ಈ ಬಟ್ಟೆಯ ಮೀಟರ್ ಚಿಕ್ಕದು, ಆದರೆ ಮ್ಯಾಟರ್ ದೊಡ್ಡದು. ದರ್ಶನ್ ಐರಾವತ ಬೆಡಗಿ ನಟಿ ಊರ್ವಶಿ ಧರಿಸಿದ ಬಟ್ಟೆಯ ಬೆಲೆ ಕೇಳಿದರೆ ತಲೆ ದಿಮ್ ಅನ್ನುತ್ತದೆ. ಎಷ್ಟು ಗೊತ್ತೇ??

ಬಾಲಿವುಡ್ ನಟಿ ಊರ್ವಶಿ ರೌಟೇಲ ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲಾ ಒಂದು ವಿಚಾರಗಳಿಂದ ಸುದ್ದಿಯಲ್ಲಿರುತ್ತಾರೆ. ಊರ್ವಶಿ ಅವರು ಕನ್ನಡದಲ್ಲಿ ನಟ ದರ್ಶನ್ ಅವರೊಡನೆ ಐರಾವತ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದ್ದರು. ಇತ್ತೀಚೆಗೆ ತಮಿಳಿನ ದಿ ಲೆಜೆಂಡ್ ಸಿನಿಮಾದಲ್ಲಿ ಸಹ ಕಾಣಿಸಿಕೊಂಡರು. ಊರ್ವಶಿ ಅವರು ತಮ್ಮ ಉತ್ತಮವಾದ ಅಭಿನಯ ಮತ್ತು ಹಾಟ್ ಲುಕ್ಸ್ ಇಂದ ಅಭಿಮಾನಿಗಳನ್ನು ಸೆಳೆಯುತ್ತಾರೆ.

ಸೋಷಿಯಲ್ ಮೀಡಿಯಾದಲ್ಲಿ ಹಲವು ಫೋಟೋಶೂಟ್ ನ ಫೋಟೋಗಳನ್ನು ಊರ್ವಶಿ ರೌಟೇಲ ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಇವರು ಶಾರ್ಟ್ ಡ್ರೆಸ್ ಒಂದರ ಫೋಟೋಗಳನ್ನು ಶೇರ್ ಮಾಡಿದ್ದು, ಈ ಡ್ರೆಸ್ ನೋಡಲು ಬಹಳ ಶಾರ್ಟ್ ಎನ್ನಿಸಿದರು, ಡ್ರೆಸ್ ನ ಬೆಲೆ ಬಹಳ ದುಬಾರಿಯಾಗಿದ್ದು, ಬೆಲೆ ತಿಳಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಹಲವರು ಈ ಡ್ರೆಸ್ ನ ಫೋಟೋಗಳಿಗೆ ಕಮೆಂಟ್ಸ್ ಬರೆದಿದ್ದು, ಊರ್ವಶಿ ಅವರು ಈ ಡ್ರೆಸ್ ನಲ್ಲಿ ನಿಜವಾಗಿಯೂ ಸ್ವರ್ಗದಿಂದಲೇ ಧರೆಗಿಳಿದು ಬಂದಿರುವ ಊರ್ವಶಿಯ ಹಾಗೆ ಕಾಣಿಸುತ್ತಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ.

ಮಾದಕ ಕಣ್ಣಿನ ನೋಟದಿಂದಲೇ ಹುಡುಗರನ್ನು ಸೆಳೆಯುತ್ತಾರೆ ಊರ್ವಶಿ. ಇನ್ಸ್ಟಾಗ್ರಾಮ್ ನಲ್ಲಿ ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿದ್ದಾರೆ. ಈ ದುಬಾರಿ ಡ್ರೆಸ್ ಧರಿಸಿ ಬೋಲ್ಡ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ ನಟಿ ಊರ್ವಶಿ ರೌಟೇಲ. ಈ ಡ್ರೆಸ್ ಅನ್ನು ಸ್ಪೆಶಲ್ ಆಗಿ ಡಿಸೈನ್ ಮಾಡಲಾಗಿದ್ದು, ಚಿಕ್ಕದಾಗಿ ಸಕ್ಕತ್ತಾಗಿರುವ ಈ ಮಿನಿ ಬೀಜ್ ಡ್ರೆಸ್ ಅನ್ನು ರಫಲ್ಸ್ ಹಾಗೂ ವಜ್ರದ ಅಲಂಕಾರ ಮಾಡಲಾಗಿದೆ, ಈ ಡ್ರೆಸ್ ನ ಬೆಲೆ ಬರೋಬ್ಬರಿ 5 ಲಕ್ಷ ಎಂದು ತಿಳಿದುಬಂದಿದ್ದು, ಡ್ರೆಸ್ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.