ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಇದ್ದರೇ, ತಾಯಿ ಲಕ್ಷ್ಮಿ ದೇವಿಯ ಕೃಪೆ ಪಡೆಯಲು ಈ ಚಿಕ್ಕ ವಸ್ತು ಮನೆಗೆ ತನ್ನಿ ಸಾಕು. ಹಣ ಹುಡುಕಿಕೊಂಡು ಬರುತ್ತದೆ.

ಪ್ರತಿಯೊಬ್ಬ ವ್ಯಕ್ತಿಯು ಕಷ್ಟಪಟ್ಟು ಕೆಲಸ ಮಾಡುವುದು ಹಣಕ್ಕಾಗಿ, ಜೀವನ ನಡೆಸಲು ಬಹುಮುಖ್ಯವಾದ ವಸ್ತು ಹಣ ಆಗಿರುತ್ತದೆ. ಆದರೆ ಕಲವೊಮ್ಮೆ ಎಷ್ಟೇ ಸಂಪಾದನೆ ಮಾಡಿದರು ಸಹ ಹಣ ಉಳಿಸಲು ಸಾಧ್ಯ ಆಗುವುದಿಲ್ಲ, ಯಾವುದಾದರೂ ಒಂದು ರೀತಿಯಲ್ಲಿ ಹಣ ಖರ್ಚಾಗಿ ಹೋಗುತ್ತದೆ. ಇದಕ್ಕೆ ಮನೆಯೊಳಗಿನ ವಾಸ್ತು ಸಮಸ್ಯೆ ಸಹ ಕಾರಣವಾಗಿರಬಹುದು. ಹಾಗಾಗಿ ನಿಮ್ಮ ಮನೆಯಲ್ಲಿ ಕೆಲವು ವಸ್ತುಗಳನ್ನು ತಂದು ಇಟ್ಟರೆ, ವಾಸ್ತು ಸಮಸ್ಯೆ ಕಡಿಮೆಯಾಗಿ, ಲಕ್ಷ್ಮಿದೇವಿಯ ಕೃಪೆ ನಿಮ್ಮ ಮೇಲಿರುತ್ತದೆ. ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಆ ವಸ್ತುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

*ನಿಮ್ಮ ಮನೆಯ ಮುಖ್ಯ ಬಾಗಿಲಿನ ಎರಡು ಕಡೆ ಗಣೇಶನ ಫೋಟೋ ಅಥವಾ ಮೂರ್ತಿ ಇಡುವುದರಿಂದ ವಾಸ್ತು ದೋಷ ನಿವಾರಣೆ ಆಗುತ್ತದೆ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ.
*ಸಂಪತ್ತು ಸಮೃದ್ಧಿಯ ಸಂಕೇತ ಆಗಿರುವ ತುಳಸಿಯನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಇದರಿಂದ ನಿಮ್ಮ ಮನೆಯಲ್ಲಿ ವಾಸ್ತುದೋಷ ಕಡಿಮೆ ಆಗುತ್ತದೆ, ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಹಾಗೂ ಮನೆಗೆ ಹಣ ಬರುತ್ತದೆ.
*ಮನೆಯ ಈಶಾನ್ಯ ದಿಕ್ಕನ್ನು ಕುಬೇರ ಆಳುತ್ತಾನೆ. ಕುಬೇರ ಸಮೃದ್ಧಿ ಮತ್ತು ಸಂಪತ್ತಿನ ಸಂಕೇತ. ಮನೆಯಲ್ಲಿ ಸಮೃದ್ಧಿ ಹೆಚ್ಚಾಗಲು ಉತ್ತರ ದಿಕ್ಕಿನಲ್ಲಿ ಕುಬೇರನ ಫೋಟೋ ಇಡಿ.

*ಈಶಾನ್ಯ ದಿಕ್ಕಿನಲ್ಲಿ, ಟಾಯ್ಲೆಟ್, ಶೂ ರಾಕ್, ಚೇರ್ ಅಥವಾ ಟೇಬಲ್ ಗಳನ್ನು ಇಡಬೇಡಿ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
*ಬೆಲೆಬಾಳುವ ವಸ್ತುಗಳು, ಹಣ, ದಾಖಲೆಗಳನ್ನು ನೈಋತ್ಯ ಮೂಲೆಯಲ್ಲಿ ಇಡಬೇಕು. ಲಾಕರ್ ನ ಬಾಗಿಲು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ತೆಗೆಯುವ ರೀತಿಯಲ್ಲಿ ಇರಬೇಕು. ಇದರಿಂದ ನಿಮಗೆ ಹಣದ ಸಮಸ್ಯೆ ಉಂಟಾಗುವುದಿಲ್ಲ.
*ಮನೆಯಲ್ಲಿ ದೇವರ ಎದುರು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ದೀಪ ಹಚ್ಚಿ, ಇದರಿಂದ ಮನೆಯಲ್ಲಿ ಶುದ್ಧತೆ ಇರುತ್ತದೆ.
*ಮನೆಯಲ್ಲಿ ಲಕ್ಷ್ಮೀದೇವಿಯ ಫೋಟೋ ಅಥವಾ ವಿಗ್ರಹ ಇಡಿ. ಇದರಿಂದ ಮನೆಯ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.