ನಿಮ್ಮ ಅಡುಗೆ ಮನೆಯಲ್ಲಿ ಅಪ್ಪಿ ತಪ್ಪಿಯೂ ಕೂಡ ಈ ತಪ್ಪುಗಳನ್ನು ಮಾಡಬೇಡಿ, ದುರದೃಷ್ಟ ಹುಡುಕೊಂಡು ಬಂದು ಹೆಗಲೇರುತ್ತದೆ. ತಾಯಿ ಲಕ್ಷ್ಮಿಗೆ ಕೋಪ ಬರುತ್ತದೆ.

ದೊಡ್ಡ ಮನೆ ಇರಲಿ, ಚಿಕ್ಕ ಮನೆ ಇರಲಿ ಒಂದು ಮನೆಯಲ್ಲಿ ಅಡುಗೆಮನೆ ಬಹಳ ಮುಖ್ಯವಾದ ಭಾಗವಾಗಿದೆ. ಅಡುಗೆ ಮನೆಯಲ್ಲಿ ಲಕ್ಷ್ಮೀದೇವಿ ಹಾಗೂ ಅನ್ನಪೂರ್ಣೇಶ್ವರಿ ಇಬ್ಬರು ಸಹ ನೆಲೆಸಿರುತ್ತಾರೆ ಎಂದು ಹೇಳಲಾಗುತ್ತದೆ. ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ಲಕ್ಷ್ಮೀದೇವಿಯ ಕೃಪೆ ನಿಮ್ಮ ಮೇಲಿರುತ್ತದೆ. ಅದೇ ರೀತಿ ಅಡುಗೆ ಮನೆಯಲ್ಲಿ ಮಾಡುವ ಕೆಲವು ತಪ್ಪುಗಳು, ಲಕ್ಷ್ಮೀದೇವಿಯ ಕೋಪಕ್ಕೂ ಕಾರಣವಾಗುತ್ತದೆ. ಇದಕ್ಕೆಲ್ಲ ವಾಸ್ತು ಶಾಸ್ತ್ರದಲ್ಲಿ ಕೆಲವು ವಿಚಾರಗಳನ್ನು ತಿಳಿಸಿದ್ದಾರೆ. ಅವುಗಳು ಏನು? ಯಾವ ತಪ್ಪನ್ನು ಮಾಡದೆ ಇದ್ದರೆ, ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ನೆಲೆಸಬೇಕು ಎಂದರೆ ಅಡುಗೆ ಮನೆಯಲ್ಲಿ ಏನು ಮಾಡಬಾರದು ಎಂದು ತಿಳಿಸುತ್ತೇವೆ ನೋಡಿ..

*ಅಡುಗೆ ಮನೆಯಲ್ಲಿ ಕುಳಿತು ಊಟ ಮಾಡುವ ಅಭ್ಯಾಸ ಇದ್ದರೆ, ಅಡುಗೆ ಮಾಡುವ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕುಳಿತು ಊಟ ಮಾಡಬೇಕು. ಅಡುಗೆ ಮಾಡುವ ಕಡೆ ಕುಳಿತು ಊಟ ಮಾಡಬಾರದು.
*ಅಡುಗೆ ಮನೆಗೆ ಚಪ್ಪಲಿ ಅಥವಾ ಶೂ ಧರಿಸಿ ಹೋಗಬಾರದು. ಅಡುಗೆ ಮನೆಯಲ್ಲಿ ಲಕ್ಷ್ಮೀದೇವಿ ಹಾಗೂ ಅನ್ನಪೂರ್ಣೇಶ್ವರಿ ಇಬ್ಬರು ಸಹ ನೆಲೆಸಿರುತ್ತಾರೆ. ಹಾಗಾಗಿ ಚಪ್ಪಲಿ ಧರಿಸಿ ಅಡುಗೆ ಮನೆಯೊಳಗೆ ಹೋಗುವುದರಿಂದ ಲಕ್ಷ್ಮಿದೇವಿಗೆ ಕೋಪ ಬರುತ್ತದೆ ಹಾಗೆ ಮನೆಯಲ್ಲಿ ಬಡತನ ಶುರುವಾಗುತ್ತದೆ.
*ಅಡುಗೆ ಮನೆ ಎದುರಿನಲ್ಲಿ ಸ್ನಾನದ ಮನೆಯನ್ನು ಇರಬಾರದು. ಅಡುಗೆ ಮನೆ ಹಾಗೂ ಸ್ನಾನಗೃಹ ಎದುರುಬದುರಾಗುವುದರಿಂದ ವಾಸ್ತು ದೋಷ ಶುರುವಾಗುತ್ತದೆ. ಇದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಶುರುವಾಗುತ್ತದೆ.

*ಅಡುಗೆ ಮನೆಯಲ್ಲಿ ದೇವರ ಫೋಟೋ ಇಡುವುದು ಪೂಜೆ ಮಾಡುವುದು ಮಾಡಬಾರದು ಎಂದು ಹೇಳುತ್ತಾರೆ. ಅಡುಗೆ ಮನೆಯಲ್ಲಿ ಈರುಳ್ಳಿ ಬೆಳ್ಳುಳ್ಳಿ ಬಳಸಿ ಅಡುಗೆ ಮಾಡುತ್ತೇವೆ, ಹಾಗೆಯೇ ನಾನ್ ವೆಜ್ ಸಹ ಅಡುಗೆ ಮನೆಯಲ್ಲೇ ಮಾಡುತ್ತೇವೆ, ಹಾಗಾಗಿ ಅಡುಗೆ ಮನೆಯಲ್ಲಿ ದೇವರನ್ನು ಇಡಬಾರದು. ಇದರಿಂದ ಲಕ್ಷ್ಮಿದೇವಿಗೆ ಕೋಪ ಬರುತ್ತದೆ. ಜೊತೆಗೆ ಅಡುಗೆ ಮನೆಯಲ್ಲಿ ಗಲಾಟೆ ಜಾಸ್ತಿ ಇರುತ್ತದೆ, ಹಾಗಾಗಿ ದೇವರನ್ನು ಸ್ವಚ್ಛವಾದ ಹಾಗೂ ಶಾಂತಿ ಇರುವ ಸ್ಥಳದಲ್ಲಿ ಇಡಬೇಕು.
*ಎಂಜಲು ತಟ್ಟೆ ಹಾಗೂ ಕೊಳಕು ಪಾತ್ರೆಗಳನ್ನು ಅಡುಗೆ ಮನೆಯಲ್ಲಿ ಇಡಬಾರದು, ಅವುಗಳನ್ನು ಅಡುಗೆ ಮನೆಯಿಂದ ಹೊರಗಡೆ ಇಡಬೇಕು. ಹಾಗೆಯೇ ಬಿಟ್ಟರೆ ಅಡುಗೆ ಲಕ್ಷ್ಮೀದೇವಿಯ ಕೃಪೆ ಸಿಗುವುದಿಲ್ಲ.