಪಾಕಿಸ್ತಾನದ ವಿರುದ್ಧ ಪಂದ್ಯಕ್ಕೂ ಮುನ್ನವೇ ಮತ್ತೊಂದು ಮಹಾ ಎಡವಟ್ಟು ಮಾಡಿಕೊಂಡ ಭಾರತ ತಂಡ: ಅದ್ಯಾಕೆ ಹೀಗೆ ಮಾಡುತ್ತಿದ್ದಾರೆ.

ನಾಳೆ ನಡೆಯಲಿರುವ ಭಾರತ ವರ್ಸಸ್ ಪಾಕಿಸ್ತಾನ್ ತಂಡದ ನಡುವಿನ ಸೂಪರ್ 4 ಪಂದ್ಯಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇದೆ. ಕ್ರಿಕೆಟ್ ಪ್ರಿಯರು ಈ ಪಂದ್ಯ ನೋಡಲು ಕಾತುರರಾಗಿ ಕಾಯುತ್ತಿದ್ದಾರೆ. ಆದರೆ ಪಂದ್ಯ ಶುರು ಆಗುವುದಕ್ಕಿಂತ ಮೊದಲು ಭಾರತ ತಂಡದ ಮ್ಯಾನೇಜ್ಮೆಂಟ್ ಒಂದು ದೊಡ್ಡ ತಪ್ಪು ಮಾಡಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಇದು ನಾಳಿನ ಪಂದ್ಯಕ್ಕೂ ಸಮಸ್ಯೆ ಆಗಬಹುದು ಎನ್ನಲಾಗುತ್ತಿದೆ. ಭಾರತ ತಂಡ ಮಾಡಿರುವ ಆ ತಪ್ಪು ಏನು ಎಂದು ತಿಳಿಸುತ್ತೇವೆ ನೋಡಿ..

ಭಾರತ ತಂಡದಿಂದ ಆಲ್ ರೌಂಡರ್ ಆಗಿ, ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ಕೊಡುತ್ತಿದ್ದ ರವೀಂದ್ರ ಜಡೇಜಾ ಅವರು ಮೊಣಕಾಲಿನ ಗಾಯದಿಂದ ನಾಳಿನ ಪಂದ್ಯದಲ್ಲಿ ಭಾಗವಹಿಸಲು ಆಗುವುದಿಲ್ಲ, ಇದೀಗ ಅವರ ಬದಲಾಗಿ ಆಲ್ ರೌಂಡರ್ ಅಕ್ಷರ ಪಟೇಲ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಪ್ಪು ಮಾಡಿದೆ ಎನ್ನಲಾಗುತ್ತಿದೆ. ಟೀಮ್ ಇಂಡಿಯಾ ಗೆ ಈಗ ಬೇಕಿದ್ದದ್ದು ಆಲ್ ರೌಂಡರ್ ಗಿಂತ ಹೆಚ್ಚಾಗಿ ವೇಗಿ. ಈಗ ತಂಡದಲ್ಲಿ ಭುವನೇಶ್ವರ್ ಕುಮಾರ್ ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಇರುವ ಅರ್ಷದೀಪ್ ಸಿಂಗ್ ಹಾಗೂ ಆವೇಶ್ ಖಾನ್ ಉತ್ತಮವಾದ ಪ್ರದರ್ಶನ್ ನೀಡುತ್ತಿಲ್ಲ, ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಆವೇಶ್ ಖಾನ್ 54 ರನ್ ನೀಡಿದರೆ, ಆರ್ಷದೀಪ್ ಸಿಂಗ್ 44 ರನ್ ನೀಡಿದ್ದರು.

ಹಾಗಾಗಿ ಈಗ ಮತ್ತೊಬ್ಬ ಆಲ್ ರೌಂಡರ್ ಅವಶ್ಯಕತೆ ಇರಲಿಲ್ಲ ಎನ್ನಲಾಗುತ್ತಿದೆ. ಈಗಾಗಲೇ ತಂಡದಲ್ಲಿ ಅಕ್ಷರ್ ಪಟೇಲ್ ಅವರಿಗಿಂತ ಉತ್ತಮವಾದ ರವಿಚಂದ್ರನ್ ಅಶ್ವಿನ್ ಹಾಗೂ ದೀಪಕ್ ಹೂಡಾ ಇದ್ದರು, ವೇಗಿ ಸ್ಥಾನಕ್ಕೆ ದೀಪಕ್ ಚಹರ್ ಇದ್ದರು, ದೀಪಕ್ ಚಹರ್ ಈಗ ಒಳ್ಳೆಯ ಫಾರ್ಮ್ ನಲ್ಲಿ ಸಹ ಇದ್ದಾರೆ. ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳದೆ, ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಿಕೊಂಡಿರುವುದು ಭಾರತದ ಬೌಲಿಂಗ್ ಲೈನಪ್ ಗೆ ತೊಂದರೆ ಆಗಬಹುದು ಎನ್ನಲಾಗುತ್ತಿದೆ. ಮ್ಯಾನೇಜ್ಮೆಂಟ್ ಆಯ್ಕೆ ನಿಜಕ್ಕೂ ತಪ್ಪಾಯಿತೆ? ಇದು ನಾಳಿನ ಪಂದ್ಯದಲ್ಲಿ ಗೊತ್ತಾಗಲಿದೆ.