ಶೇಕಡಾ 99 % ರಷ್ಟು ಜನ ಮೊಟ್ಟೆ ತಿನ್ನುವಾಗ ಮಾಡುವ ತಪ್ಪುಗಳೇನು ಗೊತ್ತೇ?? ಅಸಲಿಗೆ ನಿಜಕ್ಕೂ ಹೇಗೆ ತಿನ್ನಬೇಕು ಗೊತ್ತೇ??

ಆಹಾರ ಸೇವನೆಯಲ್ಲಿ ಮೂರು ವರ್ಗದ ಜನರಿದ್ದಾರೆ, ಸಸ್ಯಹಾರಿಗಳು, ಮಾಂಸಹಾರಿಗಳು ಹಾಗೂ ಮೊಟ್ಟೆ ತಿನ್ನುವವರು. ಮಾಂಸ ಮಾಂಸಾಹಾರಕ್ಕೆ ಬರುವುದಿಲ್ಲ ಎಂದು ವಿಜ್ಞಾನ ಸಾಬೀತು ಪಡಿಸಿದೆ, ಅದರಿಂದ ಅನೇಕ ಜನರು ಮೊಟ್ಟೆ ತಿನ್ನಲು ಇಷ್ಟಪಡುತ್ತಾರೆ. ಮೊಟ್ಟೆಯಲ್ಲಿ ಪ್ರೊಟೀನ್ ಅಂಶ ಹೆಚ್ಚಾಗಿದೆ, ಹಾಗೆಯೇ ಫಿಟ್ನೆಸ್ ಬಗ್ಗೆ ಕಾಳಜಿ ಇರುವವರಿಗೆ ಬಹಳ ಪ್ರಯೋಜನಕಾರಿಯಾದ ಪದಾರ್ಥ ಆಗಿದೆ. ಮೊಟ್ಟೆಯಲ್ಲಿ ಸಾಕಷ್ಟು ರೀತಿಯ ಜೀವಸತ್ವಗಳು ಹಾಗೂ, ಪೋಷಕಾಂಶ ಇದೆ, ಇದು ಆರೋಗ್ಯಕ್ಕೆ ಮುಖ್ಯ ಆಗಿರುವ ಕಾರಣ ವೈದ್ಯರು ಸಹ ದಿನಕ್ಕೆ ಒಂದು ಮೊಟ್ಟೆ ತಿನ್ನಬೇಕು ಎಂದು ಸೂಚನೆ ನೀಡುತ್ತಾರೆ.

