ದಿನೇಶ್ ಕಾರ್ತಿಕ್ ರವರು ಪ್ರತಿ ಟೂರ್ನಿಯಲ್ಲೂ ಎಲ್ಲರಿಗಿಂತ ವಿಭಿನ್ನ ಹೆಲ್ಮೆಟ್ ಧರಿಸುವುದು ಯಾಕೆ ಗೊತ್ತೇ?? ಇದರ ವಿಶೇಷತೆ ಏನು ಗೊತ್ತೇ??

ದಿನೇಶ್ ಕಾರ್ತಿಕ್ ಅವರು ಎಂಥಹ ಅದ್ಭುತವಾದ ಆಟಗಾರ ಎಂದು ನಮಗೆಲ್ಲ ಗೊತ್ತಿದೆ. 36ನೇ ವಯಸ್ಸಿನಲ್ಲಿ ಬೇರೆ ಕ್ರಿಕೆಟಿಗರು ನಿವೃತ್ತಿ ಬಗ್ಗೆ ಯೋಚನೆ ಮಾಡಿದರೆ, ದಿನೇಶ್ ಕಾರ್ತಿಕ್ ಅವರು ವಿಶ್ವಕಪ್ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ. ಫಿನಿಷರ್ ಆಗಿ ಭಾರತ ತಂಡಕ್ಕೆ ಪಂದ್ಯಗಳನ್ನು ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಪಂದ್ಯದಲ್ಲಿ 6 ಬಾಲ್ ಗಳಿಗೆ 9 ರನ್ ಅಗತ್ಯವಿದ್ದಾಗ, ಕ್ರೀಸ್ ಗೆ ಬಂದ ದಿನೇಶ್ ಕಾರ್ತಿಕ್ ಅವರು ಮೊದಲ ಬಾಲ್ ನಲ್ಲಿ ಸಿಕ್ಸರ್ ಭಾರಿಸಿ, ಎರಡನೇ ಬಾಲ್ ಬಾಲ್ ನಲ್ಲಿ ಬೌಂಡರಿ ಭಾರಿಸಿ, ಎರಡೇ ಬಾಲ್ ಗಳಲ್ಲಿ ಪಂದ್ಯವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.

ನೀವು ದಿನೇಶ್ ಕಾರ್ತಿಕ್ ಅವರು ಬ್ಯಾಟಿಂಗ್ ಮಾಡುವುದನ್ನು ಗಮನಿಸಿದ್ದರೆ, ದಿನೇಶ್ ಕಾರ್ತಿಕ್ ಅವರು ಧರಿಸುವ ಹೆಲ್ಮೆಟ್ ಬೇರೆ ರೀತಿಯೇ ಇರುತ್ತದೆ. ಅವರ ಹೆಲ್ಮೆಟ್ ಯಾಕೆ ವಿಭಿನ್ನವಾಗಿದೆ, ಎಂದು ತಿಳಿದುಕೊಳ್ಳುವ ಆಸಕ್ತಿ ಹಲವರಿಗೆ, ಅದರ ಬಗ್ಗೆ ಇಂದು ತಿಳಿಸುತ್ತೇವೆ ನೋಡಿ.. ಕಾರ್ತಿಕ್ ಅವರು ಧರಿಸುವ ಹೆಲ್ಮೆಟ್ ಬೇಸ್ ಬಾಲ್ ಹಾಗು ಅಮೆರಿಕಾದವರ ಫುಟ್ ಬಾಲ್ ಮ್ಯಾಚ್ ಆಡುವಾಗ ಧರಿಸುವ ಹೆಲ್ಮೆಟ್ ರೀತಿ ಇರುತ್ತದೆ, ಈ ಹೆಲ್ಮೆಟ್ ಗೋಳಾಕಾರದಲ್ಲಿ ಇರುತ್ತದೆ, ಹಾಗೂ ಕೇಂದ್ರ ಉಬ್ಬು ಇರುವುದಿಲ್ಲ. ಡಿಕೆ ಅವರ ಹೆಲ್ಮೆಟ್ ನಲ್ಲಿ ಬಾಲ್ ವಿರುದ್ಧ ರಕ್ಷಣೆ ಪಡೆಯಲು ಹೆಚ್ಚು ಲೋಹದ ಗ್ರಿಲ್ ಗಳನ್ನು ಹೊಂದಿದೆ. ದಿನೇಶ್ ಕಾರ್ತಿಕ್ ಅವರು ಸಾಮಾನ್ಯ ಹೆಲ್ಮೆಟ್ ಗಿಂತ ಹೆಚ್ಚಾಗಿ ಇವುಗಳನ್ನು ಯಾಕೆ ಪ್ರಿಫರ್ ಮಾಡುತ್ತಾರೆ ಎನ್ನುವುದಕ್ಕೆ ಕೆಲವು ಕಾರಣ ಇದೆ.

*ಕಾರ್ತಿಕ್ ಅವರು ಧರಿಸುವ ಹೆಲ್ಮೆಟ್ ತಲೆಯ ಮೇಲೆ ಬಹಳ ಕಂಫರ್ಟಬಲ್ ಆಗಿ ಕೂರುತ್ತದೆ, ಹಾಗೂ ದಕ್ಷವಾಗಿ ಕಾರ್ಯ ನಿರ್ವಹಿಸುತ್ತದೆ. *ದಿನೇಶ್ ಕಾರ್ತಿಕ್ ಅವರು ಧರಿಸುವ ಹೆಲ್ಮೆಟ್ ಬೇರೆ ಹೆಲ್ಮೆಟ್ ಗಳಿಗಿಂತ ಹೆಚ್ಚು ಹಗುರವಾಗಿ ಇರುತ್ತದೆ. *ಈ ಸಾಧನದ ಮೇಲ್ಭಾಗ, ಬದಿಗಳು ಹಾಗು ಹಿಂಭಾಗದಲ್ಲಿ ಇರುವ ಸಣ್ಣ ಅಂತರ ವಾತಾಯನ ಹಾಗು ಬೆವರು ಆವಿ ಆಗುವುದನ್ನು ಸುಧಾರಣೆ ಮಾಡುತ್ತದೆ. *ಭಾರತ ತಂಡದ ಹೊಸ ನೀಲಿ ಜೆರ್ಸಿ ಪರಿಣಾಮದ ಕಾರಣ, ಫ್ಲಡ್ ಲೈಟ್ ಗಳಿಂದ ದಿನೇಶ್ ಕಾರ್ತಿಕ್ ಅವರ ಹೆಲ್ಮೆಟ್ ಸೂರ್ಯನ ಹಾಗೆ ಹೊಳೆಯುತ್ತದೆ. ಈ ಬಣ್ಣ ಎಲ್ಲಕ್ಕಿಂತ ಹೆಚ್ಚು ಎದ್ದು ಕಾಣುತ್ತದೆ. *ಇದೇ ಮೊದಲಲ್ಲ, ಈ ಹಿಂದೆ ಕೂಡ ದಿನೇಶ್ ಕಾರ್ತಿಕ್ ಅವರು ಐಪಿಎಲ್ ನಲ್ಲಿ ಹಾಗೂ ಇನ್ನಿತರ ಪಂದ್ಯಗಳಲ್ಲಿ ಇಂಥದ್ದೇ ಹೆಲ್ಮೆಟ್ ಧರಿಸಿದ್ದಾರೆ.