ರಾತ್ರೋ ರಾತ್ರಿ ನಾಗ ಚೈತನ್ಯಗೆ ಕುಲಾಯಿಸಿದ ಅದೃಷ್ಟ: ಮದುವೆಯಾಗಲು ಒಪ್ಪಿದ ಖ್ಯಾತ ನಟಿ: ಯಾರು ಗೊತ್ತೇ?? ಇವರೇ ನಾಗಾರ್ಜುನ ಸೊಸೆ.

ನಟ ನಾಗಚೈತನ್ಯ ಸಮಂತಾ ಅವರಿಗೆ ವಿಚ್ಛೇದನ ಕೊಟ್ಟ ಬಳಿಕ ಹೆಚ್ಚು ಸುದ್ದಿಯಲ್ಲಿದ್ದಾರೆ. ವಿಚ್ಛೇದನದ ನಂತರ ನಟಿ ಸಮಂತಾ ಕೆರಿಯರ್ ಕಡೆಗೆ ಗಮನ ಹರಿಸಿ, ಹೆಚ್ಚು ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ, ಇತ್ತ ನಾಗಚೈತನ್ಯ ಲವ್ ಲೈಫ್ ಇಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ವಿಚ್ಛೇದನ ಪಡೆದ ಕೆಲವೇ ದಿನಗಳಲ್ಲಿ ನಟಿ ಶೋಭಿತ ಧೂಳಿಪಾಲ ಹಾಗೂ ನಾಗಚೈತನ್ಯ ಅವರ ಹೆಸರು ತಗಲು ಹಾಕಿಕೊಂಡಿದೆ, ಇವರಿಬ್ಬರ ಡೇಟಿಂಗ್ ಬಗೆಗಿನ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಸಮಂತಾ ಅವರಿಂದ ದೂರವಾದ ಕೆಲವೇ ಸಮಯದಲ್ಲಿ ಚೈತನ್ಯ ಅವರು ಮತ್ತೊಬ್ಬ ನಟಿಯ ಜೊತೆಗೆ ಕಾಣಿಸಿಕೊಂಡಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿತ್ತು, ಶೋಭಿತ ಅವರ ಜೊತೆಗಿನ ಡೇಟಿಂಗ್ ವಿಚಾರದ ಬಗ್ಗೆ ಚೈತನ್ಯ ಆಗಲಿ, ಶೋಭಿತ ಆಗಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ, ಆದರೆ ಕೆಲವು ದಿನಗಳ ಹಿಂದೆ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಹೈದರಾಬಾದ್ ನ ಜ್ಯುಬಿಲಿ ಹಿಲ್ಸ್ ನಲ್ಲಿ ನಾಗಚೈತನ್ಯ ಹೊಸ ಐಷಾರಾಮಿ ಮನೆ ಖರೀದಿ ಮಾಡಿದ್ದು, ಅದರ ಕೆಲಸಗಳು ನಡೆಯುತ್ತಿದೆ, ಆ ಮನೆಯ ಬಳಿ ನಾಗಚೈತನ್ಯ ಮತ್ತು ಶೋಭಿತ ಜೊತೆಯಾಗಿ ಕಾಣಿಸಿಕೊಂಡಿದ್ದರು.

ಮನೆಯನ್ನು ತೋರಿಸಲು ಶೋಭಿತ ಅವರನ್ನು ನಾಗಚೈತನ್ಯ ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೆ ಇಬ್ಬರು ತುಂಬಾ ಸಂತೋಷವಾಗಿ ಕಾಣಿಸುತ್ತಿದ್ದರು ಎಂದು ಸುದ್ದಿ ಇದೆ, ಬಳಿಕ ಇಬ್ಬರು ಒಂದೇ ಕಾರ್ ನಲ್ಲಿ ಜೊತೆಯಾಗಿ ಹೊರಟಿದ್ದಾರೆ. ಇದನ್ನು ನೋಡಿದ ಬಳಿಕ ಅಕ್ಕಿನೇನಿ ಕುಟುಂಬದ ಸೊಸೆ ಇವರೇ ಎನ್ನುವ ಮಾತುಗಳು ಕೇಳಿಬರುತ್ತಿವೆ. ಚೈತನ್ಯ ಅವರೊಡನೆ ಮದುವೆಯಾಗಲು ಶೋಭಿತ ಒಪ್ಪಿಗೆ ನೀಡಿದ್ದಾರಾ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ, ಆದರೆ ಈ ಸುದ್ದಿಯಂತೂ ಜೋರಾಗಿಯೇ ಸದ್ದು ಮಾಡುತ್ತಿದೆ.