ಖ್ಯಾತ ನಟ ದರ್ಶನ್ ಹಾಗೂ ಅಣ್ಣಾವ್ರ ಮಕ್ಕಳ ಬಗ್ಗೆ ಹಿರಿಯ ನಟಿ ಶೃತಿ ಹೇಳಿದ್ದೇನು ? ನೆಪೋಟಿಸಂ ಬಗ್ಗೆ ಕೋಪದಿಂದ ಹೇಳಿದ್ದೇನು??

ಈ ನೆಪೋಟಿಸಂ ಎನ್ನುವ ಶಬ್ಧ ಇತ್ತೀಚಿನ ವರ್ಷಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದರಲ್ಲೂ ಬಾಲಿವುಡ್ ನಲ್ಲಿ ನೆಪೋಟಿಸಂ ಬಗ್ಗೆ ಬಹಳಷ್ಟು ವಿವಾದಗಳನ್ನು ಕೇಳಿದ್ದೇವೆ, ಸ್ಟಾರ್ ಕಲಾವಿದರ ಮಕ್ಕಳು ಸಿನಿಮಾಗಳಲ್ಲಿ ನಟಿಸಿದರೆ ನೆಪೋಟಿಸಂ, ನೆಪೋ ಕಿಡ್ ಎಂದು ಕರೆಯುತ್ತಾರೆ. ಈ ರೀತಿಯ ನೆಪೋಟಿಸಂ ವಿವಾದಗಳು ಬಾಲಿವುಡ್ ಬಿಟ್ಟರೆ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಸಾರಿ ಕೇಳಿಬಂದಿದೆ. ಕನ್ನಡ ಚಿತ್ರರಂಗದಲ್ಲು ಸಹ ನೆಪೋಟಿಸಂ ವಿಚಾರ ಸದ್ದು ಮಾಡಿದೆ, ಡಾ.ರಾಜ್ ಕುಮಾರ್ ಅವರ ಮಕ್ಕಳು ಎನ್ನುವ ಕಾರಣಕ್ಕೆ ಶಿವಣ್ಣ, ರಾಘಣ್ಣ ಹಾಗೂ ಅಪ್ಪು ಅವರು ಸ್ಟಾರ್ ನಟರಾದರು ಎಂದು ಮಾತುಗಳಿಗೆ.

ಇದೀಗ ಆ ವಿಚಾರದ ಬಗ್ಗೆ ಹಾಗೂ ನಟ ದರ್ಶನ್ ಅವರ ಬಗ್ಗೆ, ನೆಪೋಟಿಸಂ ಬಗ್ಗೆ ಕನ್ನಡದ ಖ್ಯಾತ ಹಿರಿಯನಟಿ ಶ್ರುತಿ ಮಾತನಾಡಿದ್ದಾರೆ, ತಮ್ಮ ಸಹೋದರ ನಟ ಶರಣ್ ಅವರ ಗುರು ಶಿಷ್ಯರು ಸಿನಿಮಾ ಬಿಡುಗಡೆಯಾಗಿ, ಸಿನಿಮಾ ನೋಡಲು ಬಂದ ನಟಿ ಶ್ರುತಿ ಅವರು ಈ ವಿಚಾರಗಳ ಬಗ್ಗೆ ಮಾಧ್ಯಮದ ಎದುರು ಮಾತನಾಡಿದ್ದಾರೆ. “ನೆಪೋಟಿಸಂ ಅಂತ ಕೂತಿದ್ರೆ ಅಣ್ಣಾವ್ರ ಮಕ್ಕಳನ್ನ ನೋಡೋದಕ್ಕೆ ಆಗ್ತಾ ಇತ್ತಾ..ಶಿವಣ್ಣ ಅವರನ್ನ ನೋಡೋದಕ್ಕೆ ಆಗ್ತಾ ಇತ್ತಾ.. ದರ್ಶನ್ ಅವರನ್ನ ನೋಡೋದಕ್ಕೆ ಆಗ್ತಾ ಇತ್ತಾ.. ಒಂದು ಕುಟುಂಬದಲ್ಲಿ ಅವಕಾಶ ಸಿಕ್ಕಿದ್ರೆ ಸೆಲೆಬ್ರಿಟಿ ಆಗೋದಿಲ್ಲ . ಜನರು ಕೈಹಿಡಿಯಬೇಕು.. ಪ್ರತಿಭೆ ಇದ್ರೆ ಮಾತ್ರ ಚಿತ್ರರಂಗದಲ್ಲಿ ಉಳಿಯೋದಕ್ಕೆ ಸಾಧ್ಯ..” ಎಂದಿದ್ದಾರೆ ನಟಿ ಶ್ರುತಿ.

ನಟ ದರ್ಶನ್ ಅವರು ಕನ್ನಡದ ಖ್ಯಾತ ಹಿರಿಯನಟ ತೂಗುದೀಪ ಶ್ರೀನಿವಾಸ್ ಅವರ ಮಗ ಆಗಿದ್ದರು ಸಹ, ಅವರು ಚಿತ್ರರಂಗಕ್ಕೆ ಬರುವುದು ಸುಲಭ ಆಗಿರಲಿಲ್ಲ. ಬಹಳ ಕಷ್ಟಪಟ್ಟು ಇಂದು ದೊಡ್ಡ ಸ್ಟಾರ್ ಆಗಿದ್ದಾರೆ. ಅದೇ ರೀತಿ ಅಣ್ಣಾವ್ರ ಮಕ್ಕಳಾದ ಶಿವಣ್ಣ, ರಾಘಣ್ಣ ಹಾಗೂ ಅಪ್ಪು ಅವರು ಕೂಡ ತಮ್ಮ ಪ್ರತಿಭೆಯಿಂದ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದರು. ಈ ನೆಪೋಟಿಸಂ ಎಂದು ಹೇಳುವವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ನಟಿ ಶ್ರುತಿ.