ದುಬಾರಿ ಸೀರಿಯಲ್ಲಿ ಥೇಟ್ ರಂಬೆಯಂತೆ ಕಾಣಿಸ್ಕೊಂಡರು. ಈ ಸೀರೆ ಬೆಲೆ ಕೇಳಿದರೆ ಮೈಂಡ್ ಬ್ಲಾಕ್ ಆಗುತ್ತದೆ. ಎಷ್ಟು ಗೊತ್ತೇ??

ನಟಿ ರಮ್ಯಾಕೃಷ್ಣ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ, 80ರ ದಶಕದಿಂದ ಈಗಿನವರೆಗೂ ರಮ್ಯಾಕೃಷ್ಣ ಅವರು ಅದೇ ಬೇಡಿಕೆ ಚಾರ್ಮ್ ಉಳಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣ ಅವರು 90ರ ದಶಕದ ಸಿನಿಪ್ರಿಯರ ಕನಸಿನ ರಾಣಿ ಆಗಿದ್ದವರು, ಈಗಿನ ಜೆನೆರೇಷನ್ ನಲ್ಲಿ ಶಿವಗಾಮಿ ಎಂದೇ ಗುರುತಿಸಿಕೊಂಡಿದ್ದಾರೆ. ಬಾಹುಬಲಿ ಸಿನಿಮಾದ ಶಿವಗಾಮಿ ಪಾತ್ರ, ರಮ್ಯಾಕೃಷ್ಣ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ಕೀರ್ತಿ ಗೌರವ ತಂದುಕೊಟ್ಟಿತು.

ಅದಾದ ಬಳಿಕ ರಮ್ಯಾಕೃಷ್ಣನ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಇವರು ಅಭಿನಯಿಸಿದ ಲೈಗರ್ ಸಿನಿಮಾ ಫ್ಲಾಪ್ ಆಯಿತು, ಆದರೆ ರಮ್ಯಾಕೃಷ್ಣ ಅವರಿಗೆ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ, ಸಿನಿಮಾ ಮಾತ್ರವಲ್ಲದೆ ಈಗ ರಿಯಾಲಿಟಿ ಶೋನಲ್ಲಿ ಸಹ ರಮ್ಯಾಕೃಷ್ಣ ಅವರು ಜಡ್ಜ್ ಆಗಿ ಕಾಣಿಸಿಕೊಳ್ಳುವ ಮೂಲಕ ಜನರಿಗೆ ಹೆಚ್ಚು ಹತ್ತಿರವಾಗುತ್ತಿದ್ದಾರೆ, ಟಾಲಿವುಡ್ ನಲ್ಲಿ ಒಂದಲ್ಲಾ ಒಂದು ವಿಚಾರದಿಂದ ಸುದ್ದಿಯಾಗುವ ರಮ್ಯಾಕೃಷ್ಣ ಅವರು ಇದೀಗ ಸೀರೆ ವಿಚಾರಕ್ಕೆ ಭಾರಿ ಸುದ್ದಿಯಲ್ಲಿದ್ದಾರೆ.

ರಮ್ಯಾ ಕೃಷ್ಣ ಅವರು ಒಂದು ಡ್ಯಾನ್ಸ್ ಶೋ ಗೆ ಜಡ್ಜ್ ಆಗಿ ಬಂದಿದ್ದಾರೆ. ಈ ಡ್ಯಾನ್ಸ್ ಶೋಗೆ ಅವರು ದುಬಾರಿ ಬೆಲೆ ಬಾಳುವ ಡಿಸೈನರ್ ಸೀರೆಯೊಂದನ್ನು ಧರಿಸಿ ಬಂದಿದ್ದು, ಪಿಂಕ್ ಬಣ್ಣದ ಸೀರೆಯಲ್ಲಿ 51ರ ಹರೆಯದಲ್ಲೂ 20ರ ಹರೆಯದ ಹುಡುಗಿಯಾಗಿ ಕಾಣಿಸುತ್ತಾರೆ ರಮ್ಯಾಕೃಷ್ಣ. ಈ ಸೀರೆಯಲ್ಲಿ ಫೋಟೋಶೂಟ್ ಸಹ ಮಾಡಿಸಿದ್ದು, ಫೋಟೋಗಳು ವೈರಲ್ ಆಗಿದೆ. ಅಭಿಮಾನಿಗಳು ಸಹ ಈ ಫೋಟೋಸ್ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ರಮ್ಯಾಕೃಷ್ಣ ಅವರು ಧರಿಸಿರುವ ಈ ಸೀರೆಯ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿರುವುದಂತು ನಿಜ. ಈ ಪಿಂಕ್ ಬಣ್ಣದ ಸೀರೆಯ ಬೆಲೆ ಬರೋಬ್ಬರಿ 2 ಲಕ್ಷ ರೂಪಾಯಿ ಎಂದು ಈಗ ಮಾಹಿತಿ ಸಿಕ್ಕಿದೆ.