SIIMA ಅವಾರ್ಡ್ಸ್ ನಲ್ಲಿ ಕನ್ನಡಿಗರಿಗೆ ಮತ್ತೆ ಮೋಸ: ದರ್ಶನ್ ರವರಿಗೆ ಕೂಡ ಬಾರಿ ಹಿನ್ನೆಡೆ. ಅವಾರ್ಡ್ಸ್ ಸಮಾರಂಭದಲ್ಲಿ ನಡೆದದ್ದೇನು ಗೊತ್ತೇ??

ಸೈಮಾ ಅವಾರ್ಡ್ಸ್ ಕಾರ್ಯಕ್ರಮ ಈ ಬಾರಿ ಬೆಂಗಳೂರಿನಲ್ಲಿ ನಡೆಯಿತು. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದ ಅವಾರ್ಡ್ ಸಮಾರಂಭಕ್ಕೆ ಬೇರೆ ಭಾಷೆಯ ಕಲಾವಿದರೆಲ್ಲರು ಬೆಂಗಳೂರಿಗೆ ಬಂದು ಅವಾರ್ಡ್ ಸ್ವೀಕರಿಸಿದರು. ಕರ್ನಾಟಕದಲ್ಲಿ ಈ ಬಾರಿ ಸೈಮಾ ಅವಾರ್ಡ್ಸ್ ನಡೆದಿದ್ದು ವಿಶೇಷ. ಇದೆ ಮೊದಲ ಬಾರಿಗೆ ನಟ ದರ್ಶನ್ ಅವರು ಅವಾರ್ಡ್ ಶೋ ಒಂದಕ್ಕೆ ಆಗಮಿಸಿದ್ದರು. ಅವರ ರಾಬರ್ಟ್ ಸಿನಿಮಾ 10 ಕ್ಯಾಟಗರಿಯಲ್ಲಿ ನಾಮಿನೇಟ್ ಆಗಿದ್ದರು ಸಹ, ಅವಾರ್ಡ್ ಪಡೆದದ್ದು ಮೂರು ಕ್ಯಾಟಗರಿಯಲ್ಲಿ ಮಾತ್ರ ಆಗಿದೆ.

ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಛಾಯಾಗ್ರಾಹಕ ಹಾಗೂ ಅತ್ಯುತ್ತಮ ಸಂಗೀತ ನಿರ್ದೇಶಕ ಅವಾರ್ಡ್ ರಾಬರ್ಟ್ ಸಿನಿಮಾ ಗೆದ್ದಿತು. ದರ್ಶನ್ ಅವರು ಬಂದಿದ್ದ ಕಾರಣ ಅವರಿಗೆ ಅತ್ಯುತ್ತಮ ನಟ ಅವಾರ್ಡ್ ಬರಬಹುದು ಎಂದೇ ಎಲ್ಲರು ಅಂದುಕೊಂಡಿದ್ದರು. ಆದರೆ ಅತ್ಯುತ್ತಮ ನಟ ಅವಾರ್ಡ್ ಬಂದದ್ದು ಡಾ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ, ಅಪ್ಪು ಅವರಿಗೆ ಅವಾರ್ಡ್ ಬಂದಿದ್ದು ಒಳ್ಳೆಯದೇ ಆಗಿದೆ, ಆದರೆ ಬೇರೆ ಭಾಷೆಯಲ್ಲಿ ಇಬ್ಬರು ನಟರಿಗೆ ಅತ್ಯುತ್ತಮ ಅವಾರ್ಡ್ ನೀಡಲಾಗಿದೆ. ತೆಲುಗಿನಲ್ಲಿ ಅತ್ಯುತ್ತಮ ನಟ ಅವಾರ್ಡ್ ಅಲ್ಲು ಅರ್ಜುನ್ ಹಾಗೂ ಅತ್ಯುತ್ತಮ ನಟ ಕ್ರಿಟಿಕ್ಸ್ ಅವಾರ್ಡ್ ನವೀನ್ ಪೋಲಿಶೆಟ್ಟಿ ಅವರಿಗೆ ಸಿಕ್ಕಿದೆ.

ತಮಿಳಿನಲ್ಲಿ ಅತ್ಯುತ್ತಮ ನಟ ಅವಾರ್ಡ್ ಶಿವಕಾರ್ತಿಕೇಯನ್, ಅತ್ಯುತ್ತಮ ನಟ ಕ್ರಿಟಿಕ್ಸ್ ಅವಾರ್ಡ್ ಆರ್ಯ ಅವರಿಗೆ ಸಿಕ್ಕಿದೆ, ಮಲಯಾಳಂ ನಲ್ಲಿ ಅತ್ಯುತ್ತಮ ನಟ ಅವಾರ್ಡ್ ಟೊವಿನೋ ಥಾಮಸ್ ಅವರಿಗೆ, ಅತ್ಯುತ್ತಮ ನಟ ಕ್ರಿಟಿಕ್ಸ್ ಅವಾರ್ಡ್ ಬಿಜು ಮೆನನ್ ಅವರಿಗೆ ಸಿಕ್ಕಿದೆ. ಹೀಗೆ ಕನ್ನಡದಲ್ಲಿ ಕ್ರಿಟಿಕ್ಸ್ ಅವಾರ್ಡ್ ಯಾಕೆ ನೀಡಿಲ್ಲ ಎನ್ನುವ ಪ್ರಶ್ನೆ ಈಗ ಶುರುವಾಗಿದ್ದು, ಹಾಗೊಂದು ವೇಳೆ ಕನ್ನಡದಲ್ಲಿ ಕ್ರಿಟಿಕ್ಸ್ ಅವಾರ್ಡ್ ನೀಡಿದ್ದರೆ ದರ್ಶನ್ ಅವರಿಗೆ ಖಂಡಿತವಾಗಿ ಅವಾರ್ಡ್ ಬರುತ್ತಿತ್ತು ಎಂದು ಹೇಳುತ್ತಿದ್ದಾರೆ ಅಭಿಮಾನಿಗಳು. ಕನ್ನಡದಲ್ಲಿ ನಾಯಕಿಯರಿಗೆ ಅತ್ಯುತ್ತಮ ನಟಿ ಆಶಿಕಾ ರಂಗನಾಥ್, ಅತ್ಯುತ್ತಮ ನಟಿ ಕ್ರಿಟಿಕ್ಸ್ ಅವಾರ್ಡ್ ಅಮೃತಾ ಅಯ್ಯಂಗಾರ್ ಅವರಿಗೆ ಸಿಕ್ಕಿತು, ನಾಯಕನಟ ವಿಚಾರದಲ್ಲಿ ಕನ್ನಡದ ನಟರಿಗೆ ಯಾಕೆ ಎರಡು ಅವಾರ್ಡ್ ಕೊಡಲಿಲ್ಲ ಎನ್ನುವ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.