ಕೆಲವೇ ನಿಮಿಷಗಳಲ್ಲಿ ನಿಮ್ಮ ದೇಹದ ಸಕ್ಕರೆ ಮಟ್ಟ ಕಡಿಮೆ ಮಾಡಿ, ನಿಯಂತ್ರಣ ಮಾಡಬೇಕು ಎಂದರೆ, ಇದೊಂದು ಚೂರ್ಣ ಬಳಸಿ ಸಾಕು. ಏನು ಮಾಡಬೇಕು ಗೊತ್ತೆ??

ಮಧುಮೇಹ ಎನ್ನುವ ಆರೋಗ್ಯ ಸಮಸ್ಯೆಯನ್ನು ಪೂರ್ತಿಯಾಗಿ ತೊಡೆದು ಹಾಕಲು ಸಾಧ್ಯವಿಲ್ಲ. ಆದರೆ ಆಯುರ್ವೇದ ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ಮಧುಮೇಹ ಸಮಸ್ಯೆಯಿಂದ, ರಕ್ತದಲ್ಲಿ ಸಕ್ಕರೆಯ ಗುಣಮಟ್ಟವನ್ನು ಕಡಿಮೆ ಮಾಡಬಹುದು. ಹಾಗಿದ್ದರೆ, ಆಯುರ್ವೇದದ ಪ್ರಕಾರ, ಏನು ಮಾಡಿದರೆ ದೇಹದಲ್ಲಿ ಮಧುಮೇಹ ಸಮಸ್ಯೆ ಕಡಿಮೆ ಆಗುತ್ತದೆ ಎಂದು ಈಗ ತಿಳಿಸುತ್ತೇವೆ ನೋಡಿ..

ಅಳಲೇಕಾಯಿ, ತಾರೇಕಾಯಿ ಹಾಗೂ ನೆಲ್ಲಿಕಾಯಿ ಈ ಮೂರನ್ನು ಬೆರೆಸಿ ತ್ರಿಫಲ ಮಾಡಲಾಗುತ್ತದೆ. ಇದರಲ್ಲಿ ಅಳಲೇಕಾಯಿ ಮತ್ತು ತಾರೆಕಾಯಿ ಜೀರ್ಣವಾಗುವ ಕಿಣ್ವಗಳನ್ನು ನಿಯಂತ್ರಣ ಮಾಡುತ್ತದೆ, ಹಾಗೂ ನೆಲ್ಲಿಕಾಯಿಯಲ್ಲಿ ಉತ್ಕರ್ಷಣ ನಿರೋಧಕ ಇರುತ್ತದೆ. ಇದು ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ನಿಮ್ಮ ಮೇದೋಜ್ಜಿರಕ ಗ್ರಂಥಿ ಆರೋಗ್ಯವಾಗಿರುತ್ತದೆ. ಇದು ಇನ್ಸುಲಿನ್ ಉತ್ಪತ್ತಿಯನ್ನು ಸಹ ಹೆಚ್ಚಿಸುತ್ತದೆ. ಇನ್ಸುಲಿನ್ ತುಂಬಾ ಮುಖ್ಯವಾಗಿರುವ ಕಾರಣ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ತ್ರಿಫಲ ಸೇವಿಸಲು ಮೂರು ವಿಧಾನಗಳಿವೆ..

*ದೇಸಿ ತುಪ್ಪದ ಜೊತೆಗೆ ಸೇವಿಸಿ :- ದೇಸಿ ತುಪ್ಪದ ಜೊತೆಗೆ ತ್ರಿಫಲವನ್ನು ಬೆರೆಸಿ, ಬಳಿಕ ಬಿಸಿನೀರಿನಲ್ಲಿ ಸೇವಿಸಿ. ಇದರಿಂದಾಗಿ ಹೊಟ್ಟೆ ಮತ್ತು ಕರುಳಿನ ಒಳಪದರವನ್ನು ಸ್ವಚ್ಛಗೊಳಿಸುತ್ತದೆ. ಇದರಿಂದ ದೇಹದ ಮೇಲ್ಮೈ ಮೇಲೆ ಅಂಟಿಕೊಂಡಿರುವ ಹಾನಿಕಾರಕ ಪದಾರ್ಥಗಳು ಸಹ ದೇಹದಿಂದ ಹೊರಬರುತ್ತದೆ. ಇದರಿಂದ ದೇಹ ನಿರ್ಮಿಶಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ರಕ್ತದ ಪರಿಚಲನೆ ಸುಧಾರಿಸುತ್ತದೆ ಹಾಗೂ ಸಕ್ಕರೆಯ ಮಟ್ಟವನ್ನು ನಿಯಂತ್ರಣ ಮಾಡುತ್ತದೆ.
*ಮಜ್ಜಿಗೆಯ ಜೊತೆಗೆ ಸೇವಿಸಿ :- ಮಜ್ಜಿಗೆಯ ಜೊತೆಗೆ ತ್ರಿಫಲವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದಾಗುತ್ತದೆ. ಇದು ಅಜ್ಜಿಯ ಕಾಲದಿಂದಲೂ ಮಾಡುತ್ತಾ ಬಂದಿದ್ದೇವೆ. ಇದರಿಂದ ಚಯಾಪಚಯ ಕ್ರಿಯೆ ಸಹ ಸುಧಾರಿಸುತ್ತದೆ. ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ. ಮಧ್ಯಾಹ್ನದ ನಂತರ 1 ಲೋಟ ಮಜ್ಜಿಗೆಗೆ, 1 ಚಮಚ ತ್ರಿಫಲ ಬೆರೆಸಿ ಸೇವಿಸಿ.

*ತ್ರಿಫಲ ಕಷಾಯ ಸೇವಿಸಿ :- ಇದು ಎಲ್ಲರಿಗೂ ಒಳ್ಳೆಯದು, ಮಧುಮೇಹಿಗಳಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಇದು ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ.. ರಾತ್ರಿ ಕಬ್ಬಿಣದ ಬಟ್ಟಲಿನಲ್ಲಿ ಒಂದು ಕಪ್ ನೀರು ಹಾಗೂ ತ್ರಿಫಲವನ್ನು ಮಿಶ್ರಣ ಮಾಡಿ. ಪೇಸ್ಟ್ ಸಿದ್ಧವಾದ ಬಳಿಕ, ಬೆಳಗ್ಗೆಯ ವರೆಗೂ ಹಾಗೆಯೇ ಇಡಿ. ನೀರು ಮತ್ತು ಜೇನುತುಪ್ಪ ಬೆರೆಸಿ ಅದನ್ನು ಪೇಸ್ಟ್ ಮಾಡಿ. ಇದನ್ನು ನೀವು ಪ್ರತಿದಿನ ಖಾಲಿ ಹೊಟ್ಟೆಗೆ ಕುಡಿಯುತ್ತಾ ಬಂದರೆ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಾ ಬರಬಹುದು.