ಸಮಂತಾ ಕೋಟಿ ಕೋಟಿ ದುಡಿದು ಆ ಹಣವೆನ್ನು ಏನು ಮಾಡುತ್ತಾರೆ ಗೊತ್ತೇ?? ತಿಳಿದರೆ ಭೇಷ್ ಏನಂತೀರಾ. ಈಕೆಯೇ ತೆಲುಗಿನ ಅಪ್ಪು ಎಂದರೆ ತಪ್ಪಲ್ಲ.

ನಟಿ ಸಮಂತಾ ಟಾಲಿವುಡ್ ನಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ ಎನ್ನುವುದು ಗೊತ್ತಿರುವ ವಿಷಯ. ಅದರಲ್ಲು ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನ ಪಡೆದ ನಂತರ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ ಸಮಂತಾ. ನತ್ ಸಮಂತಾ ಅತಿ ಕಡಿಮೆ ಸಮಯದಲ್ಲಿ ನಾಯಕಿಯ ಪಟ್ಟದಿಂದ ಸ್ಟಾರ್ ಹೀರೋಯಿನ್ ಆಗಿಡ್ದ್ದಾರೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಅವಕಾಶ ಪಡೆದು ಟಾಲಿವುಡ್ ನಲ್ಲಿ ಅಗ್ರಸ್ಥಾನದಲ್ಲಿ ನಿಂತಿದ್ದಾರೆ.

ಸಿನಿಮಾದಲ್ಲಿ ಉತ್ತಮ ಫಾರ್ಮ್‌ ನಲ್ಲಿರುವಾಗಲೇ ಅಕ್ಕಿನೇನಿ ನಾಗಚೈತನ್ಯ ಅವರನ್ನು ಪ್ರೀತಿಸುತ್ತಿದ್ದರು ಸ್ಯಾಮ್, ಸುಮಾರು ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, 2017ರ ಅಕ್ಟೋಬರ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2021ರ ಅಕ್ಟೋಬರ್ ನಲ್ಲಿ ಇವರಿಬ್ಬರು ಬೇರೆಯಾಗಿರುವ ವಿಚಾರ ತಿಳಿಸಿದರು. ವಿಚ್ಛೇದನವ ಘೋಷಿಸಿದ ನಂತರ ಸ್ಯಾಮ್ ಯಾವ ಹಾದಿಯಲ್ಲಿದ್ದಾರೆ? ಸಮಂತಾ ಸದ್ಯ ತೆಲುಗು ಜೊತೆಗೆ ತಮಿಳು ಮತ್ತು ಹಿಂದಿ ಭಾಷೆ ಸಿನಿಮಾಗಳಲ್ಲಿ ಮಾತ್ರವಲ್ಲದೆ ಹಾಲಿವುಡ್ ನಲ್ಲಿ ಸಹ ಸಮಂತಾ ನಟಿಸುತ್ತಿದ್ದಾರೆ. ಗುಣಶೇಖರ್ ನಿರ್ದೇಶನದ ಶಾಕುಂತಲಂ ಮತ್ತು ಹರಿ ಹರೀಶ್ ನಿರ್ದೇಶನದ ಯಶೋಧ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಇದೆಲ್ಲದರ ನಡುವೆ ಸಮಂತಾ ಅವರಿಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಟಾಲಿವುಡ್‌ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯರ ಪಟ್ಟಿಯಲ್ಲಿ ಸಮಂತಾ ಮೊದಲ ಸ್ಥಾನದಲ್ಲಿದ್ದಾರೆ. ಸಮಂತಾ ಯಾವುದಕ್ಕೆ ಹಣ ಖರ್ಚು ಮಾಡಿದ್ದಾರೆ ಎನ್ನುವ ಶಾಕಿಂಗ್ ವಿಷಯಗಳು ಈಗ ವೈರಲ್ ಆಗುತ್ತಿವೆ. ಸಮಂತಾ ಅವರು ತಮ್ಮ ದುಡಿಮೆಯ ಬಹುಪಾಲು ಹಣವನ್ನು ದೇಣಿಗೆ ರೂಪದಲ್ಲಿ ಖರ್ಚು ಮಾಡುತ್ತಿದ್ದಾರೆ. ಸಮಂತಾ ಅವರ ಸಮಾಜ ಸೇವೆಯ ಕೆಲಸಗಳ ಬಗ್ಗೆ ಅನೇಕರಿಗೆ ತಿಳಿದಿದೆ. ಸಮಂತಾ ಅವರು ಪ್ರತ್ಯೂಷಾ ಮೂಲಕ ತಮ್ಮ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಸಮಂತಾ ಪ್ರತಿ ಸಿನಿಮಾಗೆ 3 ಕೋಟಿಯವರೆಗೂ ಸಂಭಾವನೆ ಪಡೆಯುತ್ತಿದ್ದಾರೆ. ಇವರಲ್ಲಿ ಹೆಚ್ಚಿನ ಪಾಲು ಸಮಾಜ ಸೇವಾ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತಿರುವುದು ತಿಳಿದುಬಂದಿದ್ದು, ಸಮಂತಾ ಅಭಿಮಾನಿಗಳು ಹೆಮ್ಮೆ ಪಡುತ್ತಿದ್ದಾರೆ.