ನಿಮ್ಮ ಮನೆಯಲ್ಲಿ ಸದಾ ತಾಯಿ ಲಕ್ಷ್ಮಿ ದೇವಿ ನೆಲೆಸಿರಬೇಕು ಎಂದರೆ, ನೀವು ಬೇರೆ ಏನು ಬೇಡ. ಜಸ್ಟ್ ಈ ಕೆಲಸ ಮಾಡಿ ಸಾಕು

ಎಲ್ಲಾರು ಜೀವನದಲ್ಲಿ ಕಷ್ಟಪಡುವುದು ಒಳ್ಳೆಯ ರೀತಿಯಲ್ಲಿ ಐಶಾರಾಮಿಯಾಗಿ ಜೀವನ ಸಾಗಿಸಲು. ಲಕ್ಷ್ಮೀದೇವಿಯ ಕೃಪೆ ಇದ್ದರೆ ಜನರ ಜೀವನ ಬಹಳ ಚೆನ್ನಾಗಿರುತ್ತದೆ. ಲಕ್ಷ್ಮೀದೇವಿಯ ಆಶೀರ್ವಾದ ಇದ್ದರೆ ಒಬ್ಬ ವ್ಯಕ್ತಿಯ ಜೀವನದಲ್ಲಿ ಯಾವುದೇ ಕೊರತೆ ಅಥವಾ ಸಮಸ್ಯೆ ಇರುವುದಿಲ್ಲ. ಆದರೆ ಲಕ್ಷ್ಮೀದೇವಿ ಎಲ್ಲರಿಗು ಒಲಿಯುವುದಿಲ್ಲ. ಬಹಳ ಚಂಚಲೆ ಆಗಿರುವ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವುದು ಬಹಳ ಕಷ್ಟ. ಆದರೆ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಲು ಹಾಗೂ ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಲು ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯನೀತಿಯಲ್ಲಿ ಕೆಲವು ವಿಚಾರಗಳನ್ನು ತಿಳಿಸಿದ್ದಾರೆ. ಅವುಗಳನ್ನು ಅನುಸರಿಸಿದರೆ, ಲಕ್ಷ್ಮೀದೇವಿಯ ಆಶೀರ್ವಾದ ನಿಮ್ಮ ಮೇಲಿರುವುದು ಖಂಡಿತ. ಚಾಣಕ್ಯರು ತಿಳಿಸಿರುವ ಆ ವಿಚಾರಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

*ಕುಟುಂಬದಲ್ಲಿರುವ ಎಲ್ಲಾ ಸದಸ್ಯರು, ಸಂತೋಷದಿಂದ ಇದ್ದರೆ, ಕುಟುಂಬದಲ್ಲಿ ಒಗ್ಗಟ್ಟು ಇದ್ದರೆ, ಆ ಮನೆಯಲ್ಲಿ ಧನಾತ್ಮಕ ಶಕ್ತಿ ಇರುತ್ತದೆ, ಅಲ್ಲಿ ಲಕ್ಷ್ಮೀದೇವಿಯ ಆಶೀರ್ವಾದ ಇರುತ್ತದೆ. ಇಂತಹ ಮನೆಯಲ್ಲಿ ಯಾವುದೇ ಕೊರತೆ ಇರುವುದಿಲ್ಲ. ಮನೆಯವರು ಏಳಿಗೆ ಹೊಂದುತ್ತಾರೆ, ಸಂಪತ್ತಿಗೆ ಯಾವುದೇ ಸಮಸ್ಯೆ ಇರುವುದಿಲ್ಲ.
*ಜ್ಞಾನ ಹೊಂದಿರುವವರು ಹಾಗೂ ಮಹಾತ್ಮರು ಹೇಳಿರುವ ಮಾತುಗಳನ್ನು ಅನುಸರಿಸಿ, ಗೌರವಿಸುವವರ ಮನೆಯಲ್ಲಿ ಲಕ್ಷ್ಮೀದೇವಿಯ ಆಶೀರ್ವಾದ ಯಾವಾಗಲೂ ಇರುತ್ತದೆ, ಲಕ್ಷ್ಮೀದೇವಿಯ ಆಶೀರ್ವಾದ ಸದಾ ಇರುತ್ತದೆ.

*ಮೂರ್ಖರ ಮಾತುಗಳಿಗೆ ಗಮನ ಕೊಡದೆ ತಮ್ಮ ಜೀವನದ ಬಗ್ಗೆ ಒಳ್ಳೆಯ ರೀತಿಯಲ್ಲಿ ಯೋಚನೆ ಮಾಡುವ ಜನರ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸಿರುತ್ತಾಳೆ..ಅಂತಹ ಮನೆಯಲ್ಲಿ ಲಕ್ಷ್ಮೀದೇವಿ ಸಂತೋಷವಾಗಿರುತ್ತಾಳೆ.
*ಹಿರಿಯರು ಮತ್ತು ಮಕ್ಕಳಿಗೆ ಗೌರವ ನೀಡುವವರ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸಿರುತ್ತಾಳೆ.
*ಆಹಾರಕ್ಕಾಗಿ ಅನ್ನಕ್ಕಾಗಿ ಕಷ್ಟಪಟ್ಟು ಕೆಲಸ ಮಾಡುವವರ ಮನೆಯಲ್ಲಿ ತಾಯಿ ಅನ್ನಪೂರ್ಣೇಶ್ವರಿಯ ಸದಾ ಇರುತ್ತದೆ. ಲಕ್ಷ್ಮೀದೇವಿಯ ಆಶೀರ್ವಾದ ಸಹ ಇಂಥವರ ಮನೆಯಲ್ಲಿ ಸದಾ ಇರುತ್ತದೆ. ಇವರ ಮನೆಯಲ್ಲಿ ಧಾನ್ಯ ಎಂದಿಗೂ ಖಾಲಿ ಆಗುವುದಿಲ್ಲ.