ಟಿ ಆರ್ ಪಿ ತಂದುಕೊಟ್ಟ ವಂಶಿಕಾಗೆ ವಾಹಿನಿ ಕೊಟ್ಟ ಹಣವೇಷ್ಟು ಗೊತ್ತಾ?? ನಿಜವಾದ ಹಣ ತಿಳಿದರೆ ಶಾಕ್ ಆಗ್ತೀರಾ

ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿ ಎಲ್ಲರ ಮನಗೆದ್ದಿರುವ ಮುದ್ದು ಮಗು ವಂಶಿಕಾ ಅಂಜನಿ ಕಶ್ಯಪ. ನನ್ನಮ್ಮ ಸೂಪರ್ ಸ್ಟಾರ್ ಶೋ ಮೂಲಕ ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ದಂಪತಿಯ ಈ ಮುದ್ದು ಮಗು ಕಿರುತೆರೆಗೆ ಎಂಟ್ರಿ ಕೊಟ್ಟಿತು, ಯಶಸ್ವಿನಿ ಆನಂದ್ ಹಾಗೂ ವಂಶಿ ಈ ಶೋ ಇಂದ ಮನೆಮಾತಾದರು. ಅದರಲ್ಲೂ ವಂಶಿಯ ಪಟಪಟ ಮಾತುಗಳನ್ನ ಕೇಳಿ ಎಂಜಾಯ್ ಮಾಡದೆ ಇರುವವರು ಸಾಧ್ಯವಿಲ್ಲ. ನನ್ನಮ್ಮ ಸೂಪರ್ ಸ್ಟಾರ್ ಶೋನ ವಿಜೇತಳಾಗಿ ಹೊರಹೊಮ್ಮಿದಳು ವಂಶಿಕಾ.

ಬಳಿಕ ವಂಶಿ ಕಲರ್ಸ್ ಕನ್ನಡ ವಾಹಿನಿಯ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಕಾಣಿಸಿಕೊಂಡಳು. ಈ ಶೋನಲ್ಲಿ ವಂಶಿಕಾ ಅಭಿನಯ ನೋಡಿ ಜಡ್ಜ್ ಗಳು, ಶೋಗೆ ಬರುವ ಗೆಸ್ಟ್ ಗಳು ಎಲ್ಲರೂ ಸಹ ಫಿದಾ ಆಗಿದ್ದರು. ಶಾಲೆಗೆ ಹೋಗುತ್ತಲೇ ಈ ಶೋಗಳಲ್ಲಿ ಭಾಗವಹಿಸುತ್ತಿದ್ದಳು ವಂಶಿ. ಇದೀಗ ಈ ಶೋ ಸಹ ಮುಗಿದಿದ್ದು, ವಂಶಿಕಾ ಹಾಗೂ ಶಿವು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಆಕ್ಟರ್ ವಿಭಾಗದಲ್ಲಿ ವಂಶಿ, ನಾನ್ ಆಕ್ಟರ್ ವಿಭಾಗದಲ್ಲಿ ಶಿವು ವಿನ್ನರ್ ಆಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಟಿ.ಆರ್.ಪಿ ಮರಳಿ ಬಂದಿದ್ದು ವಂಶಿಕಾ ಇಂದ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ವಂಶಿ ಗೆದ್ದ ನಂತರ ವಾಹಿನಿಯ ಕಡೆಯಿಂದ ದೊಡ್ಡ ಮೊತ್ತವೆ ಸಿಕ್ಕಿದೆ ಎಂದು ವರದಿಯ ಪ್ರಕಾರ ತಿಳಿದುಬಂದಿದೆ. ರಿಯಾಲಿಟಿ ಶೋಗಳು ಮುಗಿದ ನಂತರ ವಂಶಿ ಇವ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾಳೆ., ನಟ ವಸಿಷ್ಠ ಸಿಂಹ ಅವರು ಅಭಿನಯಿಸಿರುವ ಲವ್ಲಿ ಸಿನಿಮಾದಲ್ಲಿ ನಟಿಸುತ್ತಿದ್ದಾಳೆ ವಂಶಿಕಾ. ಕಿರುತೆರೆ ಬಳಿಕ ಈಗ ಬೆಳ್ಳಿತೆರೆಯಲ್ಲೂ ಮೋಡಿ ಮಾಡಲು ತಯಾರಾಗಿದ್ದಾಳೆ ಈ ಪುಟ್ಟ ಪೋರಿ.