ನಿಮ್ಮ ಹಣೆಬರಹ ಬದಲಾಯಿಸಿ, ಅದೃಷ್ಟ ಪಡೆಯಬೇಕು ಎಂದರೆ ಈ ಹೂ ಜೊತೆ ಈ ಚಿಕ್ಕ ಕೆಲಸ ಮಾಡಿ ಸಾಕು. ಬಡತನ ಹೋಗಿ, ಶ್ರೀಮಂತರಾಗುತ್ತೀರಿ.

ದಾಸವಾಳ ಹೂವಿಗೆ ಬಹಳ ಮಹತ್ವ ಇದೆ. ಈ ಹೂವನ್ನು ಔಷಧಿಯಾಗಿ ಬಳಸಲಾಗುತ್ತದೆ. ದಾಸವಾಳ ಬಳಸುವುದರಿಂದ ದಾರಿದ್ರ್ಯ ಕೂಡ ನಿವಾರಣೆ ಆಗುತ್ತದೆ ಹಾಗು ಲಕ್ಷ್ಮೀದೇವಿಯ ಕೃಪೆ ಸಹ ಸಿಗುತ್ತದೆ. ಈ ಹೂವನ್ನು ಬಳಸಿ ಸುಖ, ಶಾಂತಿ, ಸಮೃದ್ಧಿಯನ್ನು ಹೇಗೆ ಪಡೆಯಬಹುದು ಎನ್ನುವ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ.. ನಿಮಗೆ ಆರ್ಥಿಕವಾಗಿ ತೊಂದರೆ ಇದ್ದು, ಅದರಿಂದ ಪರಿಹಾರ ಪಡೆದುಕೊಳ್ಳಲು ನೀವು ಕಷ್ಟಪಡುತ್ತಿದ್ದರೆ, ದಾಸವಾಳ ಹೂವಿನಿಂದ ನಿಮ್ಮ ಆರ್ಥಿಕ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಈ ಹೂವು ವಿಭಿನ್ನ ಬಣ್ಣಗಳಲ್ಲಿ ಸಿಗುತ್ತದೆ. ಆದರೆ ಆರ್ಥಿಕ ಸಮಸ್ಯೆ ನಿವಾರಣೆಗೆ ಕೆಂಪು ಬಣ್ಣದ ದಾಸವಾಳ ಹೂವನ್ನೇ ಬಳಸಬೇಕು., ಇದರಿಂದ ಬಡತನ ನಿವಾರಣೆ ಆಗುತ್ತದೆ.

ಶುಕ್ರವಾರದ ದಿನ ನಿಮ್ಮ ಮನೆಗೆ ಹತ್ತಿರ ಇರುವ ದೇವಸ್ಥಾನಕ್ಕೆ ಹೋಗಿ, ಅಲ್ಲಿನ ಮಾತೃದೇವತೆಗೆ ಕೆಂಪು ಬಣ್ಣದ ದಾಸವಾಳದ ಹೂವನ್ನು ಅರ್ಪಿಸಿ, ಆದರ ಜೊತೆಗೆ ಸಕ್ಕರೆ ಮಿಠಾಯಿ, ಬತ್ತಾಸು, ಅಥವಾ ಹಾಲು ಬಳಸಿ ಮಾಡಿದ ಬರ್ಫಿಯನ್ನು ದೇವರಿಗೆ ಪೂಜೆ ಮಾಡುವಾಗ ಅರ್ಪಣೆ ಮಾಡಿ. ಕನಿಷ್ಟಪಕ್ಷ 11 ಶುಕ್ರವಾರಗಳು ಇದೇ ರೀತಿ ಮಾಡಬೇಕು. ಪ್ರತಿ ಶುಕ್ರವಾರ ನೀವು ಈ ರೀತಿ ಮಾಡಿದರೆ, ನೀವು ಊಹಿಸದ ಹಾಗೆ ಎಲ್ಲಿಂದಲಾದರು ಹಣ ಬರುತ್ತದೆ. ನಿಮ್ಮ ಜೀವನದ ಯಾವುದೇ ಸಮಯದಲ್ಲಿ ಲಕ್ಷ್ಮೀದೇವಿಯ ಆಶೀರ್ವಾದ ನಿಮಗೆ ಸಿಗುತ್ತದೆ.

ದಾಸವಾಳ ಹೂವಿನಿಂದ ಸೂರ್ಯನ ಪೂಜೆ ಮಾಡುವುದರಿಂದ ಸೂರ್ಯದೇವನ ಆಶೀರ್ವಾದ ಸಿಗುತ್ತದೆ, ಸೂರ್ಯದೇವನು ತನ್ನ ಹಾಗೆಯೇ ನಿಮಗೆ ಕಾಂತಿ ನೀಡುತ್ತಾನೆ. ಸೂರ್ಯನ ಹಾಗೆ ಕಾಂತಿಯುತವಾಗಿರಲು, ಸೂರ್ಯೋದಯ ಆಗುವುದಕ್ಕಿಂತ ಮೊದಲೇ ಎದ್ದು, ಸೂರ್ಯನಿಗೆ ನೀರನ್ನು ಅರ್ಪಣೆ ಮಾಡಿ, ಅದರಲ್ಲಿ ಕೆಂಪು ಬಣ್ಣದ ದಾಸವಾಳವನ್ನು ಇಡಿ. ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಪವಾಡ ನಡೆಯುವುದು ಗ್ಯಾರಂಟಿ. ಒಂದು ವೇಳೆ ನಿಮ್ಮ ಜಾತಕದಲ್ಲಿ ಸೂರ್ಯನ ದೋಷ ಇದ್ದರೆ, ನಿಮ್ಮ ಮನೆಯ ಪೂರ್ವ ದಿಕ್ಕಿನಲ್ಲಿ ದಾಸವಾಳ ಗಿಡ ನೆಟ್ಟರೆ ಒಳ್ಳೆಯದು. ಈ ಗಿಡವು ಮನೆಯಲ್ಲಿ ನೆಗಟಿವಿಟಿ ತೆಗೆದುಹಾಕಿ, ಪಾಸಿಟಿವಿಟಿ ಆಗಿ ಪರಿವರ್ತಿಸುತ್ತದೆ, ಹಾಗೂ ಸೂರ್ಯನ ಹಾಗೆ ಶಕ್ತಿ ನೀಡುತ್ತದೆ. ಒಂದು ವೇಳೆ ನಿಮ್ಮ ಮಗು ಓದಿನ ಕಡೆಗೆ ಆಸಕ್ತಿ ತೋರಿಸುತ್ತಾ ಇಲ್ಲದೆ ಹೋದರೆ, ಅವರ ಸ್ಟಡಿ ಟೇಬಲ್ ಮೇಲೆ ದಾಸವಾಳದ ಕೆಂಪು ಹೂವು ಇಡಿ. ಇದರಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಹಾಗೂ ಓದಿನ ಕಡೆಗೆ ಆಸಕ್ತಿ ಬರುತ್ತದೆ.