ಕನ್ನಡದಲ್ಲೂ ಸ್ವಜನಪಕ್ಷಪಾತ/ನೆಪೋಟಿಸ್ಮ್ ಬಗ್ಗೆ ಮಾತನಾಡಿದ ಶ್ರುತಿ, ಅಣ್ಣಾವ್ರ ಮಕ್ಕಳು, ದರ್ಶನ್ ಬಗ್ಗೆ ಹೇಳಿದ್ದೇನು ಗೊತ್ತೇ??

ನೆಪೋಟಿಸಂ ಎನ್ನುವುದು ಇತ್ತೀಚಿನ ದಿನಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ವಿಷಯ ಹೆಚ್ಚು ಚರ್ಚೆ ಆಗುತ್ತಿರುವುದು ಸಿನಿಮಾ ಕ್ಷೇತ್ರದಲ್ಲಿ, ಕಲಾವಿದರ ಮಕ್ಕಳು ಸಿನಿಮಾರಂಗಕ್ಕೆ ಬಂದರೆ, ನೆಪೋಟಿಸಂ, ನೆಪೋ ಕಿಡ್ ಎಂದು ಕಿಡಿಕಾರಲು ಶುರು ಮಾಡುತ್ತಾರೆ. ಇಂತಹ ವಿಚಾರಗಳು ಹೆಚ್ಚು ಸುದ್ದಿಯಾಗಿದ್ದು ಬಾಲಿವುಡ್ ನಲ್ಲಿ, ನಂತರ ತೆಲುಗಿನಲ್ಲಿ ನೆಪೋಟಿಸಂ ವಿಚಾರ ಭಾರಿ ಚರ್ಚೆಗೆ ಒಳಗಾಗಿತ್ತು. ಕನ್ನಡ ಚಿತ್ರರಂಗವದಲ್ಲಿ ಸಹ ಈ ನೆಪೋಟಿಸಂ ಎನ್ನುವ ವಿಚಾರ ಭಾರಿ ಸುದ್ದಿಯಾಗಿದೆ, ಅದು ಅಣ್ಣಾವ್ರ ಮಕ್ಕಳ ವಿಚಾರದಲ್ಲಿ.

ಅಣ್ಣಾವ್ರ ಮಕ್ಕಳು ಎನ್ನುವ ವಿಚಾರಕ್ಕೆ ಶಿವಣ್ಣ, ರಾಘಣ್ಣ, ಅಪ್ಪು ಮೂವರು ಸಹ ಸ್ಟಾರ್ ಆದರು ಎನ್ನುವ ಮಾತುಗಳು ಕೇಳಿಬಂದಿದ್ದವು, ಇದೀಗ ನಟಿ ಶ್ರುತಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಶ್ರುತಿ ಅವರ ಸಹೋದರ ನಟ ಶರಣ್ ಅವರ ಗುರು ಶಿಷ್ಯರು ಸಿನಿಮಾ ನಿನ್ನೆಯಷ್ಟೇ ತೆರೆಕಂಡಿದೆ. ಈ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ನಟರ ಮಕ್ಕಳು ಅಭಿನಯಿಸಿರುವುದು ವಿಶೇಷ, ಮಕ್ಕಳ ಅಭಿನಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಶ್ರುತಿ ಅವರು, ನೆಪೋಟಿಸಂ ಬಗ್ಗೆ ಮಾತನಾಡಿ, ಆ ರೀತಿ ಹೇಳುವವರ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

“ನೆಪೋಟಿಸಂ ಅಂತ ಅದರ ಬಗ್ಗೆ ಚರ್ಚೆ ಮಾಡ್ಕೊಂಡು ಕೂತಿದ್ರೆ, ಅಣ್ಣಾವ್ರ ಮಕ್ಕಳನ್ನ ನಾವು ನೋಡೋದಕ್ಕೆ ಆಗುತ್ತಾ ಇತ್ತಾ? ಶಿವಣ್ಣ ಅವರನ್ನ ನೋಡೋದಕ್ಕೆ ಆಗ್ತಾ ಇತ್ತ? ದರ್ಶನ್ ಅವರನ್ನ ನೋಡೋದಕ್ಕೆ ಆಗ್ತಾ ಇತ್ತಾ? ಕುಟುಂಬದಿಂದ ಅವಕಾಶ ಸಿಕ್ಕ ಮಾತ್ರಕ್ಕೆ ಏನು ಆಗುವುದಿಲ್ಲ, ಪ್ರತಿಭೆ ಇದ್ದರೆ ಮಾತ್ರ ಚಿತ್ರರಂಗದಲ್ಲಿ ಉಳಿದುಕೊಳ್ಳಲು ಸಾಧ್ಯ. ಒಂದು ಅವಕಾಶದಿಂದ ಯಾರು ಸ್ಟಾರ್ ಆಗೋದಕ್ಕೆ ಸಾಧ್ಯ ಇಲ್ಲ. ಪಾತ್ರಕ್ಕಾಗಿ ಎಷ್ಟು ಕಷ್ಟಪಡ್ತಾರೆ, ಪಾತ್ರವನ್ನ ಎಷ್ಟು ಪ್ರೀತಿ ಮಾಡಿ, ಪಾತ್ರಕ್ಕೆ ಜೀವ ಕೊಡ್ತಾರೆ ಎನ್ನುವುದರ ಮೇಲೆ ಎಲ್ಲವೂ ನಿರ್ಧಾರ ಆಗುತ್ತದೆ..” ಎಂದು ನೆಪೋಟಿಸಂ ಬಗ್ಗೆ ಖಡಕ್ ಆಗಿ ಮಾತನಾಡಿದ್ದಾರೆ ನಟಿ ಶ್ರುತಿ.