ರಾತ್ರೋ ರಾತ್ರಿ ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ: ಎನ್ಟಿಆರ್ ಜೊತೆ ನಟಿಸಲು ಕೇಳಿದ ಸಂಭಾವನೆ ಕೇಳಿ ದೇಶವೇ ಶಾಕ್. ಎಷ್ಟು ಬೇಕಂತೆ ಗೊತ್ತೇ??

ನಟಿ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತ ಚಿತ್ರರಂಗ ಮತ್ತು ಬಾಲಿವುಡ್ ಎಲ್ಲ ಕಡೆ ಕಾಣಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಎಲ್ಲಾ ಎಲ್ಲಾ ಸಿನಿಮಾ ಇಂಡಸ್ಟ್ರಿಗಳಲ್ಲೂ ಹಿಟ್ ನೀಡಿರುವ ನಾಯಕಿ ರಶ್ಮಿಕಾ ಮಂದಣ್ಣ. ಕನ್ನಡದಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಮಾಡಿ ಹಿಟ್ ಕಂಡ ರಶ್ಮಿಕಾ ಮಂದಣ್ಣ, ಬಳಿಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಅಲ್ಲಿ ಕೂಡ ಯಶಸ್ಸು ಪಡೆದರು ರಶ್ಮಿಕಾ, ಬಳಿಕ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು.

ಅದರಲ್ಲು ಪುಷ್ಪ ಸಿನಿಮಾ ರಶ್ಮಿಕಾ ಅವರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ಮತ್ತು ಕ್ರೇಜ್ ನೀಡಿತು. ಈ ಸಿನಿಮಾ ಇಂದಲೇ ರಶ್ಮಿಕಾ ಅವರಿಗೆ ಬಾಲಿವುಡ್ ನಲ್ಲಿ ಸಹ ಬೇಡಿಕೆ ಹೆಚ್ಚಾಯಿತು ಎಂದರೆ ತಪ್ಪಾಗುವುದಿಲ್ಲ. ರಶ್ಮಿಕಾ ಅವರು ಇಂದು ಬಾಲಿವುಡ್ ನಲ್ಲಿ ಒಂದು ಮ್ಯೂಸಿಕ್ ವಿಡಿಯೋ, ಗುಡ್ ಬೈ ಎನ್ನುವ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಅವರೊಡನೆ, ಹಾಗೂ ಮಿಷನ್ ಮಜ್ನು ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರೊಡನೆ ನಟಿಸಿದ್ದಾರೆ. ರಣಬೀರ್ ಕಪೂರ್ ಅವರೊಡನೆ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ತಮಿಳಿನಲ್ಲಿ ನಟ ವಿಜಯ್ ಅವರೊಡನೆ ವಾರಿಸು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನು ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ಅವರ 30ನೇ ಸಿನಿಮಾದಲ್ಲಿ ನಟಿಸಲು ರಶ್ಮಿಕಾ ಅವರಿಗೆ ಅವಕಾಶ ಸಿಕ್ಕಿದೆ ಎನ್ನಲಾಗಿದ್ದು, ಈ ಸಿನಿಮಾಗೆ ರಶ್ಮಿಕಾ ಅವರು ಭಾರಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಪುಷ್ಪ ಸಿನಿಮಾ ಸಕ್ಸಸ್ ನಂತರ ರಶ್ಮಿಕಾ ಅವರು ಸಂಭಾವನೆ ಹೆಚ್ಚಿಸಿಕೊಂಡಿದ್ದು, ಜ್ಯೂನಿಯರ್ ಎನ್.ಟಿ.ಆರ್ ಅವರ ಸಿನಿಮಾಗೆ 5 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದು, ನಿರ್ದೇಶಕ ಕೊರಟಾಲ ಶಿವ ಅವರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮೊದಲಿಗೆ ಈ ಸಿನಿಮಾಗೆ ನಾಯಕಿಯಾಗಿ ಸೀತಾರಾಮಂ ಸಿನಿಮಾ ಜಾಯಕಿ ಮೃಣಾಲ್ ಠಾಕೋರ್ ಅವರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿತ್ತು, ಆದರೆ ಈಗ ರಶ್ಮಿಕಾ ಅವರು ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ.