ಮಂಗಳ ದೇವನ ಕೃಪೆಯಿಂದ ಅಪಾರ ಸಂಪತ್ತು ಪಡೆಯುವ ರಾಶಿಗಳು ಯಾವ್ಯಾವು ಗೊತ್ತೇ?? ಈ ರಾಶಿಗಳನ್ನು ಯಾರು ತಡೆಯಲು ಕೂಡ ಸಾಧ್ಯವಿಲ್ಲ. ಯಾರ್ಯಾರನ್ನು ಗೊತ್ತೇ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಗ್ರಹವನ್ನು ಭೂಮಿ, ಧೈರ್ಯ ಮತ್ತು ಮದುವೇಯ ಕಾರಕ ಗ್ರಹ ಎಂದು ಪರಿಗಣಿಸಲಾಗಿದೆ. ಮಂಗಳ ಗ್ರಹ ಶುಭ ಸ್ಥಾನದಲ್ಲಿದ್ದರೆ, ಎಲ್ಲರಿಗು ಒಳ್ಳೆಯದು ಮಾಡುತ್ತದೆ, ಅಶುಭ ಸ್ಥಾನದಲ್ಲಿದ್ದರೆ ಕೆಲವು ಗ್ರಹಗಳಿಗೆ ಹಾನಿ ತರುತ್ತದೆ. ಎಲ್ಲಾ ಗ್ರಹಗಳ ಕಮಾಂಡರ್ ಎಂದು ಮಂಗಳ ಗ್ರಹವನ್ನು ಕರೆಯಲಾಗುತ್ತದೆ. ಪ್ರಸ್ತುತ ಮಂಗಳ ಗ್ರಹ ವೃಷಭ ರಾಶಿಯಲ್ಲಿದೆ. ಅಕ್ಟೋಬರ್ 16ರಂದು ಮಂಗಳ ಗ್ರಹವು ಮಿಥುನ ರಾಶಿಗೆ ಪ್ರವೇಶಿಸಲಿದೆ, ಇದರಿಂದಾಗಿ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀಳಲಿದ್ದು, ಮೂರು ರಾಶಿಗಳಿಗೆ ವಿಶೇಷ ಫಲ, ಸಂಪತ್ತು ಸಿಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಅಕ್ಟೋಬರ್ 16ರಿಂದ ಮಂಗಳ ಗ್ರಹದ ಪ್ರವೇಶದ ನಂತರ ಮಿಥುನ ರಾಶಿಯವರಿಗೆ ಒಳ್ಳೆಯ ಸಮಯ ಆರಂಭವಾಗಲಿದೆ. ನಿಮ್ಮ ವೃತ್ತಿ ಜೀವನಕ್ಕೆ ಒಳ್ಳೆಯದಾಗುತ್ತದೆ. ಒಳ್ಳೆಯ ದಿನಗಳು ಶುರುವಾಗಿ, ನಿಮ್ಮ ಆದಾಯ ಕೂಡ ಹೆಚ್ಚಾಗುತ್ತದೆ. ನಿಮ್ಮ ಕೆಲಸ ಚೆನ್ನಾಗಿರುವುದರ ಜೊತೆಗೆ ಎಲ್ಲರಿಂದ ಪ್ರಶಂಸೆ ಪಡೆಯುತ್ತೀರಿ.. ಹಿರಿಯರ ಸಹಾಯ ಸಿಗುತ್ತದೆ, ಪಾರ್ಟ್ನರ್ಶಿಪ್ ನಲ್ಲಿ ಕೆಲಸ ಮಾಡುವುದರಿಂದ ಯಶಸ್ಸು ನಿಮ್ಮದಾಗುತ್ತದೆ.

ಕರ್ಕಾಟಕ ರಾಶಿ :- ಮಂಗಳ ಗ್ರಹದ ಸ್ಥಾನ ಬದಲಾವಣೆ ಕರ್ಕಾಟಕ ರಾಶಿಯವರಿಗೆ ಶುಭವಾಗಲಿದೆ, ಹೊಸ ಕೆಲಸಕ್ಕೆ ಪ್ರಸ್ತಾಪ ಪಡೆಯುತ್ತೀರಿ. ನಿಮ್ಮ ವರ್ಕಿಂಗ್ ನೆಟ್ವರ್ಕ್ ಬಲವಾಗಿರುತ್ತದೆ. ಹಾಗೆಯೇ ಹೊಸ ಒಪ್ಪಂದ ಕನ್ಫರ್ಮ್ ಆಗುತ್ತದೆ. ಹೂಡಿಕೆ ಮಾಡುವುದಕ್ಕೆ ಇದು ಉತ್ತಮವಾದ ಸಮಯ ಆಗಿದೆ.

ಸಿಂಹ ರಾಶಿ :- ಮಂಗಳನ ಸ್ಥಾನ ಬದಲಾವಣೆ ಸಿಂಹ ರಾಶಿಯವರಿಗೆ ಅದೃಷ್ಟ ತಂದುಕೊಡುತ್ತದೆ. ನಿಂತಿದ್ದ ನಿಮ್ಮ ಕೆಲಸಗಳು ಶುರುವಾಗುತ್ತದೆ. ಅದೃಷ್ಟ ಇರುವುದರಿಂದ ಎಲ್ಲದರಲ್ಲೂ ಯಶಸ್ಸು ಪಡೆಯುತ್ತೀರಿ. ದೂರದ ಊರಿಗೆ ಪ್ರವಾಸಕ್ಕೆ ಹೋಗುತ್ತೀರಿ. ಕುಟುಂಬದ ಸಮಸ್ಯೆಗಳು ಸರಿ ಹೋಗುತ್ತವೆ. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ ಆಗಿದೆ. ದಾಂಪತ್ಯ ಜೀವನ ಚೆನ್ನಾಗಿರುತ್ತದೆ.