ಮೊಟ್ಟೆ ಸೇವಿಸುವುದರಲ್ಲಿ ಸಹ ಸಾಕಷ್ಟು ವಿಧವಿದೆ, ಕೆಲವರು ಬೇಯಿಸಿ ತಿನ್ನುತ್ತಾರೆ, ಕೆಲವರು ಅರ್ಧ ಬೇಯಿಸಿ ತಿನ್ನುತ್ತಾರೆ, ಕೆಲವರು ಹಸಿ ಮೊಟ್ಟೆ ಸೇವಿಸುತ್ತಾರೆ, ಇನ್ನು ಕೆಲವರು ಎಗ್ ಬುರ್ಜಿ, ಆಮ್ಲೆಟ್ ಮಾಡಿ ತಿನ್ನಲು ಇಷ್ಟಪಡುತ್ತಾರೆ. ವಿವಿಧ ರೀತಿಯಲ್ಲಿ ಮೊಟ್ಟೆ ತಿಂದರು ಸಹ, ಮೊಟ್ಟೆ ಸೇವಿಸಲು ಸರಿಯಾದ ವಿಧಾನ ಇದೆ ಎನ್ನುವ ವಿಚಾರ ನಿಮಗೆ ತಿಳಿದಿದೆಯೇ? ನೀವು ಮೊಟ್ಟೆಯನ್ನು ಸರಿಯಾಗಿ ಸೇವಿಸುತ್ತಿದ್ದೀರಾ? ತಪ್ಪಾದ ರೀತಿಯಲ್ಲಿ ಮೊಟ್ಟೆ ಸೇವಿಸುವುದರಿಂದ ಬಿಮಗೆ ನಷ್ಟ ಆಗಬಹುದು. ಮೊಟ್ಟೆ ಸೇವಿಸಲು ಸರಿಯಾದ ಮಾರ್ಗ ಯಾವುದು? ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಜಿಮ್ ಗೆ ಹೋಗುವವರು, ಕಠಿಣ ಜೀವನ ನಡೆಸುವವರು ಮೊಟ್ಟೆಯನ್ನು ಅರ್ಧ ಬೇಯಿಸಿ ತಿನ್ನುತ್ತಾರೆ, ಆದರೆ ಪೂರ್ತಿ ಬೇಯಿಸಿ ತಿನ್ನುವುದು ಒಳ್ಳೆಯದು ಎಂದು ಹೇಳುತ್ತಾರೆ. ಇದರಿಂದ ಮೊಟ್ಟೆ ಚೆನ್ನಾಗಿ ಜೀರ್ಣವಾಗುತ್ತದೆ. ಸಂಶೋಧನೆಯಲ್ಲಿ ತಿಳಿದುಬಂದಿರುವ ಪ್ರಕಾರ, ಪೂರ್ತಿ ಬೇಯಿಸಿದ ಮೊಟ್ಟೆಯಲ್ಲಿ ಶೇ.91ರಷ್ಟು ಪ್ರೊಟೀನ್ ಇರುತ್ತದೆ, ಅರ್ಧ ಬೇಯಿಸಿದ ಮೊಟ್ಟೆಯಲ್ಲಿ ಶೇ.51ರಷ್ಟು ಪ್ರೊಟೀನ್ ಇರುತ್ತದೆ. ಪ್ರೊಟೀನ್ ಗಾಗಿ ಬೇಯಿಸಿದ ಮೊಟ್ಟೆ ತಿಂದರೆ ಒಳ್ಳೆಯದು. ಬೇಯಿಸಿ ತಿನ್ನುವುದರಲ್ಲಿ, ಮೊಟ್ಟೆಯನ್ನು ಹೆಚ್ಚಿಗೆ ಬೇಯಿಸುವುದು ಸಹ ಒಳ್ಳೆಯದಲ್ಲ, ಅತಿಯಾಗಿ ಬೇಯಿಸುವುದರಿಂದ ಪೋಷಕಾಂಶ ನಾಶವಾಗುತ್ತದೆ. ಇದರಿಂದ ದೇಹಕ್ಕೆ ಯಾವುದೇ ಪ್ರಯೋಜನ ಆಗುವುದಿಲ್ಲ.

ಹೆಚ್ಚಿನ ಸಮಯ ಮೊಟ್ಟೆ ಬೇಯಿಸುವುದರಿಂದ ವೈಟಮಿನ್ ಎ ಕಡಿಮೆ ಆಗುತ್ತದೆ, ಮೊಟ್ಟೆಯನ್ನು ಮೈಕ್ರೋವೇವ್ ಮಾಡುವುದು, ಹೆಚ್ಚಾಗಿ ಕುದಿಸುವುದರಿಂದ ಅಥವಾ ಹುರಿಯುವುದರಿಂದ ಶೇ.6-18ರಷ್ಟು ಉತ್ಕರ್ಷಣವನ್ನು ಕಡಿಮೆ ಮಾಡುತ್ತದೆ. ಮೊಟ್ಟೆ ಸೇವಿಸುವಾಗ ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ, ತೂಕ ಇಳಿಸಿಕೊಳ್ಳಲು ಬಯಸುವವರು ಬೇಯಿಸಿದ ಮೊಟ್ಟೆ ಸೇವಿಸಿ, ಹಾಗೂ ಫ್ರೈಡ್ ಎಗ್, ಸ್ಕ್ರ್ಯಾಂಬಲ್ಡ್ ಎಗ್, ಅಥವಾ ಆಮ್ಲೆಟ್ ಹಾಗೂ ತರಕಾರಿಗಳ ಜೊತೆಗೆ ಸೇವಿಸಬಹುದು. ಹೆಚ್ಚಿನ ಟೆಂಪರೇಚರ್ ನಲ್ಲಿ ಮೊಟ್ಟೆ ಬೇಯಿಸಿದರೆ, ಟೆಂಪರೇಚರ್ ಸ್ಥಿರವಾಗಿ ಇರುವ ಹಾಗೆ ಗಮನವಿಡಿ. ಬೇರೆ ಪದಾರ್ಥಗಳನ್ನು ಬಳಸಿ ಮೊಟ್ಟೆ ತಯಾರಿಸುವಾಗ, ಪ್ಯಾನ್ ನಲ್ಲಿ ಸೂರ್ಯಕಾಂತಿ ಎಣ್ಣೆ ಅಥವಾ ಅವಕಾಡೊ ಎಣ್ಣೆ ಬಳಸಿ.