ಪಂದ್ಯ ಮುಗಿದ ಬಳಿಕ ರೊಚ್ಚೆಗೆದ್ದ ರೋಹಿತ್ ಶರ್ಮ: ಪಾಕ್ ವಿರುದ್ಧ ಸೋತ ಬಳಿದ ನೇರವಾಗಿ ಆಟಗಾರನ ಹೆಸರು ಹೇಳಿ ಕೋಪ ಮಾಡಿಕೊಂಡು ಹೇಳಿದ್ದೇನು ಗೊತ್ತೇ?

ಭಾರತ ತಂಡವು ನಿನ್ನೆ ನಡೆದ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಸೋಲನ್ನು ಕಂಡಿತು. ಏಷ್ಯಾಕಪ್ 2022ರ ಸೂಪರ್ 4 ಹಂತದ ನಿನ್ನೆಯ ಪಂದ್ಯ ರೋಚಕವಾಗಿತ್ತು, ಭಾರತ ತಂಡವು ಆರಂಭಿಕ ಬ್ಯಾಟ್ಸ್ಮನ್ ಗಳು ಉತ್ತಮ ಪ್ರದರ್ಶನ ನೀಡಿದರು, ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳು ಒಳ್ಳೆಯ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ವಿರಾಟ್ ಕೋಹ್ಲಿ, ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಒಳ್ಳೆಯ ಪ್ರದರ್ಶನ ನೀಡಿದರು. ವಿರಾಟ್ ಕೋಹ್ಲಿ ಅವರು ಅಜೆಯ 60 ರನ್ ಗಳಿಸಿದರು. ಆದರೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಭಾರತ ತಂಡದ ಕಳಪೆ ಬೌಲಿಂಗ್ ಮತ್ತು ಫೀಲ್ಡಿಂಗ್ ಇಂದಾಗಿ ನಿನ್ನೆ ತಂಡ ಸೋಲು ಕಂಡಿತು.

ನಿನ್ನೆಯ ಪಂದ್ಯದಲ್ಲಿ ಬೌಲರ್ ಗಳು ದುಬಾರಿಯಾದರು, ಜೊತೆಗೆ ಫೀಲ್ಡಿಂಗ್ ನಲ್ಲಿ ಸಹ ಆಟಗಾರರು ಕೆಲವು ಕ್ಯಾಚ್ ಗಳನ್ನು ಬಿಟ್ಟರು. ಪಾಕಿಸ್ತಾನ್ ತಂಡ ಮೊಹಮ್ಮದ್ ನವಾಜ್ ಮತ್ತು ಮೊಹಮ್ಮದ್ ರಿಜ್ವಾನ್ ಇಬ್ಬರ ವಿಕೆಟ್ ಕಳೆದುಕೊಂಡು, ಕಷ್ಟದಲ್ಲಿತ್ತು. ಅದರಿಂದಾಗಿ ಹೊಸ ಬ್ಯಾಟ್ಸ್ಮನ್ ಗಳಿಗೆ ಕಷ್ಟವಾಗಿತ್ತು, 18ನೇ ಓವರ್ ನಲ್ಲಿ ರವಿ ಬಿಶ್ನೋಯ್ ಅವರು ಒಂದು ಎಸೆತದಲ್ಲಿ ಆಸಿಫ್ ಆಲಿ ದೊಡ್ಡ ಹೊಡೆತ ಬೀಸಿದರು, ಆಗ ಫೀಲ್ಡಿಂಗ್ ಮಾಡುತ್ತಿದ್ದ ಅರ್ಷದೀಪ್ ಸಿಂಗ್ ಸುಲಭವಾದ ಕ್ಯಾಚ್ ಕೈಬಿಟ್ಟರು. ಇದು ಪಂದ್ಯವನ್ನು ಬದಲಿಸಬಹುದಾದ ಕ್ಯಾಚ್ ಆಗಿತ್ತು. ಆದರೆ ಇಂಥ ಕ್ಯಾಚ್ ಅನ್ನು ಅರ್ಷದೀಪ್ ಸಿಂಗ್ ಅವರು ಕೈಬಿಟ್ಟಿದ್ದು ಭಾರತ ತಂಡಕ್ಕೆ ನಷ್ಟವಾಯಿತು.

ಇದರಿಂದಾಗಿ ರೋಹಿತ್ ಶರ್ಮಾ ಅವರಿಗೆ ಬಹಳ ಕೋಪ ಬಂದು, ಮೈದಾನದಲ್ಲೇ ಜೋರಾಗಿ ಕಿರುಚಾಡಿದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ. ಇನ್ನು ಪಂದ್ಯದ ಬಳಿಕ ರೋಹಿತ್ ಶರ್ಮಾ ಅವರು ಮಾತನಾಡಿ, ಇದು ಒತ್ತಡದಿಂದ ಕೂಡಿದ್ದ ಪಂದ್ಯ ಆಗಿತ್ತು, ರಿಜ್ವಾನ್ ಮತ್ತು ನವಾಜ್ ನಡುವಿನ ಜೊತೆಯಾಟ ಶುರುವಾದಾಗ ನಾವು ಶಾಂತವಾಗಿಯೇ ಇದ್ದರು, ಆದರೆ ಅವಾರ್ಸ್ ಜೊತೆಯಾಟ ಅದ್ಭುತವಾಗಿತ್ತು. ಪಾಕಿಸ್ತಾನ್ ಬ್ಯಾಟರ್ ಗಳು ಈ ರೀತಿಯ ಪ್ರದರ್ಶನ ನೀಡುವುದನ್ನು ನಾವು ನೋಡಿದ್ದೇವೆ. ಹಾಗಾಗಿ ಇದು ನನಗೆ ಆಶ್ಚರ್ಯ ತರಲಿಲ್ಲ. ಎರಡನೇ ಇನ್ನಿಂಗ್ಸ್ ನಲ್ಲಿ ಪಿಚ್ ಚೆನ್ನಾಗಿದೆ ಎಂದು ನನಗೆ ಅರ್ಥವಾಗಿತ್ತು. ಇದು ನಮಗೆ ಒಳ್ಳೆಯ ಪಾಠ..” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.